62 ಅಬಕಾರಿ ಕಚೇರಿಗಳಿಗೆ ಲೋಕಾಯುಕ್ತ ದಾಳಿ: ಗಾಂಜಾ ಪತ್ತೆ

ಅಕ್ರಮ ಆಸ್ತಿ ಗಳಿಕೆ ಆರೋಪ: ಎಫ್ಡಿಎ ಮನೆ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು: ಅಬಕಾರಿ ಪರವಾನಿಗೆ ವಿತರಣಾ ಮತ್ತು ನವೀಕರಣದಲ್ಲಿ ಅನಿಯಮಗಳು ನಡೆಯುತ್ತವೆ ಎಂದು ಬಂದ ದೂರುಗಳ ಹಿನ್ನೆಲೆಯಲ್ಲಿ, ಸಂಜೆ 62 ಅಬಕಾರಿ ವಿಭಾಗ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದರು. ಈ ದಾಳಿಯಲ್ಲಿ, ಹಲವಾರು ಕಚೇರಿಗಳಲ್ಲಿ ಗಾಂಜಾ, ಮದ್ಯದ ಬಾಟಲಿಗಳು ಮತ್ತು ದಾಖಲೆ ಇಲ್ಲದ 2 ಲಕ್ಷ ರೂಪಾಯಿ ಪತ್ತೆಯಾದವು.

ಸಾರ್ವಜನಿಕರ ದೂರುಗಳ ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ತನಿಖೆಗೆ ತಂಡಗಳನ್ನು ರಚಿಸಲಾಗಿತ್ತು. ಇದರಂತೆ ಮಂಗಳವಾರ ಮಧ್ಯಾಹ್ನ ಲೋಕಾಯುಕ್ತ ಅಧಿಕಾರಿಗಳು, ಪೊಲೀಸರು 62 ಅಬಕಾರಿ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಯಶವಂತಪುರ ಮತ್ತು ಬ್ಯಾಟರಾಯನಪುರ ಅಬಕಾರಿ ಕಚೇರಿಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಹಲವು ಲೋಪದೋಷಗಳ ಕಂಡು ಬಂದಿದ್ದು, ತನಿಖೆಗೆ ಆದೇಶಿಸಿದ್ದಾರೆಂದು ತಿಳಿದುಬಂದಿದೆ.

ದಾಳಿಯ ವೇಳೆ 2 ಲಕ್ಷ ಹಣ, ಗಾಂಜಾ ಮತ್ತು ಮದ್ಯದ ಬಾಟಲಿಗಳನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸುತ್ತವೆ. ಲೋಕಾಯುಕ್ತ ಕಚೇರಿಗೆ ಸುಮಾರು 132 ದೂರುಗಳು ಬಂದಿದ್ದು, ಎಲ್ಲವನ್ನು ಪರಿಶೀಲಿಸಲಾಗುತ್ತಿದೆ, ಜೊತೆಗೆ ಅಬಕಾರಿ ಕಚೇರಿಯ ವ್ಯವಹಾರಗಳ ಕುರಿತಂತೆ ಅಧ್ಯಯನ ನಡೆಸಲಾಗಿದೆ. ಎಸ್ಪಿಗಳು, ಡಿವೈಎಸ್ಪಿಗಳು, ಇನ್ಸ್ ಪೆಕ್ಟರ್ಗಳು, ಜ್ಯೂಡಿಷಲ್ ಅಧಿಕಾರಿಗಳು ಮತ್ತು ಉಪಲೋಕಾಯುಕ್ತ ಇನ್ನು ಮುಂದೆ ತನಿಖೆ ನಡೆಸಿರುವುದಾಗಿ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ ತಿಳಿಸಿದ್ದಾರೆ.

Leave a Reply

Your email address will not be published. Required fields are marked *