ಕರ್ನಾಟಕ : ಕೇಂದ್ರ ಸರ್ಕಾರವು ತೆಗೆದುಕೊಂಡಿದ್ದ ನಿರ್ಧಾರಗಳಿಂದ ರಾಜ್ಯದಲ್ಲಿ ಮದ್ಯದ ಬೆಲೆ ಇಳಿಕೆಯಾಗಿತ್ತು. ಇದೀಗ ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರವು ಮದ್ಯದ ಬೆಲೆಯನ್ನು ಮೂರನೇ ಬಾರಿ ಹೆಚ್ಚಳ ಮಾಡಿದೆ. ಹೌದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ರಾಜ್ಯದ ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರವು ಭರ್ಜರಿ ಶಾಕ್ ನೀಡಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೊಂದು ಬಾರಿ ಮದ್ಯದ ಬೆಲೆ ಭರ್ಜರಿ ಹೆಚ್ಚಳವಾದಂತೆ ಆಗಿದೆ. ಕೇಂದ್ರದ ನಿರ್ಧಾರದಿಂದ ಮದ್ಯಪ್ರಿಯರು ತುಸು ಖುಷಿಯಾಗಿದ್ದರು. ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರವು ಹೊಸ ಶಾಕ್ ನೀಡಿದೆ.

ಮದ್ಯದ ದರ ಇಂದಿನಿಂದ ಹೆಚ್ಚಳದಿಂದ ಮದ್ಯಪ್ರಿಯರಿಗೆ ಹೊಸ ಶಾಕ್ ಎದುರಾಗಿದೆ. ಭಾರತೀಯ ಮದ್ಯಗಳ (ಐಎಂಎಲ್) ಹಾಗೂ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ಹೆಚ್ಚಿಸಿ ರಾಜ್ಯ ಸರ್ಕಾರವು ಮಂಗಳವಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಮದ್ಯ ಹಾಗೂ ಬಿಯರ್ಗಳ ಹೊಸ ಬೆಲೆಯು ಇಂದಿನಿಂದಲೇ ಜಾರಿಗೆ ಬರಲಿದೆ. ಕರ್ನಾಟಕದಲ್ಲಿ ಮಧ್ಯ ಬೆಲೆಯನ್ನು ಹೆಚ್ಚಳ ಮಾಡಬಾರದು ಎನ್ನುವ ಮದ್ಯ ಕಂಪನಿಗಳ ಮನವಿಯ ನಂತರವೂ ರಾಜ್ಯದಲ್ಲಿ ಮದ್ಯದ ಬೆಲೆ ಭರ್ಜರಿ ಹೆಚ್ಚಳವಾಗಿದೆ.
ಕಡಿಮೆ ಬೆಲೆಗೆ ಸಿಗುತ್ತಿದ್ದ ಮದ್ಯ ಇನ್ಮುಂದೆ ದುಬಾರಿ: ಇನ್ನು ಇಷ್ಟು ದಿನ ಕಡಿಮೆ ಬೆಲೆಗೆ ಸಿಗುತ್ತಿದ್ದ ಮದ್ಯವು ಇನ್ಮುಂದೆ ಭಾರೀ ದುಬಾರಿ ಆಗಲಿದೆ ಎಂದು ಹೇಳಲಾಗಿದೆ. ರಾಜ್ಯ ಸರ್ಕಾರವು ಎಇಡಿ ಹೆಚ್ಚಳ ಮಾಡಿರುವುದರಿಂದ ಇಷ್ಟು ದಿನ ಕಡಿಮೆ ಬೆಲೆಗೆ ಸಿಗುತ್ತಿದ್ದ ವಿವಿಧ ಪ್ರಮುಖ ಮದ್ಯಗಳು ಇನ್ಮುಂದೆ ದುಬಾರಿ ಆಗಲಿದೆ. ಕಡಿಮೆ ಬೆಲೆಗೆ ರಾಜ್ಯದಲ್ಲಿ ಸಿಗುತ್ತಿದ್ದ ಬ್ರಾಂಡಿ, ವಿಸ್ಕಿ, ಜಿನ್ ಹಾಗೂ ರಮ್ನ ಬೆಲೆ ಭರ್ಜರಿ ಹೆಚ್ಚಳವಾಗಲಿದೆ. ಇದರಿಂದ ಹೆಚ್ಚು ಕಿಕ್ ಬೇಕೆಂದರೆ ನೀವು ಹೆಚ್ಚು ದುಡ್ಡು ಕೊಡಬೇಕು. ಹೌದು ಕರ್ನಾಟಕದಲ್ಲಿ ಇಂದಿನಿಂದ ಮದ್ಯದ ಬೆಲೆ ದುಬಾರಿ ಆಗಲಿದೆ. 180 ಎಂಎಲ್ನ ಬಾಟಲಿ ಮತ್ತು ಸ್ಯಾಷೆಗಳ ಬೆಲೆಯಲ್ಲಿ ಗರಿಷ್ಠ ಬೆಲೆಯು 15 ರೂಪಯಿ ಹೆಚ್ಚಳವಾಗಲಿದೆ. ಈಗ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಐಎಂಎಲ್ಗಳಲ್ಲಿ ಒಟ್ಟು 18 ತೆರಿಗೆ ಸ್ಪ್ಯಾಬ್ಗಳಿವೆ. ಇನ್ನು ಎಇಡಿ ಏರಿಕೆ ಮಾಡಿರುವುದರಿಂದ ಪ್ರೀಮಿಯಂ ಇಲ್ಲವೇ ಬಿಯರ್ ಬ್ರಾಂಡ್ಗಳ ಬೆಲೆ ಹೆಚ್ಚಳವಾಗಲಿದೆ. ಈ ಬ್ರ್ಯಾಂಡ್ಗಳ ಉತ್ಪಾದನೆಗೆ ತಗುಲುವ ವೆಚ್ಚದ ಆಧಾರವನ್ನು ಅವಲಂಬಿಸಿ ಪ್ರತಿ ಬಾಟಲಿಗೆ ಬರೋಬ್ಬರಿ 5 ರೂಪಾಯಿಯಿಂದ 15 ಏರಿಕೆ ಆಗಲಿದೆ.