ಕರ್ನಾಟಕದಲ್ಲಿ ಸಿಕ್ಕ ಅಶೋಕನ ಶಾಸನ ನೋಡಿ ಶಾಕ್ ಆದ ಇತಿಹಾಸ ತಜ್ಞರು..?

ಕರ್ನಾಟಕದಲ್ಲಿ ಸಿಕ್ಕ ಅಶೋಕನ ಶಾಸನ ನೋಡಿ ಶಾಕ್ ಆದ ಇತಿಹಾಸ ತಜ್ಞರು..?

ಚಿತ್ರದುರ್ಗಜಿಲ್ಲೆಯ ಅಶೋಕ ಶಿಲಾಶಾಸನ ಪ್ರಾಚೀನ ಭಾರತದ ಪ್ರಥಮ ಐತಿಹಾಸಿಕ ಸಾಮ್ರಾಜ್ಯವೇ ಮಘಧ ಸಾಮ್ರಾಜ್ಯ.ಇದುಕ್ರಿ.ಪೂ. ನಾಲ್ಕನೆಯ ಶತಮಾನದ ನಂದರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲೂ ವಿಸ್ತರಿಸಿತು. ನಂದರು ಕುಂತಳದಲ್ಲಿ ಆಳಿದರೆಂಬುದನ್ನು ಹನ್ನೊಂದನೆಯ ಶತಮಾನದ ಕೆಲವು ಕನ್ನಡ ಶಾಸನಗಳು ತಿಳಿಸುತ್ತವೆ. ಆದರೆ ಕ್ರಿ.ಪೂ.322ರಲ್ಲಿ ನಂದರನ್ನು ಮೂಲೆಗೊತ್ತಿದ ನಂತರ ಭಾರತದ ಮೇಲೆ ಅಧಿಪತ್ಯ ಸ್ಥಾಪಿಸಿದವರೆ ಮೌರ್ಯ ವಂಶಸ್ಥರು. ಉತ್ತರದಲ್ಲಿ ಆಳ್ವಿಕೆ ನಡೆಸಿದ ಮೌರ್ಯರುಕರ್ನಾಟಕವನ್ನು ಆಳಿದರು ಎನ್ನುವುದಕ್ಕೆರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತುಚಿತ್ರದುರ್ಗ ಜಿಲ್ಲೆಗಳಲ್ಲಿ ದೊರೆತಿರುವಶಿಲಾಶಾಸನಗಳು ಸಾಕ್ಷಿಯಾಗಿವೆ.

ಮೌರ್ಯ ಸಾಮ್ರಾಜ್ಯದ ಸ್ಥಾಪಕ ಚಂದ್ರಗುಪ್ತ ಮೌರ್ಯನ ನಂತರ ಕ್ರಿ.ಪೂ.298ರಲ್ಲಿ ಅಧಿಕಾರಕ್ಕೆ ಬಂದ ಅವನ ಮಗ ಬಿಂದುಸಾರ 24 ವರ್ಷಗಳು ಅಳಿಕೆ ನಡೆಸಿದನು. ಬಿಂದುಸಾರತನ್ನತOದೆಯಿOದ ಪಡೆದ ಸಾಮ್ರಾಜ್ಯಕ್ಕೆಯಾವಧಕ್ಕೆಯ ಬಾರದಂತೆ ನೋಡಿಕೊಂಡನು.ಬಿAದುಸಾರನ ನಂತರ ಮೌರ್ಯ ಸಾಮ್ರಾಜ್ಯದಕೀರ್ತಿಯನ್ನು ಜಗತ್ಪçಸಿದ್ದ ಗೊಳಿಸಿದವನೇ ಸಾಮ್ರಾಟ ಅಶೋಕ ಚಕ್ರವರ್ತಿ.

