ಗದಗ: ದಸರಾ ಹಬ್ಬದಂದು ಉತ್ತಮ ಆದಾಯದ ಕನಸು ಹೊತ್ತಿದ್ದ ಗದಗಿನ ಹೂವು ರೈತರು, ಮಾರುಕಟ್ಟೆಯಲ್ಲಿ ಬೆಲೆ ಪಾತಾಳಕ್ಕೆ ಕುಸಿತ ಕಂಡು ನಲುಗಿ ಹೋಗಿದ್ದಾರೆ. ಸೇವಂತಿ, ಗುಲಾಬಿ, ಚೆಂಡು, ಸುಗಂಧಿ ರಾಜಾ ಹೀಗೆ ಬೇರೆ ಬೇರೆ ಹೂವಿಗೆ ಭರ್ಜರಿ ಬೆಲೆ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಬಾರಿ ಅತಿವೃಷ್ಟಿ, ಗುಣಮಟ್ಟ ಕುಂದು ಮತ್ತು ರಫ್ತು ಕಡಿತ ಕಾರಣ ಭಾರಿ ನಷ್ಟ ಉಂಟಾಗಿದೆ.
ಹೂವುಗಳ ಗುಣಮಟ್ಟ ಕುಂದು – ಬೆಲೆ ಕುಸಿತ
ಗದಗ ಜಿಲ್ಲೆಯ ಲಕ್ಕುಂಡಿ, ಕದಂಪೂರ, ಶಿರುಂಜ್, ಪಾಪನಾಶಿ ಸೇರಿದಂತೆ ಹಲವೆಡೆ ಹೂವಿನ ಬೆಳೆಗಳನ್ನು ಭರ್ಜರಿಯಾಗಿ ಬೆಳೆಯಲಾಗಿದೆ. ಆದರೆ ಮುಂಗಾರು ಮಳೆ ಮಿತಿಮೀರಿದ ಪರಿಣಾಮ, ಹೂವಿನ ಗುಣಮಟ್ಟ ಹದಗೆಟ್ಟಿದ್ದು, ರಫ್ತುಗೂ ಅವಕಾಶವೇ ಇಲ್ಲದಂತಾಗಿದೆ. ಇದರಿಂದಾಗಿ APMC ಮಾರುಕಟ್ಟೆಯಲ್ಲಿ ಹೂವುಗಳಿಗೆ ಯಾರು ಧಾರಾಳ ಬೆಲೆ ಕೊಡುವವರೇ ಇಲ್ಲ!
ಮಾರುಕಟ್ಟೆಯ ಬೆಲೆ ವಿವರ:
| ಹೂವಿನ ಹೆಸರು | ಸದ್ಯದ ಬೆಲೆ (ಪ್ರತಿ ಕೆಜಿ) | ಹಿಂದಿನ ಬೆಲೆ (ಗಣೇಶ ಚತುರ್ಥಿ) |
| ಸೇವಂತಿ | ₹20 – ₹30 | ₹100 – ₹150 |
| ಚೆಂಡು | ₹10 – ₹20 | ₹80 – ₹120 |
| ಗುಲಾಬಿ | ₹100 – ₹120 | ₹300 – ₹400 |
| ಮಲ್ಲಿಗೆ | ₹300 | ₹500 – ₹600 |
| ಸುಗಂಧಿ ರಾಜಾ | ₹80 | ₹200 – ₹250 |
“ಹೂವು ಬೇಗುತ್ತಿಲ್ಲ, ನಮ್ಮ ಬಾಳೇ ಬಾಡುತ್ತಿದೆ” – ರೈತರ ಆಕ್ರಂದನ
ಒಬ್ಬೊಬ್ಬ ರೈತರು 4 ರಿಂದ 5 ಎಕರೆ ವರೆಗೆ ಹೂವು ಬೆಳೆದು, ಕೆಲವರು ₹5 ರಿಂದ ₹7 ಲಕ್ಷದವರೆಗೆ ಹೂವು ಬೆಳೆವತ್ತಿಗೆ ಖರ್ಚು ಮಾಡಿದ್ದಾರಂತೆ. ಆದರೆ ಈಗ ಬೆಲೆ ಕುಸಿತದಿಂದ ಖರ್ಚಿನ ಅರ್ಧಕ್ಕೂ ಲಾಭ ಸಿಗುತ್ತಿಲ್ಲ ಎನ್ನೋದು ಅವರ ನೋವು.
“ದಸರಾ ಹಬ್ಬ, ಮಹಾಲಯ ಅಮಾವಾಸ್ಯೆ ಎಲ್ಲಕ್ಕೂ ನಮ್ಮ ಹೂವುಗಳು ಪಟಪಟನೆ ಮಾರಾಟವಾಗುತ್ತವೆ ಅಂದ್ಕೊಂಡಿದ್ದೇವೆ. ಆದರೆ ಈಗ ಮಾರಾಟವೇ ಇಲ್ಲ. ಹೂವು ಇದೆ, ಆದರೆ ಖರೀದಿದಾರರಿಲ್ಲ!” ಎಂದು ರೈತರು ಕಣ್ಣೀರಿಟ್ಟು ಹೇಳಿದ್ದಾರೆ.
ಸರ್ಕಾರಗಳೆ ಕೇಳಿ! ಪರಿಹಾರ ಕೊಡಿ!
ಹೂವಿನ ಬೆಳೆಗಳಿಗೆ ಸಹಾಯಧನ, ವಿಮಾ ಪರಿಹಾರ ಮತ್ತು ತಾತ್ಕಾಲಿಕ ಮಾರುಕಟ್ಟೆ ಬೆಂಬಲ ಬೆಲೆ ನೀಡುವಂತೆ ರೈತರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಇಲ್ಲವಾದರೆ “ನಮ್ಮ ಹೂವಿನೊಂದಿಗೆ ಬಾಳೂ ಒಣಗಿಬಿಡುತ್ತೆ!” ಎನ್ನುತ್ತಿದ್ದಾರೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH




