20 ರೂಪಾಯಿ ವಿಮಲ್ ತರುವ ವಿಚಾರಕ್ಕೆ ಸ್ನೇಹಿತನ ಕೊ*ಲೆ: ಓರ್ವನ ಬಂಧನ..!

20 ರೂಪಾಯಿ ವಿಮಲ್ ತರುವ ವಿಚಾರಕ್ಕೆ ಸ್ನೇಹಿತನ ಕೊ*ಲೆ: ಓರ್ವನ ಬಂಧನ..!

ಬೆಂಗಳೂರು : 20 ರೂಪಾಯಿ ವಿಮಲ್ ವಿಚಾರಕ್ಕೆ ಕೊಲೆ ಮಾಡಿದ್ದ ಆರೋಪಿಯನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೀತಾರಾಂ ಬಂಧಿತ ಆರೋಪಿ. ಜಿತೇಂದ್ರ ಪಾಂಡೆ ಅಲಿಯಾಸ್ ಬಬ್ಲು ಕೊಲೆಯಾದವ. ಬಿಹಾರ ಮೂಲದ ಸೀತಾರಾಂ ಮತ್ತು ಜಿತೇಂದ್ರ ಪಾಂಡೆ ಸ್ನೇಹಿತರಾಗಿದ್ದರು. ವರ್ತೂರಿನ ರಾಮಗೊಂಡನಹಳ್ಳಿ ಖಾಸಗಿ ಶಾಲೆಯ ಕಟ್ಟಡದ ಟೈಲ್ಸ್ ಕೆಲಸ ಮಾಡುತ್ತಿದ್ದರು.

20 ರೂಪಾಯಿ ವಿಮಲ್ ತರುವ ವಿಚಾರಕ್ಕೆ ಸ್ನೇಹಿತನನ್ನು ಕೊಲೆ ಮಾಡಿದ್ದ ಆರೋಪಿಯನ್ನು ಬೆಂಗಳೂರಿನ ವರ್ತೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಸೀತಾರಾಂ ಎಂಬ ಆರೋಪಿ, ಜಿತೇಂದ್ರ ಪಾಂಡೆ ಎಂಬಾತನನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜುಲೈ 28 ರಂದು ರಾತ್ರಿ ಇಬ್ಬರು ಒಟ್ಟಿಗೆ ಮದ್ಯಪಾನ ಸೇವಿಸಿ ಪಾರ್ಟಿ ಮಾಡಿದ್ದಾರೆ. ಜಿತೇಂದ್ರ ಪಾಂಡೆಯು ಸೀತಾರಾಂ ಪಾಂಡೆಗೆ 20 ರೂಪಾಯಿಗೆ ವಿಮಲ್ ತಗೊಂಡು ಬಾ ಎಂದು ಹೇಳಿದ್ದನು. ನನಗೆ ವಿಮಲ್ ತರಲು ಕಳುಹಿಸುತ್ತೀಯಾ ಎಂದು ಸೀತಾರಾಂ ಪಾಂಡೆ ಗಲಾಟೆ ಮಾಡಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ, ಸೀತಾರಾಂ ಪಾಂಡೆ ಸುತ್ತಿಗೆಯಿಂದ ಜಿತೇಂದ್ರ ಪಾಂಡೆಗೆ ಹೊಡೆದಿದ್ದಾನೆ. ಜಿತೇಂದ್ರ ಪಾಂಡೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕೊಲೆ ಮಾಡಿದ ಬಳಿಕ ಸೀತಾರಾಂ ಪಾಂಡೆ ಘಟನಾ ಸ್ಥಳದಿಂದ ಪರಾರಿಯಾಗಿದ್ದನು.

ಜುಲೈ 29 ರಂದು ಉಳಿದ ಕೆಲಸಗಾರರು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಆರೋಪಿ ಪತ್ತೆ ಮಾಡಿ ಬಂಧಿಸಿದ್ದಾರೆ.

ಅಮಾಯಕನನ್ನು ಕೊಲೆ ಮಾಡಿದ್ದ ಆರೋಪಿಗಳು ಅರೆಸ್ಟ್

ರಾಬರಿ ಗ್ಯಾಂಗ್ನಿಂದ ಪ್ರೇಮ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಶಾಲ್, ಪುನೀತ್ ಹಾಗೂ ಹೇಮಂತ್ ಬಂಧಿತ ಆರೋಪಿಗಳು. ಹಣ ಕೊಡುವಂತೆ ಆರೋಪಿಗಳು ಪ್ರೇಮ್ನನ್ನು ಅಡ್ಡಗಟ್ಟಿದ್ದರು. ಪ್ರೇಮ್ ಹಣ ಇಲ್ಲ ಎಂದು ಹೇಳಿದ್ದಕ್ಕೆ ಆರೋಪಿಗಳು ಡ್ಯಾಗರ್ನಿಂದ ಹಲ್ಲೆ ಮಾಡಿದ್ದರು. ಹಲ್ಲೆ ನಂತರ ಪ್ರೇಮ್ ಚಿಕಿತ್ಸೆ ಪಡೆಯದೆ ಗ್ಯಾರೇಜ್ನಲ್ಲಿ ಮಲಗಿದ್ದನು. ತೀವ್ರ ರಕ್ತಸ್ರಾವವಾಗಿ ಪ್ರೇಮ್ ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ. ಸದ್ಯ, ಬ್ಯಾಡರಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *