ಬೆಂಗಳೂರು : ಪ್ರತಿಧೀ ಫೌಂಡೇಷನ್ ವತಿಯಿಂದ ‘ಸ್ವಸ್ಥ ಕರ್ನಾಟಕ 2024’ ಶೀರ್ಷಿಕೆಯಡಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಅರಮನೆ ಮೈದಾನದಲ್ಲಿ (ಪ್ರಿನ್ಸಸ್ ಕ್ರೈನ್ -ಗೇಟ್ ಸಂಖ್ಯೆ 9) ಹಮ್ಮಿಕೊಂಡಿದೆ.
ಈ ಶಿಬಿರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಾರ್ಯಕ್ರಮ ನಿರ್ದೇಶಕ ಡಾ.ಎಸ್. ಸಚ್ಚಿದಾನಂದ ಮುಖ್ಯ ಅತಿಥಿಗಳಾಗಿ ಪಾಲ್ಗೊಡಿದ್ದಾರೆ. ಶಿಬಿರದಲ್ಲಿ ಉಚಿತ ತಪಾಸಣೆ, ಸಮಾಲೋಚನೆ ಹಾಗೂ ಚಿಕಿತ್ಸೆ ಇದೆ ಎಂದು ಫೌಂಡೇಷನ್ ಅಧ್ಯಕ್ಷೆ ಡಾ.ಜಿ. ಪ್ರಜ್ವಲ ರಾಜ್ ತಿಳಿಸಿದ್ದಾರೆ. ‘ಹೃದ್ರೋಗ ತಜ್ಞರು, ಮಕ್ಕಳ ತಜ್ಞರು, ಚರ್ಮ ರೋಗ ತಜ್ಞರು, ನರರೋಗ ತಜ್ಞರು, ಸ್ತ್ರೀರೋಗ ತಜ್ಞರು ಸೇರಿ ವಿವಿಧ ವಿಭಾಗಗಳ ತಜ್ಞ ವೈದ್ಯರು ಶಿಬಿರ ದಲ್ಲಿ ಪಾಲ್ಗೊಡಿದ್ದಾರೆ.ಹೃದ್ರೋಗ, ಕಣ್ಣಿನ ಸಮಸ್ಯೆ, ಚರ್ಮರೋಗ, ಕ್ಯಾನ್ಸರ್ ಸೇರಿ ವಿವಿಧ ರೋಗಗಳು ಹಾಗೂ ಸಮಸ್ಯೆಗಳಿಗೆ ಸಂಭOಧಿಸಿದOತೆ ತಪಾಸಣೆ ಹಾಗೂ ಚಿಕಿತ್ಸೆ ಒದಗಿಸಲಾಗುತ್ತದೆ. ಕನ್ನಡ, ಔಷಧಗಳನ್ನು ಉಚಿತವಾಗಿ ನೀಡಲಾಗುತ್ತದೆ