Cooking Tips: ಉಪ್ಪು, ಖಾರ ಹೆಚ್ಚಾದಾಗ ಅಡುಗೆ ರುಚಿ ಹಾಳಾಗುತ್ತದೆ. ಈ ಸಮಸ್ಯೆಗೆ ಸರಳ ಪರಿಹಾರಗಳನ್ನು ಅಜ್ಜಿ ಹೇಳಿಕೊಟ್ಟಿದ್ದಾರೆ. ಹೆಚ್ಚಿನ ರುಚಿಗಾಗಿ ಈ ಸಲಹೆ ಪಾಲಿಸಿ.

ಅಮ್ಮನಿಗೆ ಅಜ್ಜಿ ಹೇಳಿಕೊಟ್ಟ ಟಿಪ್ಸ್!
ಕೆಲವೊಮ್ಮೆ ಅಡುಗೆ ಮಾಡುವಾಗ ಉಪ್ಪು-ಖಾರ ಹೆಚ್ಚು ಕಡಿಮೆಯಾಗಿರುತ್ತದೆ. ಈ ಎರಡು ಪದಾರ್ಥಗಳು ಅಡುಗೆಯಲ್ಲಿ ಕಡಿಮೆಯಾದ್ರೆ ಸೇರಿಸಿಕೊಳ್ಳಬಹುದು. ಒಂದು ವೇಳೆ ಈ ಎರಡು ಪದಾರ್ಥ ಹೆಚ್ಚಾದರೆ ಏನು ಮಾಡಬೇಕು ಅಂತ ಗೊತ್ತೇ ಆಗಲ್ಲ. ಈ ಸಮಯದಲ್ಲಿ ಅಡುಗೆ ರುಚಿ ಹೆಚ್ಚಿಸಲು ಏನು ಮಾಡಬೇಕು ಎಂದು ನೋಡೋಣ ಬನ್ನಿ.
ಖಾರ ಅಧಿಕ!
ಅಡುಗೆ ಮಾಡುವಾಗ ಕೆಲವೊಮ್ಮೆ ಖಾರ ಹೆಚ್ಚು ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ಕೆಲವು ಸರಳ ಉಪಾಯಗಳಿಂದ ಖಾರ ಕಡಿಮೆಗೊಳಿಸಬಹುದು. ಈ ಸಲಹೆಗಳನ್ನು ಫಾಲೋ ಮಾಡಿದ್ರೆ ಅಡುಗೆ ಟೇಸ್ಟ್ ಹೆಚ್ಚಿಸಬಹುದು.
ಅಡುಗೆಯಲ್ಲಿ ಖಾರ ಹೆಚ್ಚಾದಾಗ ಕೆಲವೊಂದು ಪದಾರ್ಥಗಳನ್ನು ಸೇರಿಸಬೇಕು. ಖಾರ ಅಧಿಕವಾದಗ ಇದಕ್ಕೆ ಮನೆಯಲ್ಲಿರುವ ತರಕಾರಿಗಳನ್ನು ಸೇರಿಸಿ. ಇಲ್ಲವೇ ಸಾಂಬಾರ್ಗೆ ಒಂದಿಷ್ಟು ನೀರು ಸೇರಿಸಬಹುದು. ಇದರಿಂದ ಖಾರ ಕಡಿಮೆಯಾಗುತ್ತದೆ.
ಖಾರ ಕಡಿಮೆಯಾಗಿಸಲು ಸಾಂಬಾರ್ಗೆ ಹುಳಿ ಸೇರಿಸಬೇಕು. ಇದರಿಂದ ಖಾರ ಕಡಿಮೆಯಾಗೋದರ ಜೊತೆ ಹೊಸ ರುಚಿಯನ್ನು ಪಡೆದುಕೊಳ್ಳುತ್ತದೆ. ಹುಣಸೆಹಣ್ಣು ಅಥವಾ ನಿಂಬೆ ರಸ ಸೇರಿಸಿಕೊಳ್ಳಬಹುದು. ಹುಣಸೆ ಆದ್ರೆ ಸ್ವಲ್ಪ ನೀರು ಸೇರಿಸದಂತಾಗುತ್ತದೆ. ನೀರು ಸೇರ್ಪಡೆ ಮಾಡಲು ಇಷ್ಟವಿರದಿದ್ರೆ 1 ಟೀ ಸ್ಪೂನ್ ನಿಂಬೆ ಹಣ್ಣಿನ ರಸ ಸೇರಿಸಿಕೊಳ್ಳಿ.

