ಕೇವಲ 1 ದಿನ ITR ಗಡುವು ವಿಸ್ತರಣೆ: ಕೊನೆಯ ಕ್ಷಣದ ತೆರಿಗೆದಾರರಿಗೆ ಗಡುವು ವಿಸ್ತರಣೆ.

ಕೇವಲ 1 ದಿನ ITR ಗಡುವು ವಿಸ್ತರಣೆ: ಕೊನೆಯ ಕ್ಷಣದ ತೆರಿಗೆದಾರರಿಗೆ ಗಡುವು ವಿಸ್ತರಣೆ.

ದೆಹಲಿ – ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಕೆಗೆ ಹೊಂದಿದ್ದ ಗಡುವು ಮಾತ್ರ ಒಂದು ದಿನ ವಿಸ್ತರಿಸಲಾಗಿದೆ. ಮೊದಲಿಗೆ ಸೆಪ್ಟೆಂಬರ್ 15 ಕೊನೆಯ ದಿನಾಂಕವಾಗಿದ್ದರೆ, ಇದೀಗ ಸೆಪ್ಟೆಂಬರ್ 16 ರವರೆಗ ಕೊನೆಯ ಅವಕಾಶ ನೀಡಲಾಗಿದೆ.

ವೆಬ್‌ಸೈಟ್ ತಾಂತ್ರಿಕ ದೋಷದಿಂದ ಗಡವಿನ ಬದಲಾವಣೆ

ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ತಾಂತ್ರಿಕ ತೊಂದರೆಗಳು, ಸರ್ವರ್ ಕ್ರ್ಯಾಶ್, ಮತ್ತು ದೋಷಪೂರ್ಣ ಲಾಗಿನ್ ಸಮಸ್ಯೆಗಳು ಹದಗೆಡಿಸಿದ ಹಿನ್ನೆಲೆ, ಅನೇಕ ತೆರಿಗೆದಾರರು ಗಡುವು ವಿಸ್ತರಿಸಬೇಕೆಂದು ಮನವಿ ಸಲ್ಲಿಸಿದ್ದರು.

ಇದಕ್ಕೆ ಪ್ರತಿಯಾಗಿ, ಫೈನಾನ್ಸ್ ಮಂತ್ರಾಲಯ ಮತ್ತು ಆದಾಯ ತೆರಿಗೆ ಇಲಾಖೆ ಹಗುರವಾದ ನಿರ್ಧಾರ ಕೈಗೊಂಡು, ಕೆವಲ ಒಂದು ದಿನ ವಿಸ್ತರಣೆ ನೀಡಿದೆ.

ವಿಳಂಬವಾದರೆ ಏನು?

  • ₹1,000 ರಿಂದ ₹5,000 ರವರೆಗೆ ದಂಡ ವಿಧವಾಗಬಹುದು
  • ಬಾಕಿ ತೆರಿಗೆಯ ಮೇಲೆ ಪ್ರತಿ ತಿಂಗಳು ಶೇ.1 ರಷ್ಟು ಬಡ್ಡಿ (ಸೆಕ್ಷನ್ 234A ಅಡಿಯಲ್ಲಿ)
  • ಮರುಪಾವತಿಯಲ್ಲಿ ವಿಳಂಬ
  • ಮಾಹಿತಿ ಮರೆಮಾಚಿದರೆ ಅಥವಾ ತಪ್ಪಾಗಿ ನೀಡಿದರೆ ಜೈಲು ಶಿಕ್ಷೆಯವರೆಗೆ ಹೋಗಬಹುದು (3 ತಿಂಗಳಿಂದ 2 ವರ್ಷವರೆಗೆ)

ಆದಾಯ ತೆರಿಗೆ ಇಲಾಖೆಯ ಸೂಚನೆ:

ಕೊನೆಯ ಕ್ಷಣದ ತೊಂದರೆಗಳನ್ನು ತಪ್ಪಿಸಲು, ತೆರಿಗೆದಾರರು ತಮ್ಮ ITR ಅನ್ನು ತಕ್ಷಣ ಸಲ್ಲಿಸಿಕೊಳ್ಳಬೇಕು” ಎಂದು ಇಲಾಖೆ ಮನವಿ ಮಾಡಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *