ಕೊರಟಗೆರೆ || ಶ್ರೀಶೈಲ ಮಲ್ಲಿಕಾರ್ಜುನ ರಥೋತ್ಸವ…ನೂರಾರು ಜನ ಭಕ್ತರು ರಥೋತ್ಸವದಲ್ಲಿ ಭಾಗಿ

ಕೊರಟಗೆರೆ || ಶ್ರೀಶೈಲ ಮಲ್ಲಿಕಾರ್ಜುನ ರಥೋತ್ಸವ...ನೂರಾರು ಜನ ಭಕ್ತರು ರಥೋತ್ಸವದಲ್ಲಿ ಭಾಗಿ

ಕೊರಟಗೆರೆ:  ತಾಲೂಕಿನ ಹೊಳವನಹಳ್ಳಿ ಹೋಬಳಿಯ ಧರ್ಮ ಕ್ಷೇತ್ರ ಹರಪಗೊಂಡನಹಳ್ಳಿಯ ಶ್ರೀ ಹಠಯೋಗೇಶ್ವರ ಶ್ರೀ ನಂಜುOಡೇಶ್ವರ ಒಡೆಯರ್ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ 55ನೇ ವರ್ಷದ ರಥೋತ್ಸವ ಬಹಳ ನಿಜಂಬಣೆಯಿOದ ಜರುಗಿತು.

ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ 55ನೇ ವರ್ಷದ ಬ್ರಹ್ಮರಥೋತ್ಸವ ಬಹಳ ವೈಭವತವಾಗಿ ಜರುಗಿ, ಪ್ರತಿವರ್ಷದಂತೆ ಈ ವರ್ಷವೂ ನೂರಾರು ಭಕ್ತಾದಿಗಳ ಸಮಕ್ಷಮದಲ್ಲಿ ರಥೋತ್ಸವ ಜರಗಿ, ದೇವಸ್ಥಾನದಲ್ಲಿ ಪೂಜೆ, ಹವನ ಹೋಮ ತಿರುಗಿ ನೂರಾರು ಭಕ್ತಾದಿಗಳು ದೇವರ ದರ್ಶನ ಪಡೆದು, ರಥೋತ್ಸವದಲ್ಲಿ ಪಾಲ್ಗೊಂಡು, ಪುನೀತ ಭಾವನೆಯಲ್ಲಿ ಹಿಂತಿರುಗುತ್ತದೆ ಎಂದು ಕಂಡುಬOತು.

ನಾಲ್ಮುಡಿ ಕೃಷ್ಣರಾಜ ಒಡೆಯರ್  ಪ್ರತಿಷ್ಠಾಪಿಸಿದ ಈ ಸುಕ್ಷೇತ್ರದಲ್ಲಿ ಸತತವಾಗಿ 55 ವರ್ಷಗಳಿಂದ ಜಾತ್ರಾ ಮಹೋತ್ಸವ ಜರಗುತ್ತಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಜಾತ್ರಾ ಮಹೋತ್ಸವವನ್ನು ಬಹಳ ವಿಜೃಂಭಣೆಯಿOದ ಜರುಗಿಸಲಾಗಿದ್ದು, ಮಲ್ಲಿಕಾರ್ಜುನ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ಸಾವಿರಾರು ಭಕ್ತಾದಿಗಳು ಜಾತ್ರೆಯಲ್ಲಿ ಸಾಕ್ಷಿಯಾಗಿದ್ದಾರೆ,

ಇಲ್ಲೊಂದು ಉದ್ಭವ ಶಿವಲಿಂಗ ಪ್ರತಿಷ್ಠಾಪನೆ ಆಗಿದ್ಧು, ಶ್ರೀರಾಮಚಂದ್ರ ಲಂಕಾ ಪಟ್ಟಣಕ್ಕೆ ಹೋಗುವ ಸಂದರ್ಭದಲ್ಲಿ ರಾವಣಾಸುರ ಸಂಹಾರಕ್ಕಾಗಿ ನಾರದ ಬರುತ್ತಾನೆ ಲಂಕಾ ಪಟ್ಟಣಕ್ಕೆ ಸೇತುವೆ ಕಟ್ಟಿ ಹೋಗ್ಬೇಕು, ಆಂಜನೇಯ ಸಮುದ್ರ ಹಾರಿ ಹೋಗುವ ಸಂದರ್ಭದಲ್ಲಿ ಒಂದು ಲಿಂಗ ರೂಪದ  ಕಲ್ಲಿಗೆ ಪೂಜೆ ಸಲ್ಲಿಸಲಾಗಿ ಅಂದು ಪ್ರತಿಷ್ಠಾಪಿಸಿದ ಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತಿದ್ದು, ಇಲ್ಲಿ ಬರುವ ಭಕ್ತಾದಿಗಳ ಹರಕೆ ಭಗವಂತ ಪೂರೈಸುತ್ತಿದ್ದು ಎಂತಹ ಸಮಸ್ಯೆ ಇದ್ದರೂ ಪರಿಹಾರ ಸಿಗಲಿದೆ.

Leave a Reply

Your email address will not be published. Required fields are marked *