ನೆಲಮಂಗಲ : ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷನೋರ್ವ ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಪಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. ನೆಲಮಂಗಲ ತಾಲೂಕಿನ ಹೊನ್ನೇನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುರುಳೀಧರ್ ಕೆ.ಎಂ ಅವರು ತಹಶೀಲ್ದಾರ್ ಸಹಿ ಮತ್ತು ಮೊಹರು ನಕಲಿ ಮಾಡಿ 20 ಲಕ್ಷ ಬೆಲೆಬಾಳುವ ನಿವೇಶನ ಪಡೆದಿದ್ದಾರೆ ಎನ್ನಲಾಗಿದೆ.
ಕೆಂಗಲ್ ಕೆಂಪೋಹಳ್ಳಿಯಲ್ಲಿ ನಿವೇಶನ ರಹಿತ ಫಲಾನುಭವಿಗಳಿಗೆ ಸರ್ವೆ ನಂ 25ರಲ್ಲಿ ಸರ್ಕಾರ ನಿವೇಶನ ಹಂಚಿಕೆ ಮಾಡಿತ್ತು. ನಿವೇಶನ ಹಂಚಿಕೆ ಆಗದಿದ್ದರೂ ಕೂಡ ಪಂಚಾಯತಿ ಮಾಜಿ ಅಧ್ಯಕ್ಷ ಮುರುಳೀಧರ್ ಕೆ.ಎಂ ತನ್ನ ಹೆಸರಿಗೆ 30×40 ನಿವೇಶನ ಬರೆದುಕೊಂಡಿದ್ದಾರೆ.

ಇದೀಗ ಹೊನ್ನೇನಹಳ್ಳಿ ಪಂಚಾಯತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಪಡೆದ ಮುರುಳೀಧರ್ ಕೆ.ಎಂ ವಿರುದ್ದ ನೆಲಮಂಗಲ ಕಾರ್ಯನಿರ್ವಾಕ ಅಧಿಕಾರಿಗೆ ಈಗಿನ PDO ರವಿಶಂಕರ್ ಎಂಬವರು ಪತ್ರದ ಮುಖೇನ ದೂರು ನೀಡಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆಗಿನ PDOನ್ನು ಬೆದರಿಸಿ ಮುರುಳೀಧರ್ 9/11 ನಿವೇಶನ ಪಡೆದಿರುವ ಬಗ್ಗೆ ಪತ್ರದಲ್ಲಿ ರವಿಶಂಕರ್ ಮಾಹಿತಿ ಬಿಚ್ಚಿಟ್ಟಿದ್ದಾರೆ.