ಖಾಕಿ ಬಲೆಗೆ ಬಿದ್ದಿದ್ದು ಹೇಗೆ ಪಾರಿವಾಳ ಮಂಜ?

ಖಾಕಿ ಬಲೆಗೆ ಬಿದ್ದಿದ್ದು ಹೇಗೆ ಪಾರಿವಾಳ ಮಂಜ?

ಬೆಂಗಳೂರು: ಭದ್ರತಾ ಸಿಬ್ಬಂದಿಯಿಲ್ಲದ ವಸತಿ ಸಮುಚ್ಚಯಗಳಲ್ಲಿ ಪಾರಿವಾಳಗಳನ್ನು (Pigeon) ಹಾರಿಸಿದ ನಂತರ, ಆ ಪಾರಿವಾಳಗಳನ್ನು ಹಿಡಿಯುವ ನಿಟ್ಟಿನಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬೆಂಗಳೂರು ಸಿಟಿ ಮಾರುಕಟ್ಟೆ ಠಾಣೆ ಪೊಲೀಸ್ ಸಿಬ್ಬಂದಿಗಳು ಬಂಧಿಸಿದ್ದಾರೆ.

ಭದ್ರತಾ ಅಧಿಕಾರಿಗಳು ಇಲ್ಲದ ವಸತಿ ಸಮುಚ್ಚಯದಲ್ಲಿ ಪ್ರವೇಶಿಸಿ, ಅಲ್ಲಿ ಬೀಗ ಜಡಿದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ ಆರೋಪದ ಮೇಲೆ ಪಾರಿವಾಳ ಮಂಜನನ್ನು ಬಂಧಿಸಿದ್ದಾರೆ.

ಬೆಂಗಳೂರು ನಗರದ ಹಲವು ಠಾಣೆಗಳಲ್ಲಿ ಪ್ರಕರಣಗಳು

ಬೆಂಗಳೂರಿನ ಕೇಂದ್ರ ಪ್ರದೇಶಗಳಾದ ಚಿಕ್ಕಪೇಟೆ, ಕೆ.ಆರ್. ಮಾರುಕಟ್ಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿರಂತರವಾಗಿ ಕಳತನದ ಕೃತ್ಯದಲ್ಲಿ ಭಾಗಿಯಾಗುತ್ತಿದ ತಿಗಳರಪೇಟೆಯ ಮಂಜುನಾಥ ಅಲಿಯಾಸ್ ಪಾರಿವಾಳ ಮಂಜ (38) ಬಂಧಿತ ಆರೋಪಿಯಾಗಿದ್ದಾನೆ. ಹಲವು ವರ್ಷಗಳಿಂದ ಮನೆಕಳ್ಳತನ ಮಾಡಿಕೊಂಡಿದ್ದ ಆರೋಪಿ ಮಂಜನ ವಿರುದ್ಧ ಬೆಂಗಳೂರು ನಗರದ ಹಲಸೂರು ಗೇಟ್ ಠಾಣೆ, ಕಬ್ಬನ್ಪಾರ್ಕ್ ಠಾಣೆ ಸೇರಿದಂತೆ ಹಲವು ಠಾಣೆಗಳಲ್ಲಿ ಸುಮಾರು 55ಕ್ಕೂ ಹೆಚ್ಚು ಕಳತನ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.

ಹಲವು ಬಾರಿ ಪೊಲೀಸರ ಅತಿಥಿ

ಹಲವು ಬಾರಿ ಪೊಲೀಸರ ಅತಿಥಿಯಾಗಿ ಜೈಲು ಸೇರಿದ್ದ ಪಾರಿವಾಳ ಮಂಜು, ನಂತರ ಕಳ್ಳತನ ಪಟ್ಟಿಯಲ್ಲಿ ಸ್ಥಾನ ಪಡೆದ ಬಳಿಕ, ತನ್ನ ವಿಳಾಸವನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮುಕುಂಡಪಲ್ಲಿಗೆ ಬದಲಿಸಿದ್ದ. ಆದರೆ, ಕಳ್ಳತನಕ್ಕೆಂದು ಬೆಂಗಳೂರಿಗೆ ಬರುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು : ಮುಡಾ ಕೇಸ್ನಿಂದ ಹರಿಯಾಣ ಚುನಾವಣೆ ಮೇಲೆ ಎಫೆಕ್ಟ್! ಮತ್ತೆ ಗುಡುಗಿದ ಮಾಜಿ ಸ್ಪೀಕರ್ ಕೆ ಬಿ ಕೋಳಿವಾಡ

ಬೆಂಗಳೂರಿನಲ್ಲಿ ಕಳ್ಳತನ, ತಮಿಳುನಾಡಿನಲ್ಲಿ ಐಷಾರಾಮಿ ಜೀವನ

ಆರೋಪಿ ಮಂಜುನಾಥನ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ ಅಧಿಕವಾಗಿ ಪಾರಿವಾಳಗಳನ್ನು ಹಾರಿಸಿ ಕಳ್ಳತನ ಪ್ರಕರಣ ಮಾಡಿರುವ ದೂರಿದ್ದು, ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಬೆನ್ನಟ್ಟಿ ತಮಿಳುನಾಡಿನಲ್ಲಿ ವಾಸವಿದ್ದ ಮಂಜನನ್ನು ಬಂಧಿಸಿದ, ನಂತರ ಇವನ ಮೇಲೆ ಹಲವಾರು ದೂರುಗಳಿರುವುದು ಬಯಲಾಗಿವೆ. ಬಂಧಿತ ಆರೋಪಿ ಮಂಜುನಾಥ್ ನಿಂದ ಪೊಲೀಸರು 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.

