25.09.2024 : ಕತ್ತೆ ಹಾಲಿನಲ್ಲಿ ಪೌಷ್ಟಿಕ ಅಂಶಗಳು, ಔಷಧೀಯ ಗುಣಗಳು ಹೇರಳವಾಗಿವೆ ಎಂಬ ವಿಜ್ಞಾನಿಗಳ ಅಭಿಮತದಿಂದ ಹೈನು ಉದ್ಯಮದಲ್ಲಿ ಅವುಗಳನ್ನು ಬಳಸಿಕೊಳ್ಳುವ ಪ್ರಯತ್ನಗಳು ದೇಶದ ಅನೇಕ ಕಡೆ ಸುದ್ದಿ ಮಾಡುತ್ತಿವೆ.
ಗುಜರಾತಿನಲ್ಲಿ ಕತ್ತೆ ಹಾಲನ್ನು ಸಂಸ್ಕರಿಸಿ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿದ್ದ ರೈತ ಉದ್ಯಮಿಯ ಸಾಹಸಗಾಥೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಚಾರವಾಗಿತ್ತು. ಮಂಗಳೂರು ಸಮೀಪದ ಸಾಹಸಿ ರೈತರೊಬ್ಬರುಇಪ್ಪತ್ತು ಕತ್ತೆಗಳ ಫಾರ್ಮ್ ಆರಂಭಿಸಿರುವುದು ವೈಯಕ್ತಿಕ ಸಾಧನೆಯ ಪ್ರಕರಣಗಳಲ್ಲಿ ಗಮನಾರ್ಹವಾದುದು. ಕತ್ತೆ ಹಾಲನ್ನು ಸಂಸ್ಕರಿಸಿ ಸೂಪರ್ ಮಾರ್ಕೆಟ್, ಮಾಲ್ ಮತ್ತು ಅಂಗಡಿಗಳಿಗೆ ಪೂರೈಕೆ ಮಾಡುವ ಮೂಲಕ ಕತ್ತೆ ಹಾಲಿನ ಉದ್ಯಮ ಲಾಭದಾಯಕವಾಗಿರುವುದು ಮಾಧ್ಯಮಗಳಲ್ಲಿ ದಾಖಲಾಗುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕತ್ತೆ ಹಾಲಿಗೆ ಬೇಡಿಕೆ ಸೃಷ್ಟಿಯಾಗಿದ್ದು ಲೀಟರ್ ಹಾಲಿಗೆ ಮೂರು ಸಾವಿರ ರೂಪಾಯಿಯಷ್ಟು ಗಳಿಕೆ ಕತ್ತೆಯ ಪೊàಷಕರಿಗೆ ಸಿಗುತ್ತಿರುವ ವರದಿಗಳಿವೆ. ಮೂವತ್ತು ಮಿಲಿಲೀಟರ್ ಕತ್ತೆ ಹಾಲಿನ ಸ್ಯಾಶೆಗೆ ನೂರೈವತ್ತು ರೂಪಾಯಿ ಸಿಗುತ್ತಿರುವುದು ಕತ್ತೆಗಳ ಸಾಕಣೆ, ಪೊàಷಣೆಗೆ ಉತ್ತೇಜನ ಕಾರಿಯಾದ ಅಂಶವಾಗಿದೆ. ಸೌಂದರ್ಯ ವರ್ಧಕವಾಗಿ ಕತ್ತೆ ಹಾಲಿನ ಬಳಕೆಯೂ ಅದರ ಬೇಡಿಕೆಯನ್ನು ಹೆಚ್ಚಿಸಿದೆ. ಹಸುವಿನ ಹಾಲಿಗೆ ಮೂವತ್ತರಿಂದ ಮೂವತ್ತೈದು ರೂಪಾಯಿ ಪಡೆಯುವವವರಿಗೆ ಲೀಟರ್ ಹಾಲಿಗೆ ಎರಡೂವರೆಯಿಂದ ಮೂರು ಸಾವಿರದವರೆಗೆ ಆದಾಯತರುವ ಕತ್ತೆ ಸಾಕಣೆ ಸಹಜವಾಗಿಯೇ ಆಕರ್ಷಕವಾಗುತ್ತದೆ. ಕತ್ತೆ ಹಾಲಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ನಿರ್ಲಕ್ಷಿತ ಸಾಕು ಪ್ರಾಣಿಯಾಗಿ ಕಡೆಗಣನೆಗೆ ಒಳಗಾಗಿರುವ ಕತ್ತೆಯ ಸಾಕಣೆಗೆ ಬೇಡಿಕೆ ಹೆಚ್ಚುವ ಸಾಧ್ಯತೆಗಳಿವೆ.
