ಕಾಂತಾರ ನಂತರ ಸಿನಿ ಪ್ರೇಮಿಗಳ ಮನ ಗೆದ್ದಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ ತೆಲುಗಿನ ಜೈ ಹನುಮಾನ್ ಸಿನಿಮಾದಲ್ಲಿ ಆಂಜನೇಯನಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ಟಾಲಿವುಡ್ ಅಂಗಳದಲ್ಲಿ ಮೂಡಿ ಬಂದಿದ್ದ ಜೈ ಹನುಮಾನ್ ಸಿನಿಮಾ ಪಾನ್ ಇಂಡಿಯಾದಾದ್ಯಂತ ಬಾಕ್ಸ್ ಆಫೀಸ್ ಬೇಟೆಯಾಡಿತ್ತು ಗಲ್ಲಾಪಟ್ಟಿಗೆಯಲ್ಲಿ ಕಮಲ್ ಮಾಡಿದ್ದ ಹನುಮಾನ್ ಸಿನಿಮಾದ ಸೀಕ್ವೆಲ್ ಮೂಡಿ ಬರುತ್ತಿದ್ದು ಇದೀಗ ಪ್ಯಾನ್ ಇಂಡಿಯಾ ಹಿಟ್ ಸೀಕ್ವೆಲ್ ನಲ್ಲಿ ಕಾಂತರಾ ಶಿವ ನಟಿಸುವುದು ಅಧಿಕೃತವಾಗಿದೆ. ನಿರ್ದೇಶಕ ಪ್ರಶಾಂತ್ ಶರ್ಮ ಡೈರೆಕ್ಷನ್ ಅಡಿಯಲ್ಲಿ ಮೂಡಿ ಬರುತ್ತಿರುವ ಹನುಮಾನ್ ಸಿನಿಮಾದ ಸೀಕ್ವೆಲ್ ನಲ್ಲಿ ರಿಷಬ್ ಶೆಟ್ಟಿ ಹನುಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ದೀಪಾವಳಿಯ ವಿಶೇಷ ಸಂದರ್ಭದಲ್ಲಿ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.
ತೆಲುಗಿನ ಜೈ ಹನುಮಾನ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಆಂಜನೇಯನಾಗಿ!
