ಮೈಸೂರು || ಹೆಚ್ಚಿನ ಭದ್ರತೆಗಾಗಿ‌  ಐಜಿಯವರಿಗೆ‌ ಲೆಟರ್ ಕೊಟ್ಟಿದ್ದೇನೆ: ಎಂಎಲ್ ಸಿ ರಾಜೇಂದ್ರ

ಮೈಸೂರು || ಹೆಚ್ಚಿನ ಭದ್ರತೆಗಾಗಿ ಐಜಿಯವರಿಗೆ ಲೆಟರ್ ಕೊಟ್ಟಿದ್ದೇನೆ: ಎಂಎಲ್ ಸಿ ರಾಜೇಂದ್ರ

ಪ್ರಜಾಪ್ರಗತಿ. ಕಾಂ

ಮೈಸೂರು: ಹನಿಟ್ರ್ಯಾಪ್ ಗೆ ಯತ್ನ ಮತ್ತು ಹತ್ಯೆಗೆ  ಸುಪಾರಿ ಪ್ರಕರಣ ಸಂಬಂಧ ಎಂಎಲ್ ಸಿ  ರಾಜೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಪ್ರಜಾಪ್ರಗತಿ ಯೊಂದಿಗೆ  ಮಾತನಾಡಿದ  ಎಂಎಲ್ ಸಿ ರಾಜೇಂದ್ರ, ಸಚಿವ ರಾಜಣ್ಣ ಅವರ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮನ್ನು ಟ್ರ್ಯಾಪ್ ಮಾಡಲು ಪ್ರಯತ್ನ ಪಟ್ಟಿದ್ದಾರೆ. ಹತ್ಯೆ ಮಾಡಲು ಕೂಡ ಸಂಚು ನಡೆದಿದೆ. ನಾವು ಈಗಾಗಲೇ ದೂರು ಕೊಟ್ಟಿದ್ದೇವೆ ಯಾರು ಯಾಕೆ ಈ ರೀತಿ ಟಾರ್ಗೆಟ್ ಮಾಡಿದರು ಗೊತ್ತಿಲ್ಲ. ನಾವೇನು ರಿಯಲ್ ಎಸ್ಟೇಟ್ ಮಾಡಲ್ಲ. ಮೊದಲು ವಿಷಯ ತಿಳಿದಾಗ ತಮಾಷೆ ಅನ್ನಿಸುತ್ತೆ. ಆಮೇಲೆ ಯಾವಾಗ ಹನಿ ಟ್ರ್ಯಾಪ್ ಯತ್ನ ಆಯಿತೋ ನಾನೇ ಸಿರಿಯಸ್ ಆಗಿ ತೆಗೆದುಕೊಂಡೆ. ನಮ್ಮ ತಂದೆ ಅವರು ಕೂಡ ಈ ವಿಚಾರವನ್ನ  ಸಿರಿಯಸ್ ಆಗಿ ತೆಗೆದುಕೊಂಡರು. ಈಗ ಆಡಿಯೋ ಅನುಸರಿಸಿ ಕೆಲವರನ್ನು ಅರೆಸ್ಟ್ ಮಾಡಿ ತನಿಖೆ ಮಾಡುತ್ತಿದ್ದಾರೆ. ಸಿಐಡಿ ತನಿಖೆಯಿಂದ ಎಲ್ಲಾ ಹೊರ ಬರಲಿದೆ. ಇದು ರಾಜಕೀಯ ಪಿತೂರಿನಾ ರಾಜಕಾರಣನಾ..? ವೈಯಕ್ತಿಕ ದ್ವೇಷನಾ ಗೊತ್ತಾಗತ್ತೆ ಎಂದು ಹೇಳಿದರು.

ಈ ಪ್ರಕರಣದ ಹಿಂದೆ ಯಾರಿದ್ದಾರೆ ಗೊತ್ತಿಲ್ಲ. ನಾನಾಗಲಿ ನನ್ನ ತಂದೆ ಆಗಲಿ ಯಾರ ಹೆಸರನ್ನು ಹೇಳಿಲ್ಲ. ಆ ಪಕ್ಷ ಈ ಪಕ್ಷ ಯಾರಿದ್ದಾರೆ ಗೊತ್ತಿಲ್ಲ . ಈ ಪಿತೂರಿಯಿಂದ ಯಾರೇ ಇದ್ದರೂ ಒಳ್ಳೆದಾಗಲ್ಲ. ಮಹಾನಾಯಕ ಯಾರು ಗೊತ್ತಿಲ್ಲ. ಮಹಾನಾಯಕ ಅಂತ ಮೀಡಿಯಾ ಅವರೇ ಹೆಸರು ಕೊಟ್ಟಿರೋದು. ನೀವೇ ಯಾರು ಅಂತ ಹೇಳಿ. ರಮೇಶ್ ಜಾರಕಿಹೊಳಿ ಅವರು ಕೂಡ ಮಹಾನಾಯಕ ಯಾರು ಅಂತ ಹೆಸರು ಹೇಳಿಲ್ಲ ಎಂದು  ತಿಳಿಸಿದರು.

ನಿನ್ನೆ ಐಜಿ ಅವರಿಗೆ ಮನವಿ ಮಾಡಲು ಹೋಗಿದ್ದೆ. ಅವರು ಡೆಲ್ಲಿಗೆ ಹೋಗಿದ್ದರು. ಹೀಗಾಗಿ ಸಿಗಲಿಲ್ಲ. ಹೆಚ್ಚಿನ ಭದ್ರತೆ ಬಗ್ಗೆ ಲೆಟರ್ ಕೊಟ್ಟಿದ್ದೇನೆ. ಮುಂದೆ ಏನು ಮಾಡುತ್ತಾರೆ. ತನಿಖೆಯಿಂದ ಈ ಸಂಚಿನ ಸತ್ಯ ತಿಳಿಯಲಿದೆ ಎಂದು ಎಂ ಎಲ್ ಸಿ ರಾಜೇಂದ್ರ ತಿಳಿಸಿದರು.

ದೇವಸ್ಥಾನಗಳಿಗೆ ಬೇಟಿ: ಇದಕ್ಕೂ‌ಮೊದಲು  ಬೆಂಗಳೂರಿನಿಂದ ನೇರವಾಗಿ ಚಾಮುಂಡಿಬೆಟ್ಟಕ್ಕೆ ಹೋಗಿ ಚಾಮುಂಡೇಶ್ವರಿ ದರ್ಶನ ಪಡೆದರು. ಬಳಿಕ ನಂಜನಗೂಡಿಗೆ ತೆರಳಿ ನಂಜುಂಡೇಶ್ವರನ ದರ್ಶನ ಪಡೆದರು.

ಈ ಸಂದರ್ಭದಲ್ಲಿ ನಗರಸಭಾ ಅದ್ಯಕ್ಷ ಶ್ರೀಕಂಠಸ್ವಾಮಿ ಸ್ವಾಗತಿಸಿದರು.

Leave a Reply

Your email address will not be published. Required fields are marked *