ಕುಣಿಗಲ್ : ರಾತ್ರಿ ವೇಳೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳನ್ನು ಕಳವು ಮಾಡಿ ಮಾರಾಟ ಮಾಡಿದ ಕಳ್ಳನನ್ನು ಹುಲಿಯೂರುದುರ್ಗ ಪೊಲೀಸರು ಬಂಧಿಸಿ ಎತ್ತುಗಳನ್ನು ಮಾಲಿಕರಿಗೆ ಹಿಂತಿರುಗಿದಿದ ಘಟನೆ ಜರುಗಿದೆ.
ಹುಲಿಯೂರುದುರ್ಗ ಹೋಬಳಿ ಕಂಪಲಾಪುರ ಗ್ರಾಮದ ವಾಸಿ ಪುಟ್ಟರಾಜು (27) ಬಂಧಿತ ಆರೋಪಿ.
ತನ್ನ ಗ್ರಾಮದಲ್ಲೇ ಎತ್ತು ಕಳ್ಳತನ : ಚನ್ನೇಗೌಡ ಎಚ್ಚರಗೊಂಡು ಎತ್ತುಗಳನ್ನು ನೋಡಲಾಗಿ ಕೊಟ್ಟಿಗೆಯಲ್ಲಿ ಇರಲಿಲ್ಲ, ಗಾಬರಿಗೊಂಡ ಚನ್ನೇಗೌಡ ಗ್ರಾಮಸ್ಥರಿಗೆ ವಿಚಾರ ತಿಳಿಸಿ, ಯುವಕರೊಂದಿಗೆ ಕೆ.ಜಿ.ಟೆಂಪಲ್ ಬಳಿ ಹೋಗಿ ನೋಡಲಾಗಿ ಬಾಷ ಎಂಬುವರ ಬಳಿ ಎತ್ತುಗಳು ಇರುವುದು ಪತ್ತೆಯಾಗಿದೆ, ವ್ಯಾಪಾರಿ ಬಾಷನನ್ನು ಚನ್ನೇಗೌಡ ವಿಚಾರಿಸಿದ್ದಾರೆ, ಪುಟ್ಟರಾಜು ಎಂಬುವರು ೪೩ ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದಾರೆ ಎಂದು ಬಾಷ ತಿಳಿಸಿ ಪುಟ್ಟರಾಜುವಿನ ಮೊಬೈಲ್ ನಂಬರ್ ಹಾಗೂ ಫೋಟೋವನ್ನು ಕೊಟ್ಟಿದ್ದಾರೆ. ನಂತರ ಚನ್ನೇಗೌಡ ಹುಲಿಯೂರುದುರ್ಗ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎತ್ತು ಮತ್ತು ಟೆಂಪೋವನ್ನು ವಶ ಪಡಿಸಿಕೊಂಡು, ಆರೋಪಿ ಪುಟ್ಟರಾಜುನನ್ನು ಬಂಧಿಸಿದ್ದಾರೆ. ಎತ್ತುಗಳನ್ನು ವಾರಸುದಾರರಿಗೆ ಪೊಲೀಸರು ಕೊಟ್ಟಿದ್ದಾರೆ.
ಒಂದೂವರೆ ಲಕ್ಷದ ಕದ್ದ ಎತ್ತುಗಳನ್ನು ೪೪ ಸಾವಿರಕ್ಕೆ ಕೊಂಡ ಬಾಷ..! : ಕಂಪಲಾಪುರ ಗ್ರಾಮದ ಚನ್ನೇಗೌಡ ತನ್ನ ಎರಡು ಎತ್ತುಗಳನ್ನು ಭಾನುವಾರ ರಾತ್ರಿ ಎಂದಿನAತೆ ಕೊಟ್ಟಿಗೆಯಲ್ಲಿ ಕಟ್ಟಿ ಮೇವು ಹಾಕಿ ಮಲಗಿದ್ದಾರೆ. ಅದೇ ಗ್ರಾಮದ ಪುಟ್ಟರಾಜು ಎಂಬುವವ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಕೊಟ್ಟಿಗೆಗೆ ನುಗ್ಗಿ ೧.೫೦ ಲಕ್ಷ ರೂ. ಬೆಲೆ ಬಾಳುವ ಎರಡು ಎತ್ತುಗಳನ್ನು ಕಳ್ಳತನ ಮಾಡಿದ್ದಾನೆ. ಸುಮಾರು ೧.೫ ಕಿ.ಮೀ. ದೂರದಲ್ಲಿ ನಿಲ್ಲಿಸಿದ್ದ ಬಾಡಿಗೆ ಟೆಂಪೋದಲ್ಲಿ ಎತ್ತುಗಳನ್ನು ತುಂಬಿಕೊAಡು ಕೆ.ಜಿ ಟೆಂಪಲ್ ಬಳಿ ಕೇವಲ ೪೪ ಸಾವಿರ ರೂ.ಗಳಿಗೆ ಬಾಷ ಎಂಬಾತನಿಗೆ ಮಾರಿ, ಏನು ಗೊತ್ತಿಲ್ಲದಂತೆ ಮನೆಗೆ ಬಂದು ಮಲಗಿದ ಭೂಪ..!