ದೇವನಾಂಪ್ರಿಯ ಮತ್ತು ಪ್ರಿಯದರ್ಶಿ ಎಂಬ ಬಿರುದು ಪಡೆದಿದ್ದಅಶೋಕನು ಮೌರ್ಯ ಸಾಮ್ರಾಜ್ಯದಲ್ಲೇಅತ್ಯಂತ ಪ್ರಸಿದ್ಧ ಚಕ್ರವರ್ತಿ. ಕ್ರಿ.ಪೂ273 ರಿಂದ ಕ್ರಿ.ಪೂ232ರವರಿಗೆಅವನು ಆಳ್ವಿಕೆ ನಡೆಸಿದ್ದಾನೆ.ಪ್ರಾಚೀನ ಭಾರತದಲ್ಲಿಅತಿದೊಡ್ಡ ಸಾಮ್ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನು ಮೊದಲನೇ ಸಾಲಿನಲ್ಲಿ ನಿಲ್ಲುತ್ತಾನೆ. ‘ಅಶೋಕ’ ಶಬ್ಧಕ್ಕೆ – ಸಂಸ್ಕೃತದಲ್ಲಿ ಶೋಕವಿಲ್ಲದಎಂಬರ್ಥವಿದೆ.

ಅನೇಕ ದಂಡಯಾತ್ರೆಗಳ ನಂತರ, ಅಶೋಕನು ದಕ್ಷಿಣಏಷಿಯಾದ ಬಹುಭಾಗವಷ್ಟೇಅಲ್ಲಅದರಾಚೆಗೂ ಪಶ್ಚಿಮದಲ್ಲಿ ಇವತ್ತಿನಅಫ್ಘಾನಿಸ್ಥಾನ ಮತ್ತು ಪರ್ಶಿಯಾದಿಂದ ಪೂರ್ವದಲ್ಲಿ ಬಂಗಾಳ ಮತ್ತುಅಸ್ಸಾಂವರೆಗೆ, ದಕ್ಷಿಣದಲ್ಲಿಮೈಸೂರುವರೆಗೂರಾಜ್ಯವಾಳಿದನು.

ದಕ್ಷಿಣ ಭಾರತದಲ್ಲಿ ಕಳಿಂಗ ರಾಜ್ಯದ (ಈಗಿನ ಒರಿಸ್ಸಾ) ಧೌಲಿ ಪ್ರದೇಶದ ಬಳಿ ದಯಾ ನದಿಯತೀರದಲ್ಲಿಕ್ರಿ.ಪೂ.261 ನಡೆದರಲ್ಲಿಕಳಿಂಗ ಯುದ್ಧ ಅವನ ಕೊನೆಯಯುದ್ದವಾಯಿತು. ಅಲ್ಲಿನ ರಕ್ತಸಿಕ್ತ ಸನ್ನಿವೇಶವನ್ನು ನೋಡಿಅವರ ಮನಃ ಪರಿವರ್ತನೆಯಾಯಿತು.ಅಲ್ಲಿಂದ ಅವನು ಯುದ್ದವನ್ನು ತ್ಯಜಿಸಿ ಸತತ 32ವರ್ಷಗಳ ಕಾಲ ಒಂದೇಒOದುಯುದ್ದ ಮಾಡದೆ ಬೌದ್ಧಧರ್ಮ ಸ್ವೀಕರಿಸಿ, ತನ್ನ ಸಾಮ್ರಾಜ್ಯದಎಲ್ಲೆಡೆ ಶಿಲಾಶಾಸನಗಳ ಮೂಲಕ ನೀತಿ ಭೋಧನೆ ಮಾಡಲು ಶುರುಮಾಡಿದನು.

ಕರ್ನಾಟಕದಲ್ಲಿದೊರೆತOಶಿಲಾಶಾಸನಗಳು ರಾಜ್ಯದಬಹುಭಾಗ ಅಶೋಕನ ಆಳ್ವಿಕೆಗೆ  ಒಳಪಟ್ಟಿತ್ತು ಎಂಬುದಕ್ಕೆ ಪೂರಕ ದಾಖಲೆಗಳಿವೆ. ಚಿತ್ರದುರ್ಗಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಸಿದ್ದಾಪುರದಿಂದ ಒಂದು ಕಿ.ಮೀ.ದೂರದಕಾಡು ಸಿದ್ದಾಪುರದಲ್ಲಿ ಅಕ್ಷರಗುಂಡು, ಸಮೀಪದ ಹೊಲಗಳಲ್ಲಿನ ಗುಡ್ಡಗಳಲ್ಲಿ ಎಮ್ಮೆತಮ್ಮಣ್ಣಗುಂಡು ಹಾಗೂ ಇಲ್ಲಿಂದಮೂರು ಮೈಲಿ ದೂರದಜಟಂಗಿರಾಮೇಶ್ವರ ಬೆಟ್ಟದಲ್ಲಿನ ಬಳೆಗಾರರ ಗುಂಡುಎOದು ಕರೆಸಿಕೊಳ್ಳುತ್ತಿರುವ ಒಟ್ಟು ಮೂರು ಹಾಸು ಬಂಡೆಗಳ ಮೇಲೆ ಕೆತ್ತಿದ ಶಾಸನಗಳಿವೆ. ಇವು ಪುರಾತತ್ವಇಲಾಖೆಯ ವ್ಯಾಪ್ತಿಗೆ ಒಳಪಟ್ಟಿವೆ.