ರಾಜ್ಯದಲ್ಲಿ ಹತ್ತು ವರ್ಷಗಳ ಹಿಂದೆ ಸುಮಾರು ನಾಲ್ಕು ಲಕ್ಷದಷ್ಟಿದ್ದ ಕತ್ತೆಗಳ ಸಂಖ್ಯೆ ಈಚೆಗೆ ಒಂದೂವರೆ ಲಕ್ಷಕ್ಕೆ ಇಳಿದಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಕತ್ತೆಗಳ ಸೇವೆಯನ್ನು ಬಳಸುತ್ತಿದ್ದ ಅಗಸರ ವೃತ್ತಿಈಚಿನ ವರ್ಷಗಳಲ್ಲಿ ಬೇಡಿಕೆ ಕಳೆದುಕೊಂಡಿರುವುದರಿಂದ ಅದು ಕತ್ತೆಗಳ ಸಂಖ್ಯೆ ಕುಸಿತಕ್ಕೆ ಕಾರಣವಾಗಿರುವುದೆಂದು ಹೇಳಲಾಗಿದೆ. ಸರಕು ಸಾಗಣೆಗೆ ಹೆಚ್ಚಾಗಿ ಬಳಕೆಯಾಗದ, ಕೃಷಿ ಕೆಲಸಕ್ಕೂ ಬಾರದಕತ್ತೆಯ ಸಾಕಣೆ ಗ್ರಾಮೀಣ ಸಮುದಾಯಗಳಿಗೆ ಲಾಭದಾಯಕವಲ್ಲ ಎಂಬ ನಂಬಿಕೆ ದೃಢವಾಗಿತ್ತು. ಆದರೆ ಈಚಿನ ವರ್ಷಗಳಲ್ಲಿ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಾಗಿ ಅದು ಲಾಭದಾಯಕವೆಂಬ ಸಂಗತಿ ಪ್ರಚಾರ ಪಡೆದುಕೊಳ್ಳುತ್ತಿದ್ದಂತೆ ಕತ್ತೆಯ ಮೂಲಕ ವ್ಯಾಪಾರ ವಹಿವಾಟು ಹೆಚ್ಚಿಸಿಕೊಳ್ಳುವ ತಂತ್ರಗಾರಿಕೆಯೂ ಆರಂಭವಾಗಿದ್ದು ಕತ್ತೆಯ ಹಾಲಿನ (ಜೆನ್ನಿ ಮಿಲ್ಕ್) ಹೆಸರಿನ ಆಂಧ್ರಪ್ರದೇಶದ ಕಂಪನಿಯೊಂದು ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಚಟುವಟಿಕೆ ಆರಂಭಿಸಿತ್ತು.ಒಂದು ಯೂನಿಟ್ಎಂದರೆ ಮೂರು ಕತ್ತೆಗಳನ್ನು ಮಾರಿ ಅವುಗಳ ಪ್ರತಿ ಲೀಟರ್ ಹಾಲಿಗೆ 2350 ರೂಪಾಯಿ ನೀಡಿ ಕೊಳ್ಳುವ ಭರವಸೆಯೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳ ರೈತರಲ್ಲಿ ಪ್ರಚಾರ ಮಾಡಿತ್ತು. ಪ್ರತಿಯೂನಿಟ್ ಕತ್ತೆಗಳಿಗೆ ಮೂರು ಲಕ್ಷರೂಪಾಯಿಯಂತೆ ರೈತರಿಗೆ ಮಾರಿಅವರು ನೀಡುವ ಹಾಲನ್ನು ಲೀಟರಿಗೆ 2350 ರೂಪಾಯಿಯಂತೆ ಕೊಂಡು ವಿಶ್ವಾಸ ಮೂಡಿಸಿತ್ತು.
