Health || ಬೇಸಿಗೆಯಲ್ಲಿ ಕಣ್ಣಿನ ಪೊರೆ ಸಮಸ್ಯೆ ಹೆಚ್ಚುತ್ತಂತೆ, ಯಾಕೆ ಗೊತ್ತಾ..?

Health || ಬೇಸಿಗೆಯಲ್ಲಿ ಕಣ್ಣಿನ ಪೊರೆ ಸಮಸ್ಯೆ ಹೆಚ್ಚುತ್ತಂತೆ, ಯಾಕೆ ಗೊತ್ತಾ..?

ಬೇಸಿಗೆಯ ಬಿಸಿಲು ನೆತ್ತಿ ಸುಡುವಷ್ಟರ ಮಟ್ಟಿಗೆ ಬಿಸಿಯಾಗಿರುತ್ತದೆ. ಇದು ಚರ್ಮದ (Skin) ಮೇಲೆ ಮಾತ್ರವಲ್ಲದೇ ಕಣ್ಣುಗಳ (Eye) ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಬೇಸಿಗೆಯಲ್ಲಿ ಕಣ್ಣಿನ ಪೊರೆ (Cataract) ಬರುವ ಸಾಧ್ಯತೆ ಹೆಚ್ಚು ಎಂದು ರೇವಾದಲ್ಲಿರುವ ಆಯುರ್ವೇದ ಆಸ್ಪತ್ರೆಯೊಂದು ಹೇಳಿದೆ. ಕಣ್ಣಿನ ಸಮಸ್ಯೆ (Eye Problem) ವಯಸ್ಸಿನೊಂದಿಗೆ ಮಾತ್ರ ಸಂಬಂಧಿಸಿಲ್ಲ. ಬದಲಾಗಿ ಸೂರ್ಯನ ತೀವ್ರವಾದ ನೇರಳಾತೀತ (UV) ಕಿರಣಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರೊಂದಿಗೂ ಸಂಬಂಧ ಹೊಂದಿದೆ. ಸೂರ್ಯನ ಬೆಳಕು ಕಣ್ಣುಗಳಿಗೆ ಶಾಶ್ವತ ಹಾನಿಯನ್ನುಂಟು ಮಾಡಬಹುದು.

ವೈದ್ಯರ ಪ್ರಕಾರ, ಬೇಸಿಗೆಯಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸೂರ್ಯನ ಕಿರಣಗಳು ಗರಿಷ್ಠವಾಗಿರುತ್ತವೆ, ಇದು ಕಣ್ಣುಗಳ ಮಸೂರಗಳನ್ನು ದುರ್ಬಲಗೊಳಿಸುತ್ತದೆ ಮತ್ತು ದೃಷ್ಟಿ ಮಂದವಾಗಲು ಕಾರಣವಾಗಬಹುದು. ವಯಸ್ಸಾದಂತೆ ಕಣ್ಣಿನ ಮಸೂರದ ಸ್ಥಿತಿಸ್ಥಾಪಕತ್ವ ಕಡಿಮೆಯಾಗುತ್ತದೆ, ಆದರೆ ಈ ಪ್ರಕ್ರಿಯೆಯು UV ಕಿರಣಗಳಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಹೆಚ್ಚು ವೇಗವಾಗಿ ಸಂಭವಿಸುತ್ತದೆ. ಜಾಗತಿಕ ಅಂಕಿ ಅಂಶಗಳ ಪ್ರಕಾರ, ಶೇ.20 ರಷ್ಟು ಕಣ್ಣಿನ ಪೊರೆಗಳಿಗೆ ನೇರಳಾತೀತ ಕಿರಣಗಳೇ ಕಾರಣ.

ಈ ಸಮಸ್ಯೆಯನ್ನು ತಡೆಗಟ್ಟುವುದು ಹೇಗೆ?

•  ಹಗಲಿನಲ್ಲಿ ಹೊರಗೆ ಹೋಗುವಾಗ UVA/UVB ರಕ್ಷಣೆಯಿರುವ ಸನ್ ಗ್ಲಾಸ್ ಗಳನ್ನು ಬಳಸಿ.

•  ಅಗಲವಾದ ಅಂಚುಳ್ಳ ಟೋಪಿ ಅಥವಾ ಛತ್ರಿ ಬಳಸಿ.

•  ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಬಿಸಿಲಿನಲ್ಲಿ ಕೆಲಸ ಮಾಡುವಾಗ ಜಾಗರೂಕರಾಗಿರಿ.

•  ಆಯುರ್ವೇದ ಪರಿಹಾರಗಳು ಮತ್ತು ಮನೆಮದ್ದುಗಳು

•  ತ್ರಿಫಲ ನೀರಿನಿಂದ ಕಣ್ಣುಗಳನ್ನು ತೊಳೆಯಿರಿ: ರಾತ್ರಿಯಿಡೀ ತ್ರಿಫಲ ಪುಡಿಯನ್ನು ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಆ ನೀರಿನಿಂದ ಕಣ್ಣುಗಳನ್ನು ತೊಳೆಯಿರಿ.

•  ಮಹಾ ತ್ರಿಫಲ ಘೃತ: ಇದು ಕಣ್ಣಿನ ನರಗಳನ್ನು ಪೋಷಿಸುತ್ತದೆ ಮತ್ತು ವಾತ ದೋಷವನ್ನು ಕಡಿಮೆ ಮಾಡುತ್ತದೆ.

ಕಣ್ಣಿನ ಸಮಸ್ಯೆಗೆ ಮನೆಮದ್ದುಗಳು

•  ದಿನಕ್ಕೆ ಎರಡು ಬಾರಿ ಕ್ಯಾರೆಟ್ ಜ್ಯೂಸ್ ಕುಡಿಯಿರಿ

•  ಪ್ರತಿದಿನ ಬೆಳ್ಳುಳ್ಳಿ ಸೇವಿಸುವುದರಿಂದ ಕಣ್ಣುಗಳಿಗೆ ಪ್ರಯೋಜನವಾಗುತ್ತದೆ.

•  ರಾತ್ರಿ ಮಲಗುವ ಮುನ್ನ ಏಲಕ್ಕಿ ಹಾಲು ಕುಡಿಯಿರಿ.

•  ಬಾದಾಮಿ, ಕರಿಮೆಣಸು ಮತ್ತು ಸಕ್ಕರೆಯ ಮಿಶ್ರಣವು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ.

Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ

Leave a Reply

Your email address will not be published. Required fields are marked *