ಈ ಶಾಸನಗಳಲ್ಲಿ ಬೆಂಗಳೂರು-ಬಳ್ಳಾರಿ ರಾಜ್ಯಹೆದ್ದಾರಿಯಲ್ಲಿನರಾಂಪುರಕ್ಕಿOತ ಮುಂಚೆ ಸಿಗುವುದೇ ಅಶೋಕ ಸಿದ್ದಾಪುರ ಕ್ರಾಸ್. ಹೆದ್ದಾರಿಯಿಂದ 8 ಕಿ.ಮೀ. ದೂರ ಸಾಗಿದರೆರಸ್ತೆ ಬಲಭಾಗದಲ್ಲಿ22 ಸಾಲುಗಳನ್ನೊಳಗೊಂಡ ಅಶೋಕ ಶಿಲಾಶಾಸನ ಇರುವಕಲ್ಲಿನಕಟ್ಟಡವನ್ನುಕಾಣಬಹುದಾಗಿದೆ. ಅಶೋಕ ಸಿದ್ದಾಪುರದಲ್ಲಿನ ಶಿಲಾಶಾಸನಗಳು 1892ರಲ್ಲಿ ಸಂಶೋಧಕ ಬಿ.ಎಲ್.ರೈಸ್ ತಿಳಿಸುವವರೆಗೂ ಪತ್ತೆಯಾಗಿರಲಿಲ್ಲ. ಮಹಾರಾಜ ಅಶೋಕನ ಆಡಳಿತದಅವಧಿಯಲ್ಲಿ ಈ ಸ್ಥಳದಲ್ಲಿ ಇಸಿಲಾ ಪಟ್ಟಣಇತ್ತುಎಂದುಇಲ್ಲಿನಪ್ರಾಕೃತ ಭಾಷೆಯ ಬ್ರಾಹ್ಮೀ ಲಿಪಿಯಶಾಸನದಲ್ಲಿಉಲ್ಲೇಖಿಸಲಾಗಿದೆ.ಸರ್ ಮಾರ್ಟಿಮರ್ ವೀಲರ್, ಎಚ್.ಎಂ.ಕೃಷ್ಣ ಮುಂತಾದಇತಿಹಾಸಕಾರರು ನಡೆಸಿದ ಉತ್ಖನನ ವೇಳೆ ಈ ಸ್ಥಳದಲ್ಲಿ 2500 ವರ್ಷದ ಹಿಂದೆಇದ್ದಜನವಸತಿ ಪ್ರದೇಶ ಶಿಷ್ಟ ಸಂಸ್ಕೃತಿ ಹೊಂದಿತ್ತುಎAದು ತಿಳಿದುಬಂದಿದೆ.

ಇತಿಹಾಸಕಾರ ಹೆಚ್.ಜಿ.ವೆಲ್ಸ್ನು ಅಶೋಕನ ಕುರಿತು ಹೀಗೆ ಬರೆದಿದ್ದಾನೆ:

“ಜಗತ್ತಿನಇತಿಹಾಸದಲ್ಲಿ ಸಾವಿರಾರುರಾಜ ಮಹಾರಾಜರು, ಸಾಮ್ರಾಟರುತಮ್ಮನ್ನು ಬಗೆಬಗೆಯಿಂದ ಹೊಗಳಿಕೊಂಡಿದ್ದಾರೆ. ಅವರು ಸ್ವಲ್ಪವೇ ಕಾಲ ಶೋಭಾಯಮಾನರಾಗಿ ಹೊಳೆದರು.ಆದರೆ ಬಲು ಬೇಗ ಮರೆಯಾದರು.ಆದರೆ ಅಶೋಕನು ಇಂದಿಗೂ ಕೂಡನಕ್ಷತ್ರದ ಹಾಗೆ ಹೊಳೆಯುತ್ತಿದ್ದಾನೆ.”

