ಸಾರ್ವಜನಿಕ ವಾಹನಗಳಿಗೆ ಜಿಪಿಎಸ್-ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ

ಬೆಂಗಳೂರು: ರಾಜ್ಯದಲ್ಲಿರುವ 6 ಲಕ್ಷಕ್ಕೂ ಅಧಿಕ ವಾಹನಗಳಿದ್ದರೂ ಶೇ.1ರಷ್ಟು ವಾಹನಗಳಲ್ಲಿ ಕೂಡ ವೆಹಿಕಲ್‌ ಲೊಕೇಶನ್‌ ಟ್ರ್ಯಾಕಿಂಗ್‌ (ವಿಎಲ್‌ಟಿ) ಉಪಕರಣ ಮತ್ತು ತುರ್ತು ಪ್ಯಾನಿಕ್‌ ಬಟನ್‌ ಅಳವಡಿಕೆಯಾಗಿಲ್ಲ.

ದೆಹಲಿ ನಿರ್ಭಯಾ ಘಟನೆಯ ನಂತರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ಎಲ್ಲಾ ಸಾರ್ವಜನಿಕ ಸೇವಾ ವಾಹನಗಳಾದ ಬಸ್‌ಗಳು, ಮ್ಯಾಕ್ಸಿ ಕ್ಯಾಬ್‌ಗಳು, ಶಾಲಾ ಬಸ್‌ಗಳಲ್ಲಿ ವೆಹಿಕಲ್‌ ಲೊಕೇಶನ್‌ ಟ್ರ್ಯಾಕಿಂಗ್‌ (ವಿಎಲ್‌ಟಿ) ಉಪಕರಣ ಮತ್ತು ತುರ್ತು ಪ್ಯಾನಿಕ್‌ ಬಟನ್‌ ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ.

ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 6,04,863 ವಾಹನಗಳಿದ್ದು, ಈ ಪೈಕಿ ಕೇವಲ 1,109 ವಾಹನಗಳು ಮಾತ್ರ ನಿಯಮವನ್ನು ಅನುಸರಿಸಿವೆ ಎಂದು ತಿಳಿದುಬಂದಿದೆ.

ವೆಹಿಕಲ್‌ ಲೊಕೇಶನ್‌ ಟ್ರ್ಯಾಕಿಂಗ್‌ (ವಿಎಲ್‌ಟಿ) ಉಪಕರಣ ಮತ್ತು ತುರ್ತು ಪ್ಯಾನಿಕ್‌ ಬಟನ್‌ ಅಳವಡಿಕೆಗೆ ಸಾರಿಗೆ ಇಲಾಖೆಯು ಸೆ.10 ಗಡುವು ನೀಡಿದ್ದರೂ, ಶೇ.1ರಷ್ಟು ವಾಹನಗಳೂ ಕೂಡ ಇನ್ನೂ ಉಪಕರಣಗಳನ್ನು ಅಳವಡಿಸಿಲ್ಲ.

Leave a Reply

Your email address will not be published. Required fields are marked *