ಚಳಿಗಾಲದಲ್ಲಿ ಮೊಸರು ತಿನ್ನಬೇಕೇ ಅಥವಾ ಬೇಡ ಎನ್ನುವುದು ಹಲವರಲ್ಲಿ ಇರುವ ಅನುಮಾನ. ಚಳಿಗಾಲದಲ್ಲಿ ಮೊಸರು ತಿನ್ನುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಭಯ ಜನರಲ್ಲಿ ಇದೆ. ಇನ್ನು ಈಗಂತೂ ಮೈಕೊರೆಯುವ ಚಳಿ ಇದೆ. ಈ ರೀತಿ ಚಳಿ ಇದ್ದಾಗ ಮೊಸರು ತಿನ್ನುವುದು ದೇಹದ ಆರೋಗ್ಯಕ್ಕೆ ಉತ್ತಮವೇ ಅಥವಾ ಮೊಸರು ಸೇವಿಸುವುದು ಬಿಡಬೇಕೇ ಎನ್ನುವ ಬಗ್ಗೆ ವಿವರ ಇಲ್ಲಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ತುಂಬಾ ಜನ ಮೊಸರು ಸೇವಿಸುವುದರಿಂದ ದೂರವೇ ಉಳಿಯುತ್ತಾರೆ.
ಮೊಸರು ತಿಂದರೆ ಜ್ವರ, ಕೆಮ್ಮು ಅಥವಾ ಕಫ ಹೆಚ್ಚಾಗುತ್ತದೆ ಎನ್ನುವ ಆತಂಕ ಜನರಲ್ಲಿ ಇದೆ. ಆದರೆ, ಅಸಲಿ ಸತ್ಯ ಇರುವುದೇ ಬೇರೆ. ಭಾರತದಲ್ಲಿ ಆಯುರ್ವೇದದ ಪ್ರಕಾರ ರಾತ್ರಿ ಸಮಯದಲ್ಲಿ ಮೊಸರು ಸೇವಿಸಬಾರದು ಎಂದು ಮೊದಲಿನಿಂದಲೂ ಹೇಳಲಾಗುತ್ತದೆ. ಆದರೆ ಸಾಮಾನ್ಯವಾಗಿ ಬೆಳಿಗ್ಗೆ ಹಾಗೂ ಮಧ್ಯಾಹ್ನದ ಸಮಯದಲ್ಲಿ ಮೊಸರು ಸೇವಿಸುವುದು ಒಳ್ಳೆಯದೆ. ಚಳಿಗಾಲದಲ್ಲಿ ಮೊಸರು ಸೇವಿಸುವ ಬಗ್ಗೆ ತಜ್ಞರು ಹೇಳುವುದೇನು ಎನ್ನುವ ವಿವರ ನೋಡೋಣ.
ಚಳಿ… ಚಳಿ ಈಗ ಎಲ್ಲಾ ಕಡೆಯೂ ಚಳಿಯದ್ದೇ ಸುದ್ದಿ.. ಮೈಕೊರೆಯುವ ಚಳಿ ಇದೆ. ಆದರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ವಿಚಿತ್ರ ವಾತಾವರಣ ಇದೆ. ಬೆಳಿಗ್ಗೆ ಹಾಗೂ ಸಂಜೆ ತೀವ್ರ ಚಳಿ ಇದ್ದರೆ. ಇನ್ನುಳಿದ ಸಮಯದಲ್ಲಿ ಬಿಸಿಲು ಇದೆ. ಈ ರೀತಿಯ ಸಂದರ್ಭದಲ್ಲಿ ಆರೋಗ್ಯ ಕಾಳಜಿ ಮಾಡುವುದು ಒಳ್ಳೆಯದು. ಅದರಲ್ಲೂ ಶೀಘ್ರ ಶೀತ ಹಾಗೂ ತಂಡಿ ಆಗುತ್ತೆ ಎನ್ನುವವರು ಎಚ್ಚರಿಕೆ ವಹಿಸಬೇಕು. ಇನ್ನು ಕೆಲವರು ಚಳಿಗಾಲದಲ್ಲಿ ಮೊಸರನ್ನ, ಮೊಸರು ಬಜ್ಜಿ ಅಥವಾ ಮೊಸರು ಸಾರು ತಿನ್ನುವುದು ಇದೆ. ಹಾಗಾದರೆ ಚಳಿಯಲ್ಲೂ ಮೊಸರು ತಿನ್ನುವುದು ಒಳ್ಳೆಯದೇ ಅಂತ ಕೇಳಿದರೆ ತಜ್ಞರು ಹೌದು ಎನ್ನುತ್ತಾರೆ.