ಶಾಸನದಲ್ಲಿತಂದೆ, ತಾಯಿಗಳಲ್ಲಿ ಹಾಗೂ ಗುರು ಹಿರಿಯರಲ್ಲಿ ವಿನಯದಿಂದ ನಡೆದುಕೊಳ್ಳಬೇಕು.ಪ್ರಾಣಿಗಳಲ್ಲಿ ದಯೆಇಡಬೇಕು.ಸತ್ಯವನ್ನು ನುಡಿಯಬೇಕು.ಹೀಗೆಯೇ ಶಿಷ್ಯರು ಆಚಾರ್ಯರನ್ನುಗೌರವಿಸಬೇಕು.ನೆಂಟರಲ್ಲಿ ಸರಿಯಾಗಿ ನಡೆದುಕೊಳ್ಳಬೇಕು.ಇದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವಧರ್ಮ, ಇದರಿಂದಲೇ ದೀರ್ಘಆಯಸ್ಸು ಸಿದ್ಧಿಸುತ್ತದೆ ಆದ್ದರಿಂದ ಪ್ರತಿಯೊಬ್ಬರು ಹೀಗೆಯೇ ನಡೆದುಕೊಳ್ಳಬೇಕು ಎನ್ನುವ ವಿವರಣೆದೊರೆಯುತ್ತದೆ. ಈ ಅಕ್ಷರಗುಂಡನ್ನು ಪ್ರಾಚೀನ, ಪುರಾತತ್ವೀಯ ಸ್ಥಳ ಹಾಗೂ ಅವಶೇಷಗಳ ಅಧಿನಿಯಮ ೧೯೫೮(೧೯೫೮ರ ೨೪)ರ ಪ್ರಕಾರರಾಷ್ಟಿಯ ಸ್ಮಾರಕಎಂದು ಘೋಷಿಸಲಾಗಿದೆ.

ಇಸಿಲಾ ಜನವಸತಿ ಪ್ರದೇಶದಲ್ಲಿಆರಂಭದಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಾಗಿದ್ದು, ಇವರಅವನತಿ ನಂತರಇಲ್ಲಿಜೈನಧರ್ಮ ಪ್ರವರ್ಧಮಾನಕ್ಕೆ ಬಂದಿತುಎOದು ಅಶೋಕ ಶಾಸನಕ್ಕೆ ಸಮೀಪವಿರುವಅಕ್ಕತಂಗಿಗುಡಿ ಬಳಿ ಇರುವ ನಿಷಧಿ ಕಲ್ಲುಗಳು, ಜೈನಬಸದಿಗಳು, ಸಮೀಪದ ಬೆಟ್ಟದ ಮೇಲಿರುವತ್ರಿಶಂಕೇಶ್ವರದೇವಾಲಯ, ಭಾಗ್ಯಲಕ್ಷ್ಮೀದೇವಸ್ಥಾನ ಸಾಕ್ಷಿಯಾಗಿದೆ.

ಜೈನಧರ್ಮಕ್ಕೆ ಸೇರಿದಇಬ್ಬರುಅಕ್ಕತಂಗಿಯರು ದೇವಸ್ಥಾನಗಳನ್ನು ನಿರ್ಮಿಸಲು ಉದ್ದೇಶಿಸಿ ಕಾರ್ಯ ಆರಂಭಿಸಿದರAತೆ. ಈ ಸಮಯದಲ್ಲಿ ಅಕ್ಕ ನನ್ನದೇವಸ್ಥಾನಚೆನ್ನಾಗಿರಬೇಕು ಎಂಬ ಆಸೆಯಿಂದತAಗಿಯನ್ನುತವರುಮನೆಗೆ ಕಳುಹಿಸಿ ನಿರ್ಮಾಣ ಆರಂಭಿಸಿದಾಗ ಈ ಸಂಗತಿ ತಿಳಿದು ತಂಗಿ ಅಕ್ಕನ ದೇವಸ್ಥಾನ ಪಕ್ಕದಲ್ಲಿದೇವಸ್ಥಾನ ನಿರ್ಮಾಣಕ್ಕೆಅಡಿಪಾಯ ಹಾಕಿದ್ದರೂಅದನ್ನು ಸ್ಥಗಿತಗೊಳಿಸಿ ಸುಮಾರು 1.5.ಕಿ.ಮೀ. ದೂರದಲ್ಲಿದೇವಸ್ಥಾನ ನಿರ್ಮಿಸಿದಳು ಎಂದು ಶಾಸನಗಳಲ್ಲಿ ಉಲ್ಲೇಖವಾಗಿದೆ.

