ಬೆಂಗಳೂರು: ಸುಮಾರು 1.58 ಕೋಟಿ ತೆರಿಗೆ ಬಾಕಿ ಇಟ್ಟುಕೊಂಡು ತೆರಿಗೆ ವಂಚಿಸಿ ಬೆಂಗಳೂರಿನಲ್ಲಿ ಓಡಾಡಿಕೊಂಡಿದ್ದ ಐಷಾರಾಮಿ ಫೆರಾರಿ ಕಾರಿನ ಮಾಲೀಕನಿಗೆ ಆರ್ ಟಿ ಓ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

7.5 ಕೋಟಿ ಮೌಲ್ಯದ ಈ ಫೆರಾರಿ ಕಾರು ಮಹಾರಾಷ್ಟ್ರ ರಿಜಿಸ್ಟ್ರೇಷನ್ ಹೊಂದಿದ್ದು ತೆರಿಗೆಯನ್ನು ಸುಮಾರು ವರ್ಷಗಳಿಂದ ಪಾವತಿಸದೆ ಮಾಲಿಕ ಓಡಾಡಿಕೊಂಡಿದ್ದ. ನೆನ್ನೆ ಬೆಂಗಳೂರಿನ ಲಾಲ್ಬಾಗ್ ಬಳಿ ಆರ್ ಟಿ ಓ ಅಧಿಕಾರಿಗಳು ಈ ಕಾರು ಹಿಡಿದು ತಪಾಸಣೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಇನ್ನು ತೆರಿಗೆಯನ್ನು ಪಾವತಿಸಲು ಕಾರು ಮಾಲೀಕನಿಗೆ ಜುಲೈ 3 ಸಂಜೆವರೆಗೆ ಕಾಲಾವಕಾಶ ನೀಡಲಾಗಿದೆ. ಟ್ಯಾಕ್ಸ್ ಕಟ್ಟಲು ಕಾರು ಮಾಲೀಕರು ಸಮಯಾವಕಾಶ ಕೇಳಿದ್ದು ಈ ಹಿನ್ನಲೆ ಸ್ಥಳದಲ್ಲೇ ಇದ್ದು ತೆರಿಗೆ ಪಾವತಿಸಲು ಆರ್ ಟಿ ಓ ಅಧಿಕಾರಿಗಳು ಕಾಲಾವಕಾಶ ನೀಡಿದ್ದಾರೆ. ತೆರಿಗೆ ಪಾವತಿಸದೆ ಇದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.



