ಮಂಡ್ಯ: ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ, ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಅವರಿಗೆ ಜೆಡಿಎಸ್ ಪಕ್ಷದ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂದರು. ಯೋಗೇಶ್ವರ್ ಅಲ್ಲದೆ, ಕುಮಾರಸ್ವಾಮಿಯವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಇಲ್ಲವೇ ಒಕ್ಕಲಿಗ ಮುಖಂಡ ಜಯಮೂರ್ತಿಗೆ ಟಿಕೆಟ್ ಗಿಟ್ಟಿಸಬಹುದಾಗಿದೆ ಎಂದು ಸಚಿವ ಹೇಳಿದರು.
