ಮುನಿರತ್ನ ನಾಯ್ಡು ಜಾಮೀನು ವಿಚಾರಣೆ ಏನಾಯ್ತು ?

ಮುನಿರತ್ನ ನಾಯ್ಡು ಜಾಮೀನು ವಿಚಾರಣೆ ಏನಾಯ್ತು ?

ಗುತ್ತಿಗೆದಾರನಿಗೆ ಜೀವ ಬೆದರಿಕೆ ಮತ್ತು ಜಾತಿನಿಂದನೆ ಹಾಗೂ ಅತ್ಯಾಚಾರ ಆರೋಪ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿರುವ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಕೇಸ್ ವಿಚಾರಣೆ ನಡೆದಿದೆ. ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಮುನಿರತ್ನ ನಾಯ್ಡು ಎ1 ಆರೋಪಿಯಾಗಿದ್ದಾನೆ.

ಒಮ್ಮೆ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಮತ್ತೊಂದು ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಇದೀಗ ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿಗಾಗಿ ಮುನಿರತ್ನ ಕಾಯುತ್ತಿದ್ದಾರೆ. ಆದರೆ…

ಕರ್ನಾಟಕದ ಪ್ರಭಾವಿ ಶಾಸಕ ಹಾಗೂ ನಿರ್ಮಾಪಕ ಮುನಿರತ್ನ ನಾಯ್ಡು ಮೇಲೆ ಕೇಳಿ ಬಂದಿರುವ ಭಯಾನಕ ಕೇಸ್ಗಳು ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿವೆ. ವಿರೋಧಿಗಳನ್ನು ಕಟ್ಟಿಹಾಕಲು ಬಳಸುತ್ತಿರುವ ತಂತ್ರ, ಎಚ್ಐವಿ ಇಂಜೆಕ್ಷನ್ ಹಾಗೂ ಎಚ್ಐವಿ ಸೋಂಕಿತರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡುವುದು ಸೇರಿದಂತೆ ಹಲವು ಕುತಂತ್ರಗಳನ್ನು ಮುನಿರತ್ನ ಅನುಸರಿಸಿದ್ದಾನೆ. ಈ ರೀತಿಯ ಭಯಾನಕ ಹಾಗೂ ಸ್ಫೋಟಕ ವಿಚಾರಗಳು ಸಾರ್ವಜನಿಕರನ್ನು ಮಾತ್ರವಲ್ಲ, ಅವರದ್ದೇ ಪಕ್ಷದ ನಾಯಕರಲ್ಲೂ ಆತಂಕ ಮೂಡಿಸಿದೆ. ಖುದ್ದು ಬಿಜೆಪಿಯ ನಾಯಕರು ಸಹ ಈ ಸುದ್ದಿ ಕೇಳಿ ಶಾಕ್ ಆಗಿದ್ದಾರೆ.

ಅತ್ಯಾಚಾರ ಕೇಸ್ ಏನಾಯ್ತು: ಇನ್ನು ಲೈಂಗಿಕ ಕಿರುಕುಳ ಆರೋಪದ ಪ್ರಕರಣದ ವಿಚಾರಣೆಯು ಸೋಮವಾರ ನಡೆದಿದೆ. ಅತ್ಯಾಚಾರ ಪ್ರಕರಣದಲ್ಲಿ ಮುನಿರತ್ನ A1 ಆರೋಪಿಯಾಗಿದ್ದಾನೆ. ಈ ಪ್ರಕರಣದ ವಿಚಾರಣೆಯು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಮುನಿರತ್ನ ಜಾಮೀನಿಗಾಗಿ ನಿರೀಕ್ಷೆ ಮಾಡುತ್ತಿದ್ದಾನೆ.

ಆದರೆ, ಅತ್ಯಾಚಾರ ಪ್ರಕರಣದಲ್ಲಿ ಮುನಿರತ್ನ ನಾಯ್ಡುಗೆ ಜಾಮೀನು ಸಿಕ್ಕಿಲ್ಲ. ಜಾಮೀನು ಅರ್ಜಿಗೆ ಸಂಬಂಧಿಸಿದ ವಿಚಾರಣೆಯನ್ನು ಕೋರ್ಟ್ ನಡೆಸಿದೆ. ಪ್ರಕರಣದಲ್ಲಿನ ಇತರೆ ಆರೋಪಿಗಳಾದ ಲೋಹಿತ್, ಕಿರಣ್ ಹಾಗೂ ಮಂಜುನಾಥ್ಗೆ ಜಾಮೀನು ಮಂಜೂರು ಮಾಡಲಾಗಿದೆ. ಆದರೆ, ಮುನಿರತ್ನ ನಾಯ್ಡುಗೆ ಜಾಮೀನು ಸಿಕ್ಕಿಲ್ಲ.

ಈಗಾಗಲೇ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿನಿಂದನೆ ಕೇಸ್ನಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಗಿತ್ತು. ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ಹಲವು ದೂರುಗಳು ಕೇಳಿ ಬಂದಿದ್ದವು. ಅದರಲ್ಲಿ ಅತ್ಯಾಚಾರ ಪ್ರಕರಣವೂ ಒಂದಾಗಿದೆ. ಈಚೆಗೆ ಮುನಿರತ್ನ ನಾಯ್ಡು ಮೇಲೆ ಅತ್ಯಾಚಾರ ದೂರು ದಾಖಲಿಸಿಕೊಳ್ಳಲಾಗಿತ್ತು.

ಮುನಿರತ್ನ ದೂರಿನ ಹಿನ್ನೆಲೆ ಏನು

ರಾಮನಗರ ಜಿಲ್ಲಾಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಬೆಂಗಳೂರು ಮೂಲದ ಮಹಿಳೆಯೊಬ್ಬರು ಮುನಿರತ್ನ ವಿರುದ್ಧ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದರು. ಹೀಗಾಗಿ, ಮುನಿರತ್ನ ವಿರುದ್ಧ ರಾಮನಗರ ಕಗ್ಗಲೀಪುರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯು ಕಗ್ಗಲೀಪುರದ ರೆಸಾರ್ಟ್ನಲ್ಲಿ ಅತ್ಯಾಚಾರ ನಡೆಸಲಾಗಿದೆ ಆರೋಪಿಸಿ ಮುನಿರತ್ನ ವಿರುದ್ಧ ದೂರು ನೀಡಿದ್ದರು. ಹೀಗಾಗಿ ಮುನಿರತ್ನ ಸೇರಿ ಒಟ್ಟು 7 ಜನರ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿತ್ತು. ವಿವಿಧ ಸೆಕ್ಷನ್ಗಳಡಿ ದೂರು ದಾಖಲಾಗಿದೆ. ಬಿಎನ್ಎಸ್ 354ಎ, 354 ಸಿ, 376, 506, 504, 120(ಬಿ), 149, 384, 406, 308 ಸೆಕ್ಷನ್ಗಳಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.

ಗುತ್ತಿಗೆದಾರನಿಗೆ ಜೀವ ಬೆದರಿಕೆ ಮತ್ತು ಜಾತಿನಿಂದನೆ ಮಾಡಿರುವ ಕೇಸ್ನಲ್ಲಿ ಮುನಿರತ್ನ ಅವರ ವಿರುದ್ಧ ಒಕ್ಕಲಿಗ, ದಲಿತ ಸಂಘಟನೆಗಳು ಸರಣಿ ಪ್ರತಿಭಟನೆ ಮಾಡಿದ್ದವು.

Leave a Reply

Your email address will not be published. Required fields are marked *