ಮಹಾ ಕುಂಭಮೇಳದಲ್ಲಿ 1ಕೋಟಿ ಕಪ್ ಚಹಾ ವಿತರಣೆ, ಗಿನ್ನೆಸ್ ವಿಶ್ವ ದಾಖಲೆಯತ್ತ KMF

ಮಹಾ ಕುಂಭಮೇಳದಲ್ಲಿ 1ಕೋಟಿ ಕಪ್ ಚಹಾ ವಿತರಣೆ, ಗಿನ್ನೆಸ್ ವಿಶ್ವ ದಾಖಲೆಯತ್ತ KMF

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಚಹಾ ವಿತರಿಸಲು ನಮ್ಮ ಕರ್ನಾಟಕದ ಹೆಮ್ಮೆಯ ಕೆಎಂಎಫ್ ʼಚಾಯ್ ಪಾಯಿಂಟ್ʼನೊOದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದದ ಭಾಗವಾಗಿ ಕುಂಭಮೇಳದಲ್ಲಿ 10 ಮಳಿಗೆಗಳನ್ನು ಸ್ಥಾಪಿಸಿದೆ. ಸುಮಾರು 1 ಕೋಟಿ ಕಪ್ ಚಹಾ ವಿತರಿಸುವ ಗುರಿಯನ್ನು ಹೊಂದಿದ್ದು, ಈ ಮೂಲಕ ಒಂದೇ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಚಹಾ ಮಾರಿದ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಲಾಗುವುದು ಎಂದು ಕೆಎಮ್‌ಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಂದೂ ಧರ್ಮದಲ್ಲಿನ ಅತ್ಯಂತ ದೊಡ್ಡ ಹಾಗೂ ಅತ್ಯಂತ ಪವಿತ್ರ ಉತ್ಸವಗಳಲ್ಲಿ ಒಂದಾದ ಮಹಾ ಕುಂಭಮೇಳ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13 ರಂದು ಆರಂಭವಾಗಿದ್ದು, ಫೆಬ್ರವರಿ 26ರ ವರೆಗೆ ಅಂದ್ರೆ ಸುಮಾರು 45 ದಿನಗಳ ಕಾಲ ನಡೆಯಲಿದೆ. ಈ ಮಹಾಕುಂಭಮೇಳದಲ್ಲಿ ಚಹಾ ವಿತರಿಸಲು ನಮ್ಮ ಕರ್ನಾಟಕದ ಹೆಮ್ಮೆಯ ಕೆಎಂಎಫ್ ʼಚಾಯ್ ಪಾಯಿಂಟ್ʼನೊOದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದದ ಭಾಗವಾಗಿ ಕುಂಭಮೇಳದಲ್ಲಿ 1೦ ಮಳಿಗೆಗಳನ್ನು ಸ್ಥಾಪಿಸಿದೆ. ಸುಮಾರು 1 ಕೋಟಿ ಕಪ್ ಚಹಾ ವಿತರಿಸುವ ಗುರಿಯನ್ನು ಹೊಂದಿದ್ದು, ಈ ಮೂಲಕ ಒಂದೇ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಚಹಾ ಮಾರಿದ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಲಾಗುವುದು ಎಂದು ಕೆಎಮ್‌ಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಚಾಯ್ ಪಾಯಿಂಟ್ ದೇಶದ ಅತಿದೊಡ್ಡ ಟೀ ಕೆಫೆ ಸಂಸ್ಥೆಯಾಗಿದ್ದು, ಇದರ ಸಹಯೋಗದೊಂದಿಗೆ ಕರ್ನಾಟಕದ ಹೆಮ್ಮೆಯ ಕೆಎಂಎಫ್ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ 1 ಕೋಟಿ ಕಪ್ ಚಹಾ ಮಾರಾಟ ಮಾಡಲಿದೆ. ಒಪ್ಪಂದದ ಭಾಗವಾಗಿ ಈಗಾಗಲೇ ಕುಂಭಮೇಳ ನಡೆಯುವ ಸ್ಥಳದಲ್ಲಿ 10 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಈ ಸ್ಟಾಲ್‌ಗಳಲ್ಲಿ ನೀಡಲಾಗುವ ಚಹಾಕ್ಕೆ ನಂದಿನಿ ಹಾಲನ್ನು ಬಳಸಲಾಗುವುದು. ಈ ಮೂಲಕ ಒಂದೇ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಚಹಾ ಮಾರಿದ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸುವ ನಿರೀಕ್ಷೆಯಲ್ಲಿ ಕೆಎಂಎಪ್ ಇದೆ. ಅಲ್ಲದೆ ಈ ಚಾಯ್ ಪಾಯಿಂಟ್ ಮಳಿಗೆಗಳಲ್ಲಿ ನಂದಿನಿ ಬ್ರಾಂಡ್‌ನ ಸಿಹಿ ಉತ್ಪನ್ನ ಮತ್ತು ಮಿಲ್ಕ್ ಶೇಕ್ ಸೇರಿದಂತೆ ನಂದಿನಿಯ ಇತರೆ ಉತ್ಪನ್ನಗಳು ಲಭ್ಯವಿರಲಿದೆ.

“ಈ ಪಾಲುದಾರಿಕೆಯ ಮೂಲಕ ಉತ್ತರ ಭಾರತದ ಮಾರುಕಟ್ಟೆಗಳಲ್ಲಿ ತನ್ನ ಬ್ರ್ಯಾಂಡ್ ವಿಸ್ತರಿಸುವ ಸಲುವಾಗಿ ನಂದಿನಿ ಈ ಹೆಜ್ಜೆ ಇಟ್ಟಿದೆ. ಮತ್ತು ರಾಷ್ಟ್ರವ್ಯಾಪಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಡೈರಿ ಉತ್ಪನ್ನಗಳನ್ನು ತಲುಪಿಸಲುವ ಗುರಿಯನ್ನು ಹೊಂದಿದೆ” ಕೆಎಮ್‌ಫ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

“ಮಹಾ ಕುಂಭಮೇಳ ನಡೆಯುತ್ತಿರುವ ಹೊತ್ತಿನಲ್ಲಿ ಕೆಎಂಎಫ್ ಚಾಯ್ ಪಾಯಿಂಟ್‌ನೊOದಿಗೆ ಪಾಲುದಾರಿಕೆಯನ್ನು ಹೊಂದಿದ್ದು ಬಹಳ ಸಂತೋಷವನ್ನು ತಂದಿದೆ. ಕುಂಭಮೇಳದಲ್ಲಿ ನಂದಿನಿ ಉತ್ಪನ್ನಗಳನ್ನು ಪ್ರದರ್ಶಿಸುವ ಮೂಲಕ ಗ್ರಾಹಕರಿಗೆ ಹಾಗೂ ಉತ್ತರ ಭಾರತದ ಕಡೆ ನಂದಿನಿ ಉತ್ಪನ್ನಗಳ ಲಭ್ಯತೆಯನ್ನು ಬಲ ಪಡಿಸಲು ಸುವರ್ಣಾವಕಾಶ ಸಿಕ್ಕಿದೆ.” ಎಂದು ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *