ಮಂಡ್ಯ: ಕರ್ನಾಟಕದಲ್ಲಿ ಆರ್ಎಸ್ಎಸ್ ಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ, ರಾಜ್ಯದ ರಾಜಕೀಯ ವಾತಾವರಣ ಗರಿಗೆದರಿದಂತಾಗಿದೆ. ಇದರ ವಿರುದ್ಧವಾಗಿ ಮಂಡ್ಯದಲ್ಲಿ ‘I LOVE RSS’ ಎಂಬ ಘೋಷವಾಕ್ಯದೊಂದಿಗೆ ಭರ್ಜರಿ ಪೋಸ್ಟರ್ ಅಭಿಯಾನ ಆರಂಭವಾಗಿದೆ.
ಪೋಸ್ಟರ್ ಹಿಡಿದು ಘೋಷಣೆ ಕೂಗಿದ ಸ್ವಯಂಸೇವಕರು
ಮಂಡ್ಯದ ಹಲವೆಡೆ ಆರ್ಎಸ್ಎಸ್ ಸ್ವಯಂಸೇವಕರು “I LOVE RSS” ಪೋಸ್ಟರ್ಗಳನ್ನು ಹಿಡಿದು, ವಾಹನಗಳು, ಅಂಗಡಿಗಳ ಮೇಲೆ ಅಂಟಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
“ದೇಶದ ವಿರೋಧಿ ಸಂಘಟನೆಗಳನ್ನು ನಿಷೇಧಿಸಿ, ದೇಶ ಭಕ್ತ ಸಂಘಟನೆಗಳನ್ನಲ್ಲ” ಎಂಬ ಘೋಷಣೆಗಳು ಮಾರುಕಟ್ಟೆಗಳಲ್ಲಿ ಕೇಳಿಬಂದವು.
ರಾಜಕೀಯ ಕಗ್ಗಂಟು ಮತ್ತಷ್ಟು ಗಂಭೀರ
ಪ್ರಿಯಾಂಕ್ ಖರ್ಗೆಯ ಪತ್ರ ಹೊರಬಿದ್ದ ಬಳಿಕ, ಬಿಜೆಪಿಯಿಂದ ಆಕ್ರೋಶ ವ್ಯಕ್ತವಾಗಿದ್ದು, ಹಲವೆಡೆ ಆರ್ಎಸ್ಎಸ್ ಬೆಂಬಲಿಗರಿಂದ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದೆ. ಮಂಡ್ಯ ಈ ಹಿನ್ನಲೆಯಲ್ಲಿ ಪ್ರಥಮವಾಗಿ ಈ ‘ಪೋಸ್ಟರ್ ಕ್ಯಾಂಪೇನ್’ಗೆ ವೇದಿಕೆಯಾಗಿದ್ದು, ಇದು ಇತರ ಜಿಲ್ಲೆಗಳಲ್ಲಿಯೂ ಹರಡಬಹುದಾದ ಸಾಧ್ಯತೆ ಇದೆ.
ಸಾರ್ವಜನಿಕ ಪ್ರತಿಕ್ರಿಯೆ ಬರುವ ನಿರೀಕ್ಷೆ
ಈ ಕ್ಯಾಂಪೇನ್ ರಾಜಕೀಯವಾಗಿ ಯಾವುದೇ ಕಾನೂನು ಬಾಹಿರ ಅಂಶಗಳನ್ನು ಹೊಂದಿದೆಯಾ ಎಂಬುದರ ಬಗ್ಗೆ ಇದೀಗ ಸರ್ಕಾರ ಸ್ಪಷ್ಟನೆ ನೀಡಬೇಕಾದ ಅಗತ್ಯವಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನ already ಟ್ರೆಂಡ್ ಆಗುತ್ತಿದೆ.
For More Updates Join our WhatsApp Group :
