ಕುಣಿಗಲ್ : ಅಡಕೆ ತುಂಬಿಕೊಂಡು ಬರುತ್ತಿದ್ದ ಮಿನಿ ಮಿನಿ ಟ್ರ್ಯಾಕ್ಟರ್ ಹಳ್ಳಕ್ಕೆ ಉರುಳಿ ಬಿದ್ದು ತಂದೆ ಮಗ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕೊತ್ತಗೆರೆ ಹೋಬಳಿ ಲಕ್ಕೆಗೌಡನ ಪಾಳ್ಯ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ಜಾಣಗೆರೆ ಗ್ರಾಮದ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರ ಸಹೋದರ ಶಿವರಾಮಯ್ಯ (53) ಮತ್ತು ಆತನ ಮಗ ಹರೀಶ್ (22) ಮೃತ ದುರ್ದೈವಿಗಳು.
ಘಟನೆ ವಿವರ : ಭಾನುವಾರ ಶಿವರಾಮಯ್ಯ ಮತ್ತು ಆತನ ಮಗ ಹರೀಶ ಕೋಡಿಪಾಳ್ಯ ಗ್ರಾಮಕ್ಕೆ ಹೋಗಿ ಅಡಕೆ ಕಾಯಿಯನ್ನು ಮಿಷಿನ್ನಲ್ಲಿ ಸುಲಿಸಿಕೊಂಡು ತಮ್ಮ ಸಂಬಂಧಿಕರ ಮಿನಿ ಟ್ರ್ಯಾಕ್ಟರ್ ನಲ್ಲಿ ಅಡಕೆ ಮತ್ತು ಅಡಕೆ ಸಿಪ್ಪೆ ತುಂಬಿಕೊAಡು ತಮ್ಮ ಗ್ರಾಮಕ್ಕೆ ಬರುತ್ತಿದ್ದರು. ಲಕ್ಕೆಗೌಡನಪಾಳ್ಯ ಗ್ರಾಮದ ರಸ್ತೆ ತಿರುವಿನಲ್ಲಿ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದ ಕಾರಣ ಶಿವರಾಮಯ್ಯ ಮತ್ತು ಹರೀಶ ಟ್ರ್ಯಾಕ್ಟರ್ ಟ್ರೇಲರ್ ಕೆಳಗಡೆ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ, ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.