ಕುಣಿಗಲ್ : ಶಾಲಾ ಕಾಲೇಜು ಬಳಿ ಕರ್ಕಶ ಶಬ್ದ ಮಾಡಿ, ವಿದ್ಯಾರ್ಥಿಗಳಿಗೆ ಹಾಗೂ ನಾಗರೀಕರ ತೊಂದರೆ ನೀಡುತ್ತಿದ್ದ ಮೂರು ಮಂದಿ ಬೈಕ್ ಸವಾರರನ್ನು ಕುಣಿಗಲ್ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ. ಪಟ್ಟಣದ ವಿವಿಧ ಶಾಲಾ ಕಾಲೇಜುಗಳ ಬಳಿ ಬೈಕ್ ಸವಾರರು ಕರ್ಕಶ ಶಬ್ದ ಮಾಡುತ್ತಿದ್ದರು ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆ ಉಂಟಾಗಿರುವುದನ್ನು ಗಮನಿಸಿದ ಕುಣಿಗಲ್ ವೃತ್ತ ನಿರೀಕ್ಷಕ ಎಸ್.ಬಿ.ನವೀನ್ಗೌಡ ಅವರ ನೇತೃತ್ವದ ಪೊಲೀಸರು ಸೋಮವಾರ ಮೂರು ಮಂದಿ ಚಾಲಕರ ವಿರುದ್ದ ಪ್ರಕರಣ ದಾಖಲಿಸಿ ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಕುಣಿಗಲ್ || ಬೈಕ್ಗಳಲ್ಲಿ ಕರ್ಕಶ ಶಬ್ದ : ಮೂರು ಮಂದಿ ಚಾಲಕರ ವಿರುದ್ದ : ಪ್ರಕರಣ ದಾಖಲು




