ಹನೂರು : ಎತ್ತ ನೋಡಿದರೂ ಕಸ ಕಡ್ಡಿ, ಚರಂಡಿಯಿಲ್ಲದೆ ರಸ್ತೆಯಲ್ಲಿಯೇ ಹರಿಯುವ ನೀರು, ಕುಡಿಯುವ ನೀರಿನ ತೊಂಬೆಯ ಸುತ್ತಲೂ ಹಾಳೆತ್ತರೆಕ್ಕೆ ಬೆಳೆದಿರುವ ಗಿಡ ಗಂಟಿಗಳು, ರಸ್ತೆಯಿಲ್ಲದೆ ಪರದಾಟ ಇದು ಜಿ ಆರ್ ನಗರದ ವಾಸ್ತವ ಸ್ಥಿತಿ.
ತಾಲೂಕಿನ ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಜಿ.ಆರ್ ನಗರ ಗ್ರಾಮದಲ್ಲಿ ೪೦ ಕ್ಕೂ ಹೆಚ್ಚು ಮನೆಗಳಿದ್ದರು ಸಹ ಮೂಲಭೂತ ಸೌಲಭ್ಯಗಳಿಲ್ಲದೇ ಜನ ಪರದಾಡುವಂತಾಗಿದೆ.

ರಸ್ತೆಯೇ ಚರಂಡಿ : ಜಿ ಆರ್ ನಗರ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಯಲ್ಲಿಯೇ ಚರಂಡಿ ನೀರು ಹರಿಯುತ್ತಿದೆ ಇದರಿಂದ ತಿರುಗಾಡಲು ಸಹ ರಸ್ತೆಯಿಲ್ಲದೇ ಪರದಾಟ ಶುರುವಾಗಿದೆ ಜೊತೆಗೆ ರಸ್ತೆಯ ಇಕ್ಕೆಲಗಳಲ್ಲಿ ಪ್ರಯೋಜನಕ್ಕೆ ಬಾರದ ನೀರು ಹರಿಯುವುದರಿಂದ ಮಕ್ಕಳು ಹಾಗೂ ಜನರು ಅದನ್ನು ತುಳಿದೆ ತೆರಳಬೇಕಿದೆ ಹಾಗಾಗಿ ಜನರು ದಿನನಿತ್ಯ ಇದೆ ಗಲೀಜುಯೇ ನೀರನ್ನೇ ತುಳಿದು ತೆರಳಿ ಮನೆಗಳಿಗೆ ಹೋಗುತ್ತಾರೆ ಹಾಗಾಗಿ ರೋಗ ರುಜಿನಗಳಿಗೆ ಇದು ಕಾರಣವಾಗುತ್ತಿದೆ ಹಾಗಾಗಿ ಸಂಬAಧ ಪಟ್ಟ ಅಧಿಕಾರಿಗಳು ಜನಪ್ರತಿನಿದಿನಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.
ಹಾಳೆತ್ತರಕ್ಕೆ ಬೆಳೆದ ಗಿಡಗಳು : ಕುಡಿಯುವ ನೀರಿನ ತೊಂಬೆಯ ಬಳಿ ಗಿಡಗಂಟಿಗಳು ಹಾಳೆತ್ತರಕ್ಕೆ ಬೆಳೆದು ನಿಂತು ಸರೀಸೃಪಗಳ ಹಾವಾಸ ಸ್ಥಾನವಾಗಿದೆ ಈಗಾಗಿ ಜನರು ಅಲ್ಲಿ ನೀರು ಹಿಡಿಯಲು ಸಹ ಹಿಂದೇಟು ಹಾಕುತ್ತಿದ್ದಾರೆ ಜೊತೆಗೆ ಭಯದ ಆತಂಕದಲ್ಲೇ ಕಾಲ ದೂಡುತ್ತಿದ್ದಾರೆ ಈಗಾಗಲೇ ಅನೇಕ ಬಾರಿ ಇಲ್ಲಿ ಸರೀ ಸೃಪಗಳಾದ ಹಾವು ಹಲ್ಲಿ ಗಳು ಕಾಣಿಸಿಕೊಂಡಿವೆ ಹಾಗಾಗಿ ದಯವಿಟ್ಟು ಆದಷ್ಟು ಬೇಗ ಸ್ವಚ್ಛತೆಗೊಳಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.
ರಸ್ತೆ ತುಂಬೆಲ್ಲ ಗಿಡಗಂಟಿಗಳು : ಜಿ ಆರ್ ನಗರದಲ್ಲಿರುವ ಕಚ್ಚಾ ರಸ್ತೆಗಳು ಸಂಪೂರ್ಣ ಗಿಡಗಂಟಿಗಳ ಪಾಲಾಗಿವೆ ರಸ್ತೆಯಲ್ಲಿ ಇಕ್ಕೆಲಾ ಸೇರಿದಂತೆ ಎಲ್ಲ ಕಡೆ ಯಲ್ಲಿಯೂ ಸಹ ಗಿಡಗಳು ಬೆಳೆದು ಜನರು, ಮಕ್ಕಳು ತಿರುಗಾಡಲು ಸಹ ಕಷ್ಟ ಪಡಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೇ ಅಕ್ಕ ಪಕ್ಕದಲ್ಲಿ ಜಮೀನುಗಳಿದ್ದು ಹಾವು ಹಲ್ಲಿಗಳ ಕಾಟ ಹೆಚ್ಚೆ ಇರುತ್ತದೆ ಹಾಗಾಗಿ ಕೊನೆ ಪಕ್ಷ ಒಂದು ಬೀದಿಯಲ್ಲಿ ಬರುವಾಗ ರಸ್ತೆಯನ್ನಾದರೂ ಸಹ ದುರಸ್ಥಿ ಪಡಿಸಿಕೊಡಬೇಕು ಜೊತೆಗೆ ಮುಂದೆ ಆಗುವಂತಹ ಅನಾಹುತಗಳಿಂದ ಕಾಪಾಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಪೂರ್ಣಗೊಳ್ಳದ ಜಲ ಜೀವನ್ ಮಿಷನ್ : ಕೇಂದ್ರ ಸರ್ಕಾರದ ಮಹತ್ವಕಾoಕ್ಷೆ ಯೋಜನೆಯಾದ ಜಲಜೀವನ್ ಮಿಷನ್ ಕಾಮಗಾರಿ ಇಲ್ಲಿ ಕೆಲಸ ನಡೆದಿದೆ. ಆದರೇ ಇನ್ನು ಸಹ ಅಲ್ಲಿ ನೀರು ಬಾರದಾಗಿದೆ ಆದ್ದರಿಂದ ಎಲ್ಲರೂ ಕುಡಿಯುವ ನೀರಿಗಾಗಿ ತೊಂಬೆಯ ಬಳಿಯೇ ಬರಬೇಕು ಹಾಗಾಗಿ ಎಲ್ಲರಿಗೂ ತೊಂದರೆಯಾಗುತ್ತಿದೆ ಮುಂದಾದರು ಸಂಬAಧ ಪಟ್ಟ ಅಧಿಕಾರಿಗಳು, ಜನಪ್ರತಿನಿದಿನಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪ್ರಜ್ಞಾವಂತ ನಾಗರೀಕರು ಆಗ್ರಹ ಮಾಡಿದ್ದಾರೆ.