ಕತ್ತೆಗಳನ್ನು ಸಾಕುವುದಕ್ಕೆ ಹೆಚ್ಚಿನ ವೆಚ್ಚವಿಲ್ಲದಕಾರಣರೈತರಿಗೆ ಈ ಯೋಜನೆ ಆಕರ್ಷಕ ಎನಿಸಿ ವಿಜಯನಗರ ಜಿಲ್ಲೆಯ ಹೊಸಪೇಟೆಯೊಂದರಲ್ಲಿಯೇ 750 ಕತ್ತೆಗಳನ್ನು ಮಾರಾಟ ಮಾಡಿತ್ತು.ಮೂರು ಕತ್ತೆಗಳಿಗೆ ಮೂರು ಲಕ್ಷರೂಪಾಯಿಯಂತೆಒಟ್ಟು ಏಳೂವರೆ ಕೋಟಿರೂಪಾಯಿ ಸಂಗ್ರಹಿಸಿದ್ದಲ್ಲದೆ ಇನ್ನೂ 300 ಕತ್ತೆಗಳಿಗೆ ಮುಂಗಡ ನೊಂದಾಯಿಸಿ ಮತ್ತೂ ಮೂರು ಕೋಟಿರೂಪಾಯಿ ಸಂಗ್ರಹಿಸಿದ ಕಂಪನಿ ಇದೀಗ ನಾಪತ್ತೆಯಾಗಿರುವ ವರದಿ ಬಂದಿದೆ.ಇದುಕತ್ತೆ ಹಾಲಿನಿಂದ ಉತ್ತಮ ಆದಾಯ ಗಳಿಸಲು ಸಾಲ ಮಾಡಿ ಕತ್ತೆಗಳನ್ನು ಕೊಂಡವರು ಮತ್ತು ಮುಂಗಡವಾಗಿ ನೊಂದಾಯಿಸಿ ಕೊಂಡವರಿಗೆ ಆಘಾತಕಾರಿಯಾಗಿದೆ.
ಕತ್ತೆ ಹಾಲನ್ನು ಕೊಳ್ಳುವ ಭರವಸೆ ನೀಡಿ ಕತ್ತೆಗಳನ್ನು ಮಾರಾಟ ಮಾಡಲು ಮುಂಗಡ ಹಣ ಪಡೆದು ಕಂಪನಿಯ ಅಧಿಕಾರಿಗಳು ಹೊಸಪೇಟೆಯಲ್ಲಿ ತೆರಿದಿದ್ದ ಕಚೇರಿಯನ್ನು ಮುಚ್ಚಿ ಸಂಪರ್ಕ ಸಿಗದಂತೆ ಕಾಣೆಯಾಗಿರುವುದರಿಂದ ವಂಚನೆಗೆ ಒಳಗಾಗಿರುವ ರೈತರು ಹೊಸಪೇಟೆ ಪೊಲೀಸ್ಠಾಣೆಯಲ್ಲಿದೂರು ನೀಡತೊಡಗಿದ್ದಾರೆ. ಕತ್ತೆ ಹಾಲಿನ ಕಂಪನಿ ನಾಪತ್ತೆಯಾಗಿರುವ ಸುದ್ದಿ ಪ್ರಚಾರವಾಗುತ್ತಿದ್ದಂತೆ ಈ ವಂಚನೆಗೆ ರಾಜ್ಯದ ವಿವಿಧ ಜಿಲ್ಲೆಗಳ ರೈತರು, ವ್ಯಾಪಾರಿಗಳು, ನಗರ ಪ್ರದೇಶದ ಹಣವಂತರುತಾವೂ ಮೋಸಹೋಗಿರುವುದನ್ನು ತಿಳಿದು ಪೊಲೀಸರಲ್ಲಿ ದೂರು ನೀಡಲು ಮುಂದಾಗಿರುವ ವರದಿಗಳು ಬಂದಿವೆ. ವಂಚನೆಗೆ ಒಳಗಾಗುವವರು ಇರುವವರೆಗ ಮೋಸ ಮಾಡುವವರು ಇರುತ್ತಾರೆ ಎಂಬುದನ್ನು ಮತ್ತೆ ಸಾಬೀತು ಪಡಿಸುವಂತೆ ನಡೆದಿರುವ ಈ ವಿದ್ಯಮಾನ ರಾಜ್ಯದ ಪೊಲೀಸರಿಗೆ ಇನ್ನೊಂದು ಸವಾಲಿನ ಪ್ರಕರಣವಾಗಿದೆ. ಲಾಭದ ಆಸೆಗೆ ಕತ್ತೆ ಸಾಕಲು ಹೊರಟು ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ರಾಜ್ಯದ ಜನರಿಗೆ ನ್ಯಾಯ ಸಿಗುವಂತೆ ನಾಪತ್ತೆಯಾಗಿರುವ ಕತ್ತೆ ಹಾಲಿನ (ಜೆನ್ನಿ ಮಿಲ್ಕ್) ಕಂಪನಿಯನ್ನು ಪತ್ತೆ ಮಾಡಿ ಹೂಡಿಕೆ ಮಾಡಿದ ಹಣವನ್ನು ವಾಪಸು ಕೊಡಿಸುವುದು ಪೊಲೀಸರಿಗೆ ಸವಾಲಾಗಿದೆ