4-5 ಮಹಡಿಗಳ ಮನೆಗಳೇ ಟಾರ್ಗೆಟ್

ಬಂಧಿತ ಆರೋಪಿ ಮಂಜುನಾಥ ತನ್ನ ಮನೆಯಲ್ಲಿ ಏಳ ರಿಂದ ಎಂಟು ಪಾರಿವಾಳಗಳನ್ನು ಮನೆಯಲ್ಲಿ ಸಾಕುತ್ತಿದ್ದ. ಆದರೆ ಕಳ್ಳತನ ವೃತಿಗೆ ಮರಳುವ ಸಂದರ್ಭದಲ್ಲಿ ಎರಡು ಪಾರಿವಾಳಗಳನ್ನು ಮಾತ್ರ ತಗೆದುಕೊಂಡು ಸುತ್ತಾಡುತ್ತಿದ್ದ. ಸುತ್ತಾಟದ ವೇಳೆ ಎಲ್ಲಿ ಭದ್ರತಾ ಸಿಬ್ಬಂದಿಗಳಲ್ಲಿವೊ ಆ ಮನೆಗಳನ್ನೆ, ಆದರಲ್ಲೂ 4-5 ಮಹಡಿಗಳ ಮನೆಗಳೇ ಪಾರಿವಾಳ ಮಂಜನ ಟಾರ್ಗೆಟ್ ಆಗಿದ್ದವು. ಮಹಡಿ ಹತ್ತುವ ಮಂಜ ಬೀಗ ಹಾಕಿದ ಮನೆಗಳನ್ನು ನೋಡಿಕೊಂಡು ಕಳ್ಳತನ ಮಾಡುತ್ತಿದ್ದ. ಮಹಡಿ ಹತ್ತುವಾಗ ಯಾರಾದರೂ ಕೇಳಿದರೆ ಪಾರಿವಾಳ ಹಾರಿ ಹೋಗಿದೆ ಅದನ್ನು ತರಲು ಹೋಗುತ್ತಿದ್ದೇನೆ ಎಂದು ಹೇಳುತ್ತಿದ್ದ. ಒಂದು ವೇಳೆ ಯಾರು ತನ್ನನ್ನು ಗುರುತಿಸದೇ ಇದ್ದರೆ ಬೀಗ ಹಾಕಿರುವ ಮನೆಯನ್ನು ಪತ್ತೆ ಹಚ್ಚಿ ಬೀಗ ಮುರಿದು ಆಭರಣಗಳನ್ನು ಕಳವು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ಧಾರೆ. ಹಲವು ಬಾರಿ ಇದೇ ತಂತ್ರ ಉಪಯೋಗಿಸಿ ಕಳ್ಳತನ ಮಾಡಿರುವ ಮಂಜುನಾಥ ಪಾರಿವಾಳ ಮಂಜನೆಂದೇ ಕುಖ್ಯಾತಿಗಳಿಸಿದ್ದಾನೆ.

ಯಾರಿಗೂ ಅನುಮಾನ ಬರದ ಹಾಗೆ ಕಳ್ಳತನ

ಕಳ್ಳತನಕ್ಕೆಂದು ವಸತಿ ಸಮುಚ್ಚಯಗಳಲ್ಲಿ ಓಡಾಡುತ್ತಿದ್ದ ವೇಳೆ ಯಾರಾದರೂ ಪ್ರಶ್ನಿಸಿದರೆ ನನ್ನ ಪಾರಿವಾಳ ಕಟ್ಟಡಕ್ಕೆ ಹಾರಿ ಬಂದಿದ್ದು, ಅದನ್ನು ಹಿಡಿದುಕೊಂಡು ಹೋಗುತ್ತೇನೆ ಎಂದು ಹೇಳುತ್ತಿದ್ದ ಕಾರಣ, ಕಟ್ಟಡದ ಯಾವ ಸದಸ್ಯಯರಿಗೂ ಸಹ ಅವನ ಮೇಲೆ ಅನುಮಾನ ಬರುತ್ತಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಮಂಜುನಾಥ ಸುಲಭವಾಗಿ ಕಳ್ಳತನದ ಕೆಲಸ ಮುಗಿಸಿ, ಅಲ್ಲಿಂದ ಪರಾರಿಯಾಗಿ, ಕಳ್ಳತನದ ಆಭರಣಗಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡಿ, ಅಲ್ಲೇ ವೈಭವಪೊತ ಜೀವನ ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *