ನೈತಿಕತೆ ಇದ್ದಲ್ಲಿ ಸೋಮಶೇಖರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ  – A. A. P ಅಗ್ರಹ

ನೈತಿಕತೆ ಇದ್ದಲ್ಲಿ ಸೋಮಶೇಖರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ - A. A. P ಅಗ್ರಹ

ಬೆಂಗಳೂರು: ” ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಟಿ. ಸೋಮಶೇಖರ್ ರವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿದೆ. ಈತನ ವಿರುದ್ಧದ ಕ್ರಮ ಬಹಳ ಹಿಂದೆಯೇ ಆಗಬೇtಕಾಗಿದ್ದಂತ ಕೆಲಸ. ಏಕೆಂದರೆ ಒಬ್ಬ ಅಭ್ಯರ್ಥಿ ಬಿಜೆಪಿ ಚಿನ್ಹೆಯಿಂದ ಸ್ಪರ್ಧಿಸಿ ಬಿಜೆಪಿ ಕಾರ್ಯಕರ್ತರನ್ನು ಬಳಸಿಕೊಂಡು ಬಿಜೆಪಿಯ ತತ್ವ ಸಿದ್ಧಾಂತಕ್ಕೆ ನಾನು ಬದ್ಧನಾಗಿದ್ದೆ ಅಂತ ಹೇಳಿ ಮತದಾರರನ್ನು ಓಲೈಸಿ ಮತಗಳನ್ನು ಪಡೆದು ತಾನು ಗೆದ್ದ ನಂತರ ಊಸರವಳ್ಳಿ ತನ್ನ ಬಣ್ಣವನ್ನು ಬದಲಾಯಿಸುವ ರೀತಿ ಬಿಜೆಪಿಯ ಶಾಸಕನಾಗಿದ್ದರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೆ ಹಾಜರಾಗಿ ಮತ್ತು ತಮ್ಮನ್ನು ಗೆಲ್ಲಿಸಿದ ಕಾರ್ಯಕರ್ತರನ್ನು ಕಡೆಗಣಿಸಿದ್ದಕ್ಕೆ, ತಾವು ಮಾಡಿದ  ಭ್ರಷ್ಟಾಚಾರಕ್ಕೆಅವರಿಗೆ ಇಂದು ತಕ್ಕ ಉತ್ತರ ದೊರಕಿದೆ” ಎಂದು ಆಮ್ ಆದ್ಮಿ ಪಕ್ಷದ ಯಶವಂತಪುರ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಶಶಿಧರ್ ಆರಾಧ್ಯ  ಸುದ್ದಿಗಾರರೊಂದಿಗೆ ಮಾತನಾಡುತ್ತಾ ಟೀಕೆ ವ್ಯಕ್ತಪಡಿಸಿದರು.

” ಸೋಮಶೇಖರ್ ಅಭಿವೃದ್ಧಿ ಹೆಸರಿನಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರವನ್ನು ಕಸವಂತಪುರ ಕ್ಷೇತ್ರ ಮಾಡಿದ್ದಲ್ಲದೆ ಕ್ಷೇತ್ರದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡುವವರನ್ನು ಸಾಕಿ ಸಲಹಿ ಅವರ  ಪೋಷಣೆಗೆ ನಿಂತಿರುವುದು ಜಗತ್ ಜಾಹಿರಾಗಿದೆ. ತಮ್ಮನ್ನು ಪ್ರಶ್ನಿಸುವವರ ವಿರುದ್ಧ ನಾನಾ ರೀತಿಯ ಕೇಸ್ ಗಳನ್ನು ಹಾಕಿ ಅವರನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದ್ದಾರೆ.  ಇವರಿಗೆ ನಿಜವಾದ ನೈತಿಕತೆ ಇದ್ದಲ್ಲಿ ಅವರು ಈ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಕೊಟ್ಟು ಜನರ ಮುಂದೆ ಬಂದು ಮತ್ತೊಮ್ಮೆ ಚುನಾವಣೆ ಎದುರಿಸಿ ತೋರಿಸಿದರೆ ನಿಮ್ಮ ನಿಜವಾದ ಬಣ್ಣ ಬಯಲಾಗುತ್ತದೆ. ಜನ ನಿಮ್ಮನ್ನು ತಿರಸ್ಕರಿಸಲು ಸಿದ್ಧರಿದ್ದಾರೆ ಇನ್ನು ಮುಂದೆ ನೀವು ಯಾವುದೇ ಕಾರಣಕ್ಕೂ ಶಾಸಕರಾಗಲು ಜನ ಒಪ್ಪುವುದಿಲ್ಲ ನೀವು ಎಲ್ಲ ರೀತಿಯಲ್ಲೂ ಈ ಕ್ಷೇತ್ರವನ್ನು ನಿರ್ಲಕ್ಷಿಸಿದ್ದೀರಿ. ಬಿಡಿಎ, ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ರೈತರನ್ನು ಹೆದರಿಸಿ ಬೆದರಿಸಿ ಲೂಟಿ ಮಾಡಲು  ಹೊರಟಿರುತ್ತೀರಿ. ಈ ಕ್ಷೇತ್ರದ ಜನರ ಕಷ್ಟಗಳಿಗೆ ಮತ್ತು ಅವರ ಜೊತೆ ಸದಾ ನಿಲ್ಲಲು ನಆಮ್ ಆದ್ಮಿ ಪಾರ್ಟಿ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ” ಎಂದು ಶಶಿಧರ್ ಆರಾಧ್ಯ ಕಟುವಾಗಿ ಟೀಕಿಸಿದರು.

Leave a Reply

Your email address will not be published. Required fields are marked *