ಎರಡನೇ ಶಾಸನ ಎಮ್ಮೆತಮ್ಮಣ್ಣಗುಂಡು ಎಂಬ ಕಲ್ಲಿನ ಬೆಟ್ಟದ ಮೇಲೆ ಇದೆ.ಇದುಇಪ್ಪತ್ತೆರಡು ಸಾಲುಗಳನ್ನು ಹೊಂದಿರುತ್ತದೆ ಮತ್ತು ಬಂಡೆಯ ಇಳಿಜಾರಿನ ಮೇಲ್ಮೆಯಲ್ಲಿ ವಿಭಿನ್ನಉದ್ದದ ರೇಖೆಗಳಲ್ಲಿ ಕೆತ್ತಲಾಗಿದೆ.ಮೂರನೆಯ ಶಾಸನವು ಬ್ರಹ್ಮಗಿರಿಯ ವಾಯುವ್ಯಕ್ಕೆ ಮೂರು ಮೈಲಿ ದೂರದಲ್ಲಿರುವಜಟ್ಟಂಗಿರಾಮೇಶ್ವರ ಬೆಟ್ಟದ ಪಶ್ಚಿಮ ಭಾಗದಲ್ಲಿದೆ.ಶಾಸನವನ್ನು

ಬಂಡೆಯಅತ್ಯOತಅನಿಯಮಿತ ಮತ್ತುಓರೆಯಾದ ಸಮತಲ ಮೇಲ್ಮೆಯಲ್ಲಿರಚಿಸಲಾಗಿದೆ.ಶಾಸನವನ್ನು ಬೆಟ್ಟದಲ್ಲಿರುವಜಟ್ಟಂಗಿರಾಮೇಶ್ವರದೇವಸ್ಥಾನಕ್ಕೆ ಹೋಗುವ ಮೆಟ್ಟಿಲುಗಳ ಮುಂದೆರಚಿಸಲಾಗಿದೆ.

ಇಲ್ಲಿಕಾಣುವಆನೆಯಚಿತ್ರ, ಇದು ಶಿಲಾಯುಗದ ಕಾಲದಲ್ಲಿ ಮಾನವನಿಂದಕೆತ್ತನೆಯಚಿತ್ರ.ಬಹುಶಃ ೧೩ ಅಡಿಯಎತ್ತರದ ಬಂಡೆಯ ಮೇಲೆ ಆನೆಯಚಿತ್ರ ಸ್ಪಷ್ಟವಾಗಿಕಾಣುತ್ತದೆ.ಅಶೋಕ ಶಿಲಾಶಾಸನಗಳಿಂದ 2.ಕಿ.ಮೀ ಅಂತರದಲ್ಲಿ ಮೌರ್ಯರಕಾಲದ ಸಮಾಧಿಗಳನ್ನು ನೋಡಬಹುದಾಗಿದೆ. ಇದು ಸಹ ಭಾರತೀಯ ಪುರಾತತ್ವಇಲಾಖೆಯಅಧೀನಕ್ಕೆ ಒಳಪಟ್ಟಿದೆ.

