ಕರಿಯ ಕುಮಾರಸ್ವಾಮಿ ಬಿಜೆಪಿಗಿಂತ ಡೇಂಜರ್: HDK ವಿರುದ್ಧ ಸಚಿವರಿಂದ ಜನಾಂಗೀಯ ನಿಂದನೆ?

ತಾಯಿ ಚಾಮುಂಡೇಶ್ವರಿ ಮುಂದೆ ನಿಂತು ಹೇಳ್ತಿದ್ದೇನೆ, ಜಮೀರ್ ರನ್ನು 'ಕುಳ್ಳ' ಎಂದು ಕರೆದೆ ಇಲ್ಲ : HD ಕುಮಾರಸ್ವಾಮಿ ಸ್ಪಷ್ಟನೆ

ಚನ್ನಪಟ್ಟಣ: ರಾಜ್ಯದಲ್ಲಿ ನಡೆಯುತ್ತಿರುವ ಮಿನಿ ಸಮರದಲ್ಲಿ ಹೈವೋಲ್ಟೋಜ್ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ನಿನ್ನೆ ಸಚಿವ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಅವರು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

ಭಾಷಣದ ಮಧ್ಯೆ “ಕರಿಯ ಕುಮಾರಸ್ವಾಮಿ” ಎಂದು ಟೀಕಿಸಿದ್ದಾರೆ. ಈ ಮೂಲಕ ಕಪ್ಪು ವರ್ಣದ ಜನಾಂಗೀಯ ನಿಂದನೆ ಮಾಡಿದ್ದಾರೆ.

ನಿನ್ನೆ ರಾತ್ರಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ ಪರವಾಗಿ ಜಮೀರ್ ಅಹ್ಮದ್ ಪ್ರಚಾರ ನಡೆಸುವ ವೇಳೆ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡುವ ಭರದಲ್ಲಿ “ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಹೆಚ್ಚು ಡೇಂಜರ್” ಎಂದು ಉರ್ದುವಿನಲ್ಲಿ ಹೇಳಿದರು.

ಯೋಗೇಶ್ವರ್ ನಮ್ಮ ಪಾರ್ಟಿಯಿಂದ ರಾಜಕೀಯ ಪ್ರಾರಂಭ ಮಾಡಿದ್ರು ಆದರೆ ಕೆಲವು ವ್ಯತ್ಯಾಸಗಳಾಗಿ ಬಿಜೆಪಿಗೆ ಹೋದ್ರು. ಜೆಡಿಎಸ್ ಹೋಗಬೇಕು ಅಂತಿದ್ರೂ ಕರಿಯ ಕುಮಾರಸ್ವಾಮಿ, ಬಿಜೆಪಿಗಿಂತ ಡೇಂಜರ್ ಅಂತ ಜೆಡಿಎಸ್ ಗೆ ಹೋಗಿಲ್ಲ ಎಂದು ಜನಾಂಗೀಯ ನಿಂದನೆ ಮಾಡಿದ್ದಾರೆ.

ಈ ಹಿಂದೆ ಹಿಜಾಬ್ ಬೇಡ ಬೇಡ ಅಂದಿದ್ದೆ, ಈಗ ನಿನಗೆ ಮುಸಲ್ಮಾನರ ಓಟ್ ಬೇಕಾ? ಏ ಕುಮಾರಸ್ವಾಮಿ, ನಿನ್ನ ರೇಟ್ ಹೇಳು, ಮುಸಲ್ಮಾನರು ಒಂದೊಂದ್ ಪೈಸೆ ಹಾಕಿ ಇಡೀ ನಿನ್ನ ಕುಟುಂಬವನ್ನೇ ಖರೀದಿ ಮಾಡ್ತಾರೆ. ಈ ಕುಮಾರಸ್ವಾಮಿ ಬಿಜೆಪಿ ಹೋಗಿ ಮುಸಲ್ಮಾನರನ್ನು ಖರೀದಿ ಮಾಡ್ತಾನಂತೆ.. ಏ ಕುಮಾರಸ್ವಾಮಿ ನಿನ್ ರೇಟು ಹೇಳು, ಮುಸಲ್ಮಾನರಿಂದ ಚಂದಾ ಎತ್ತಿ ಇಡೀ ನಿನ್ನ ಕುಟುಂಬ ಖರೀದಿ ಮಾಡ್ತೇನೆ ಎಂದು ಮಾತನಾಡಿದ್ದಾರೆ.

ಈ ಹಿಂದಿನಿಂದಲೂ ಜಮೀರ್ ಹಾಗೂ ಕುಮಾರಸ್ವಾಮಿ ನಡುವಿನ ವಾಕ್ಸಮರ ನಡೆಯುತ್ತಲೇ ಇದೆ. ಈ ಹಿಂದೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಜಮೀರ್ಗೆ ಬಸ್ ಕ್ಲೀನ್ ಮಾಉತ್ತಿದ್ದವನು ಎಂಬ ಹೇಳಿಕೆ ನೀಡಿದ್ದರು. ಅದಕ್ಕೆ ಜಮೀರ್, ಹೌದು, ನಾನು ಬಸ್ ಮಾಲೀಕ, ನಮ್ಮ ಅಜ್ಜನ ಕಾಲದಿಂದಲೂ ನಾವು ಮಾಲೀಕರು. ನಾನು ಯಾವತ್ತೂ ನಮ್ಮ ಬಸ್ ಕ್ಲೀನ್ ಮಾಡಿಲ್ಲ. ಕುಮಾರಸ್ವಾಮಿ ಅವರಿಗೆ ಕುಳಿತುಕೊಳ್ಳಲು ಜಾಗವಿರಲಿಲ್ಲ. ನಮ್ಮ ಕಚೇರಿಯಲ್ಲಿ ನಾಲ್ಕು ಗಂಟೆಗಳ ಕಾಲ ಬಂದು ಕುಳಿತುಕೊಳ್ಳುತ್ತಿದ್ದರು. ಕುಮಾರಸ್ವಾಮಿ ಅವರಿಗೆ ಜಾಗ ಕೊಟ್ಟಿದ್ದೇನೆ. ಅವರ ಹಾಗೇ ನಾನು ಬಿಬಿಎಂಪಿಯಲ್ಲಿ ಕಸ ಗುಡಿಸಿಲ್ಲ, ಅವರ ಬಗ್ಗೆ ಹೇಳೋದಕ್ಕೆ ಇನ್ನೂ ಬಹಳಷ್ಟು ಇದೆ. ಸುಮ್ಮನೆ ನನ್ನ ಕೆಣಕಬೇಡಿ ಕುಮಾರಸ್ವಾಮಿ ಅವರೇ ಎಂದು ಎಚ್ಚರಿಕೆ ನೀಡಿ ಎಂದರು.

ಇನ್ನು, ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ, ಜಮೀರ್ ಅಹ್ಮದ್ ಖಾನ್ ಕೊಚ್ಚೆ. ಅದರ ಮೇಲೆ ಕಲ್ಲು ಹಾಕಿದರೆ ನಮ್ಮ ಮೇಲೆ ಬೀಳುತ್ತೆ. ನಾನು ಬಿಬಿಎಂಪಿ ಕಸ ಎತ್ತುವ ಟೆಂಡರ್ ಪಡೆದಿದ್ದು ನಿಜ. ಕಾಲು ಹಿಡಿದುಕೊಂಡು ಎಷ್ಟು ದುಡ್ಡು ತೆಗೆದುಕೊಂಡು ಹೋಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *