ಕಾಂಗ್ರೆಸ್ ಕುತಂತ್ರದಿಂದ ಸೋತಿದ್ದೇನೆ: ಕಣ್ಣೀರು ಹಾಕಿದ ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ಕುತಂತ್ರದಿಂದ ಸೋತಿದ್ದೇನೆ: ಕಣ್ಣೀರು ಹಾಕಿದ ನಿಖಿಲ್ ಕುಮಾರಸ್ವಾಮಿ

ರಾಮನಗರ : ಎರಡು ಭಾರಿ ನಾನು ಚುನಾವಣೆಯಲ್ಲಿ ಸೊತ್ತಿದ್ದೇನೆ. ನಾನು ಏನು ತಪ್ಪು ಮಾಡಿದ್ದೇನೆ ಗೊತ್ತಿಲ್ಲ. ಮಾಜಿ ಪ್ರಧಾನಿ ಮತ್ತು ಮಾಜಿ ಮುಖ್ಯ ಮಂತ್ರಿ ಮಗನಾಗಿ ಹುಟ್ಟಿರುವುದೇ ನನ್ನ ದುರದೃಷ್ಟನೋ ಗೊತ್ತಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದರು.

ಕನ್ನಮಂಗಲ ಗ್ರಾಮದ ಪ್ರಚಾರ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಭಾವುಕರಾದರು. ಈ ಚುನಾವಣೆಯಲ್ಲಿ ನಾನು ಕಣ್ಣೀರು ಹಾಕಬಾರದು ಅಂನ್ಕೊಂಡಿದ್ದೇ. ಆದರೆ ಸಾಕಷ್ಟು ನೋವುಗಳಿವೆ ಎಂದು ಭಾಷಣದ ವೇಳೆ ಕಣ್ಣೀರು ಹಾಕಿದರು.

ನಾನು ಎರಡು ಚುನಾವಣೆಯಲ್ಲೂ ಪೆಟ್ಟು ತಿಂದಿದ್ದೇನೆ.ಜನ ನನ್ನ ಪರವಾಗಿ ಮತ ಹಾಕಿದ್ದಾರೆ.ಆದರೆ ರಾಜಕೀಯ ಷಡ್ಯಂತ್ರಕ್ಕೆ ನಾನು ಬಲಿಯಾಗಿದ್ದೇನೆ. ಬಹಳ ನೋವಿನಲ್ಲಿ ಇದ್ದೇನೆ.ಇವತ್ತು ಪಕ್ಷದ ಕಾರ್ಯಕರ್ತರಿಗೆ ಬೆಲೆ ಕೊಡಬೇಕೆಂದು ಈ ಚುನಾವಣೆಯಲ್ಲಿ ನಿಂತಿದ್ದೇನೆ. ದಯವಿಟ್ಟು ಈ ಭಾರಿ ಈ ಯುವಕನನ್ನ ಗೆಲ್ಲಿಸಿ ಎಂದು ಎಂದು ಮನವಿ ಮಾಡಿದರು.

ಕಳೆದ ಭಾರಿ ಲೋಕ ಸಭೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಹಿ ಘಟನೆಯನ್ನು ನೆನೆಸಿಕೊಂಡು ನನ್ನ ಮೂಲಕ ಉತ್ತರ ಕೊಡ್ಬೇಕು ಅಂತ ಕಾರ್ಯಕರ್ತರಭಾವನೆಯಾಗಿತ್ತು ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಏನಾಗಿತ್ತು ಅಂತ ಎಲ್ಲರಿಗೂ ಗೊತ್ತು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಆಗ ನಾನು ದೇವೇಗೌಡರಿಗೆ ಸಾಹೇಬರಿಗೆ ಮನವಿ ಮಾಡ್ದೆ ಪ್ರಾದೇಶಿಕ ಪಕ್ಷ ಕಟ್ಟುವುದೇ ಕಷ್ಟ ಇದೇ, ರೈತ ಪರವಾಗಿ ಕಾಳಜಿ ಇಟ್ಟ್ಕೊಂಡು ಈ ಪಕ್ಷ ವನ್ನು ಕಟ್ಟಿದ್ದಾರೆ. ನಂತರ ಕುಮಾರಣ್ಣ ಅವರು ಅಧಿಕಾರ ಇರಲಿ ಇಲ್ಲದೆ ಇರಲಿ ರೈತರ ಪರವಾಗಿ ನಿರಂತರವಾಗಿ ಸಲ ಮನ್ನಾ ಮಾಡಿದ್ದಾರೆ.ಅನೇಕ ಅಭಿರುದ್ದಿ ಕೆಲಸಗಳು ಮಾಡಿದ್ದಾರೆ ಎಂದು ಹೇಳಿದರು.

