ವಿಜಯ್ ರಾಘವೇಂದ್ರ ಅವರು ಪತ್ನಿ ಸ್ಪಂದನಾ ನಿಧನದ ಬಳಿಕ ಮರುಮದುವೆ ಸುದ್ದಿಗಳನ್ನು ನಿರಾಕರಿಸಿದ್ದಾರೆ. ಮೇಘನಾ ರಾಜ್ ಅವರೊಂದಿಗಿನ ಅವರ ಸ್ನೇಹವನ್ನು ತಿರುಚಿ ಹಬ್ಬಿಸಲಾದ ಸುಳ್ಳು ಸುದ್ದಿಗಳಿಂದ ಅವರಿಗೆ ಬೇಸರವಾಗಿದೆ. ಈ ಸುದ್ದಿಗಳಿಂದ ಅವರ ಕುಟುಂಬದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದ್ದಾರೆ.

‘ಚಿನ್ನಾರಿ ಮುತ್ತ’ ವಿಜಯ್ ರಾಘವೇಂದ್ರ ಅವರು ಪತ್ನಿಯನ್ನು ಕಳೆದುಕೊಂಡಿದ್ದಾರೆ. ಸ್ಪಂದನಾ ಅವರು 2023ರ ಆಗಸ್ಟ್ನಲ್ಲಿ ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ನಿಧನ ಹೊಂದಿದರು. ಇದಾದ ಬಳಿಕ ಅವರ ಎರಡನೇ ಮದುವೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಅವರ ಹೆಸರು ಹೆಚ್ಚು ತಳುಕು ಹಾಕಿಕೊಂಡಿದ್ದು ಮೇಘನಾ ರಾಜ್ ಜೊತೆ. ಈ ವಿಚಾರಗಳ ಬಗ್ಗೆ ವಿಜಯ್ ರಾಘವೇಂದ್ರ ಅವರು ಒಲ್ಲದ ಮನಸ್ಸಿನಿಂದ ಸ್ಪಷ್ಟೀಕರಣ ನೀಡಿದ್ದಾರೆ.
ಮೇಘನಾ ರಾಜ್ ಹಾಗೂ ವಿಜಯ್ ರಾಘವೇಂದ್ರ ಮಧ್ಯೆ ಒಳ್ಳೆಯ ಗೆಳೆತನ ಇದೆ. ಮೇಘನಾ ಅವರ ಪತಿ ಚಿರಂಜೀವಿ ಸರ್ಜಾ ಈ ಮೊದಲು ನಿಧನ ಹೊಂದಿದ್ದರು. ಈ ಕಾರಣದಿಂದಲೇ ಕೆಲ ಫ್ಯಾನ್ಸ್ ಇವರಿಬ್ಬರೂ ಮದುವೆ ಆದರೆ ಚೆನ್ನಾಗಿರುತ್ತದೆ ಎಂದುಕೊಂಡರು. ಕೆಲ ಯೂಟ್ಯೂಬರ್ಗಳು ಕೆಳ ಹಂತಕ್ಕೆ ಹೋಗಿ ಮೇಘನಾ ಹಾಗೂ ವಿಜಯ್ ವಿವಾಹ ಆಗುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಈ ವಿಚಾರ ವಿಜಯ್ಗೆ ಬೇಸರ ಮೂಡಿಸಿದೆ. ಅವರು ಎರಡನೇ ಮದುವೆ ಆಲೋನೆಯೇ ಇಲ್ಲ ಎಂದಿದ್ದಾರೆ.