ಅಡುಗೆಯಲ್ಲಿ ಉಪ್ಪು ಹೆಚ್ಚಾದ್ರೆ!
ಕೆಲವೊಮ್ಮೆ ಮರೆವಿನಿಂದ ಅಡುಗೆಯಲ್ಲಿ ಉಪ್ಪು ಹೆಚ್ಚಾಗಿರುತ್ತದೆ. ಅಡುಗೆಯಲ್ಲಿ ಹೆಚ್ಚಾಗಿರುವ ಉಪ್ಪನ್ನು ಸಹ ಕೆಲವೊಂದು ಸರಳ ವಿಧಾನಗಳ ಮೂಲಕ ಕಡಿಮೆ ಮಾಡಬಹುದು. ಅಜ್ಜಿ ಅಮ್ಮನಿಗೆ ಹೇಳಿಕೊಟ್ಟ ಟಿಪ್ಸ್ ಏನು ಎಂದು ನೋಡೋಣ ಬನ್ನಿ.
ಸಾಂಬಾರ್ನಲ್ಲಿ ಉಪ್ಪು ಹೆಚ್ಚಾದ್ರೆ ಸಣ್ಣಗೆ ಕತ್ತರಿಸಿದ ಆಲೂಗಡ್ಡೆ ಸೇರಿಸಿ 10 ರಿಂದ 15 ನಿಮಿಷ ಬೇಯಿಸಬೇಕು. ಇದರಿಂದ ಸಾಂಬಾರ್ನಲ್ಲಿರುವ ಉಪ್ಪಿನಂಶವನ್ನು ಆಲೂಗಡ್ಡೆ ಹೀರಿಕೊಳ್ಳುತ್ತದೆ. ಆಲೂಗಡ್ಡೆ ಬದಲಾಗಿ ಸೋಯಾ ಸೇರಿಸಿಕೊಳ್ಳಬಹುದು.
ಸಾಂಬಾರ್ನಲ್ಲಿ ಉಪ್ಪು ಹೆಚ್ಚಾದ್ರೆ ಒಂದಿಷ್ಟು ನೀರು ಸೇರಿಸಿಕೊಂಡು ಸರಿ ಮಾಡಿಕೊಳ್ಳಬಹುದು. ಪಲ್ಯ ಅಥವಾ ತಿಂಡಿಯಾಗಿದ್ರೆ ಅದಕ್ಕೆ ಸಂಬಂಧಿಸಿದ ಇನ್ನೊಂದಿಷ್ಟು ತರಕಾರಿಗಳನ್ನು ಸೇರಿಸಿಕೊಂಡ್ರೆ ಉಪ್ಪು ಕಡಿಮೆಯಾಗುತ್ತದೆ.
ಎಣ್ಣೆ ಅಧಿಕವಾದ್ರೆ ಕೆಲವೊಮ್ಮೆ ಸಾಂಬಾರಿನಲ್ಲಿ ಹೆಚ್ಚಾಗಿರುವ ಎಣ್ಣೆ ಅಂಶ ಮೇಲೆ ತೇಲುತ್ತಿರುತ್ತದೆ. ಈ ವೇಳೆ ಐಸ್ ಕ್ಯೂಬ್ನಿಂದ ಎಣ್ಣೆಅಂಶ ಬೇರ್ಪಡಿಸಬಹುದು. ಚಮಚದಿಂದ ನಿಧಾನವಾಗಿ ಎಣ್ಣೆ ಅಂಶ ತೆಗೆಯ