ಕಳೆದ ಲೋಕಸಭೆಯಲ್ಲಿ ಪಕ್ಷದ ಸಂಘಟನೆ ದೃಷ್ಟಿಯಿಂದ ಇಡೀ ರಾಜ್ಯಾಧ್ಯತ ಪ್ರವಾಸ ಮಾಡುತಿದ್ದೆನೆ. ಪಕ್ಷದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ ಬೇಕೆಂಬು ದು ನನ್ನ ಅಭಿಲಾಷೆ. ಪ್ರಾದೇಶಿಕ ಪಕ್ಷ ಕಟ್ಟುವುದು ಕಷ್ಟ ಇದೆ. ನಿಮ್ಮೆಲ್ಲರ ಆಶೀರ್ವಾದದಿಂದ ಈ ಪಕ್ಷ ರಾಜ್ಯ ದಲ್ಲಿ ಉಳಿದುಕೊಂಡಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಚನ್ನಪಟ್ಟಣ ತಾಲ್ಲೂಕು ಅತ್ಯಂತ ಮಹತ್ವ ಪಡೆದುಕೊಂಡಿದೆ.ಅದಿಕ್ಕೆ ಕಾರಣ ಕುಮಾರಣ್ಣ ಸ್ಪರ್ಧೆ ಮಾಡಿದಂತ ಕ್ಷೇತ್ರ.ನಾನು ಪ್ರತಿ ಹಳ್ಳಿ ಹಳ್ಳಿಗೂ ಭೇಟಿ ನೀಡುತಿದ್ದೇನೆ. ದಯಮಾಡಿ ನಿಮ್ಮೆಲ್ಲರ ಸಹಕಾರ ವಿಶ್ವಾಸ ನನ್ನ ಮೇಲಿರಲಿ. ದೇವೇಗೌಡರು ಮತ್ತು ಕುಮಾರಣ್ಣನ ಕಾಲದಲ್ಲಿ ಚನ್ನಪಟ್ಟಣದಲ್ಲಿ ಸಾಕಷ್ಟು ಅಭಿರುದ್ದಿ ಮಾಡಿದ್ದಾರೆ ಎಂದರು. ನನ್ನ ಚುನಾವಣೆ ಅನಿರೀಕ್ಷಿತ ಬೆಳವಣಿಗೆ.ಈ ಚುನಾವಣೆಯಲ್ಲಿ ಕೊನೆ ಹಂತದಲ್ಲಿ ಎರಡು ಪಕ್ಷದ ಮುಖಂಡರು ನಿರ್ಣಯದಿಂದ ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ ಎಂದರು.

ನನ್ನನ್ನು ಗೆಲ್ಲಿಸಿದಾಗೆ ನಿಖಿಲ್ ಅವರನ್ನು ಗೆಲ್ಲಿಸಿ: ಡಾ ಮಂಜುನಾಥ್

ಅರಸು ಮನೆತನದ ರಾಜ ವಂಶ ಯದುವೀರ್ ಬಂದ್ದಿರುವುದು ನಿಖಿಲ್ ಕುಮಾರಸ್ವಾಮಿಗೆ ಆನೆ ಬಲ ಬಂದ ಹಾಗೆ. ರಾಜ್ಯದ ರೈತರಿಗೆ 1ಕೋಟಿ ರೂಪಾಯಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರ ಯಾವುದೇ ಸಹಕಾರ ಕೊಡ್ತಿಲ್ಲ. ನನಗೆ ಯಾವ ರೀತಿ ಪ್ರೀತಿ ತೋರಿಸಿ ಗೆಲ್ಲಿಸಿದ್ದಿರೋ ಹಾಗೆಯೇ ನಿಖಿಲ್ ಕುಮಾರಸ್ವಾಮಿ ಅವರ ಗೆಲ್ಲಿಸ ಬೇಕು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ. ಮಂಜುನಾಥ್ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯದುವೀರ್ ಅವರು, ರಾಜ್ಯದ ಇತಿಹಾಸದಲ್ಲಿ ಚನ್ನಪಟ್ಟಣ ಕ್ಷೇತ್ರ ಮುಖ್ಯವಾದುದು ,ಈ ಜಿಲ್ಲೆಯಲ್ಲಿ ಮಹಾನ್ ವ್ಯಕ್ತಿಗಳನ್ನ ಗೆಲ್ಲಿಸಿ ಕೊಟ್ಟಿದ್ದಿರಾ. ಹಾಗೆಯೇ NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನ ಗೆಲ್ಲಿಸಿ ಕೊಡಿ ಎಂದು ಸಂಸದರು ಮನವಿ ಮಾಡಿದರು.ಯುವನಾಯಕ ನಿಖಿಲ್ ಭವಿಷ್ಯದ ನಾಯಕನಾಗುವ ಎಲ್ಲಾ ಗುಣಗಳು ಇವೆ. ಇದು ರಾಜ್ಯದ ಭವಿಷ್ಯ ರೂಪಿಸುವ ಉಪಚುನಾವಣೆ ಅದಕ್ಕೆ ಇಲ್ಲಿಂದ ಗೆಲ್ಲಿಸಿ ಶಕ್ತಿ ತುಂಬಬೇಕು ಎಂದು ಸಂಸದ ಯದುವೀರ್ ತಿಳಿಸಿದರು

ಮೂಡಾ ಹಗರಣದ ವಿರುದ್ಧ ಬೆಂಗಳೂರಿನಿಂದ ಮೈಸೂರುವರೆಗೂ ನಡೆದ ಪಾದಯಾತ್ರೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರೂ ಪ್ರಮುಖ ಪಾತ್ರ ವಹಿಸಿದ್ದರು. ಅವರಿಗೆ ಮುಂದೆ ಒಳ್ಳೆಯ ನಾಯಕನಾಗಿ ಬೆಳೆಯುವ ಎಲ್ಲಾ ಅವಕಾಶಗಳು ಇವೆ. ಅಂತಹ ಅವಕಾಶಕ್ಕೆ ಚನ್ನಪಟ್ಟಣದ ಜನರೇ ನಾಂದಿ ಹಾಡಬೇಕು ಕ್ರಮ ಸಂಖ್ಯೆ ಒಂದು ನಿಖಿಲ್ ಕುಮಾರಸ್ವಾಮಿ ಗುರುತು ಗೆಲ್ಲಿಸಿ ಕೊಡಿ ಎಂದು ಸಂಸದರು ಮನವಿ ಮಾಡಿದರು.

Leave a Reply

Your email address will not be published. Required fields are marked *