ಸಾಮ್ರಾಟ್ ಅಶೋಕನ ಅವಧಿಯಲ್ಲಿಧರ್ಮ ಪ್ರಚಾರ ವೇಳೆ ಬೃಹತ್ಕಲ್ಲುಬಂಡೆ ಮೇಲೆ ಶಾಸನ ಕೆತ್ತಲಾಗಿದೆ.ಗಾಳಿ, ಮಳೆ ಪರಿಣಾಮಅವನತಿ ಹಾದಿಯಲ್ಲಿದ್ದ ಈ ಶಾಸನಕ್ಕೆ ಈಚೆಗೆ ಪ್ರವಾಸೋದ್ಯಮ ಇಲಾಖೆ ಕಲ್ಲಿನಕಟ್ಟಡ ನಿರ್ಮಿಸಿದೆ.ಆದರೆ, ಕಟ್ಟಡಆವರಣದಲ್ಲಿ ಮೂಲಸೌಕರ್ಯ ಸೂಕ್ತವಾಗಿಲ್ಲ. ಹಾಸು ಬಂಡೆ ಮೇಲಿನ ಲಿಪಿ ಪಾಚಿಗಟ್ಟಿ ಮರೆಯಾಗುತ್ತಿದೆ.ಪಾರ್ಕ್, ಗಿಡ-ಮರಗಳು, ಶುದ್ಧಕುಡಿಯುವ ನೀರು ಸೇರಿದಂತೆಅಗತ್ಯ ಮೂಲಸೌಕರ್ಯಕಲ್ಪಿಸಬೇಕಾಗಿದೆ. ಹೊರರಾಜ್ಯ ಹಾಗೂ ಬೌದ್ಧಧರ್ಮಅನುಯಾಯಿ ದೇಶಗಳ ಪ್ರವಾಸಿಗಳು ಇಲ್ಲಿಗೆಹೆಚ್ಚಿನ ಪ್ರಮಾಣದಲ್ಲಿ ಬಂದು ಹೋಗುತ್ತಿದ್ದಾರೆ. ಇದಕ್ಕೆ ಸಂಬOಧಪಟ್ಟ ಇಲಾಖೆ ಪ್ರಚಾರ ಕೈಗೊಳ್ಳುವ ಜತೆಗೆ, ಕ್ಷೇತ್ರಗಳ ಅಭಿವೃದ್ಧಿಗೆ ಮುಂದಾಗಬೇಕಿದೆ.

ಅಶೋಕ ಸುಮಾರು ನಲವತ್ತು ವರ್ಷ ರಾಜ್ಯವಾಳಿದ.ಅವನ ನಂತರ ಮೌರ್ಯ ಸಾಮ್ರಾಜ್ಯ ಕೇವಲ ಐವತ್ತು ವರ್ಷದಲ್ಲಿಕೊನೆಗೊಂಡಿತು.ಅಶೋಕನಿಗೆ ಅನೇಕ ಹೆಂಡತಿಯರು, ಮಕ್ಕಳು ಇದ್ದರೂ, ಅವರ ಹೆಸರುಗಳು ಕಾಲಕ್ರಮೇಣ ಮರೆಯಾಗಿವೆ. ಆಶೋಕನು ತನ್ನರಾಜ್ಯದ ದಾಖಲೆಗಳನ್ನು ಬಿಟ್ಟು ಹೋಗದೆಯೇಇದ್ದಿದ್ದರೆ, ಅವನ ರಾಜ್ಯವು ಕಾಲ ಕ್ರಮೇಣಇತಿಹಾಸದಲ್ಲಿ ಮರೆಯಾಗುತ್ತಿತ್ತೋ ಏನೋ.ಆದರೆ ಈ ಬುದ್ಧಿಶಾಲಿ ಮಹಾರಾಜ, ತನ್ನ ಬೋಧನೆಗಳನ್ನು ಮತ್ತುಇತರ ಕಾರ್ಯಗಳ ದಾಖಲೆಗಳನ್ನು, ಅಧ್ಬುತವಾದಕಂಬಗಳ ಮೇಲೆ, ಬಂಡೆಗಳ ಮೇಲೆ ಕೆತ್ತಿಸಿದ್ದರಿಂದಅದು ಅನೇಕ ಇತಿಹಾಸಗಳಿಗೆ ಸಾಕ್ಷಿಯಾಗಿದೆ.ಅದನ್ನು ಇಂದಿಗೂ ಕಣ್ತುಂಬಿಕೊಳ್ಳಲು ಸಾಧ್ಯವಾಗಿದೆ.

Leave a Reply

Your email address will not be published. Required fields are marked *