ಮೊಸರಿನಲ್ಲಿ ಹೆಚ್ಚು ಪೌಷ್ಟಿಕಾಂಶ ಇದೆ. ಹೀಗಾಗಿ, ಪೌಷ್ಟಿಕಾಂಶಯುಕ್ತವಾದ ಮೊಸರನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದು ಎನ್ನುತ್ತಾರೆ ಪೌಷ್ಟಿಕ ತಜ್ಞರು. ಅಲ್ಲದೆ ಚಳಿಗಾಲದಲ್ಲಿ ಮೊಸರು ಸೇವಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ತಪ್ಪು ಕಲ್ಪನೆಯಾಗಿದೆ.
HMPV ವೈರಸ್ ಅಂದ್ರೆ ಏನು? ಹೆದರುವಷ್ಟು ಡೇಂಜರಸ್ ವೈರಸ್ಸಾ? ಸಿಂಪಲ್ ಮೆಡಿಸಿನ್ ಏನು? ಮೊಸರು ಸೇವಿಸುವುದರಿಂದ ಹಲವು ಆರೋಗ್ಯಕಾರಿ ಲಾಭಗಳು ಇವೆ. ಹಾಗಾದರೆ ಮೊಸರು ಸೇವಿಸುವುದರಿಂದ ಆಗುವ ಪ್ರಮುಖ ಲಾಭಗಳೇನು. ಯಾರೆಲ್ಲ ಮೊಸರು ತಿನ್ನಬಹುದು ಎನ್ನುವುದನ್ನು ನೋಡೋಣ.. ದೇಹಕ್ಕೆ ಮೊಸರು ಒಳ್ಳೆಯದು: ನಿಯಮಿತವಾಗಿ ಮೊಸರು ತಿನ್ನುವುದು ಒಳ್ಳೆಯದು. ಇದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ. ಮೊಸರಿನಲ್ಲಿ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸುವ ಹಲವು ಅಂಶಗಳು ಇವೆ. ಮೊಸರಿನಲ್ಲಿ ಪ್ರೋಬಯಾಟಿಕ್ಗಳು, ಕ್ಯಾಲ್ಸಿಯಂ, ರಂಜಕ ಹಾಗೂ ಪೊಟ್ಯಾಸಿಯಮ್ ಸೇರಿದಂತೆ ಹಲವು ಉತ್ತಮ ಪೋಷಕಾಂಶಗಳು ಇವೆ. ಚಳಿಗಾಲದಲ್ಲಿ ನೀವು ಮೊಸರು ತಿನ್ನುವುದನ್ನು ಇಷ್ಟಪಟ್ಟರೆ ತೀರ ತಣ್ಣಗೆ ಸೇವಿಸದೆ ತುಸು ಬೆಚ್ಚಗಿನ (ಕೋಲ್ಡ್ ಇರದ) ಮೊಸರು ಸೇವಿಸುವುದು ಒಳ್ಳೆಯದು. ಒಗ್ಗರಣೆ ಹಾಕಿದ ಮೊಸರು, ಮೊಸರು ಬಜ್ಜಿ ಸೇವಿಸಬಹುದು. ಇನ್ನು ಚಳಿಗಾಲದಲ್ಲಿ ಮೊಸರು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದೇ ಆಗಲಿದೆ. ಜೀರ್ಣಕ್ರಿಯೆಗೆ ಇದು ಸಹಕಾರಿಯಾಗಿದೆ. ಅಲ್ಲದೆ ಇದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಸಹ ಹೆಚ್ಚಾಗುತ್ತದೆ. ಮೊಸರಿನಲ್ಲಿ ಇರುವ ಕ್ಯಾಲ್ಸಿಯಂ, ಬಿ 12 ಮತ್ತು ರಂಜಕದ ಅಂಶವು ಮೂಳೆಯ ಆರೋಗ್ಯಕ್ಕೆ ಒಳ್ಳೆಯದಾಗಿದೆ.