ಬೆಂಗಳೂರು: ನಮ್ಮ ಮೆಟ್ರೋದ ಪಿಂಕ್ ಲೈನ್ ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ರೈಲು ಸಂಪರ್ಕ ಕಾಮಗಾರಿ ನಡೆಯುತ್ತಿದೆ. ನಾಗವಾರ ನಿಲ್ದಾಣದ ಕಟ್ ಮತ್ತು ಕವರ್ ಶಾಫ್ಟ್‌ನಲ್ಲಿ ತುಂಗಾ-ಟಿಬಿಎಂ (Tunga TBM) ಪೂರ್ಣ ಸುರಂಗ ಕೊರೆದು ಹೊರಬಂದಿದೆ.
ಸುರಂಗ ಕೊರೆಯುವ ಯಂತ್ರ ತುಂಗಾ ಟಿಬಿಎಂ ಸೌತ್ ಕಟ್ ಮತ್ತು ಕವರ್ ಶಾಫ್ಟ್ ನಲ್ಲಿ 936.6 ಮೀ ಸುರಂಗ ಕೊರೆಯುವ ಕಾಮಗಾರಿ ಪೂರ್ಣಗೊಳಿಸಿ ಹೊರಬಂದಿದೆ.
ಈ ಸುರಂಗ ಕೊರೆಯುವ ಯಂತ್ರ ಕಾಡುಗೊಂಡನಹಳ್ಳಿ ನಿಲ್ದಾಣದಲ್ಲಿ ಕಳೆದ ಫೆಬ್ರವರಿ 2ರಂದು ಕಾಮಗಾರಿ ಪ್ರಾರಂಭ ಮಾಡಿ ನಾಗವಾರ ನಿಲ್ದಾಣದ ಸೌತ್ ಕಟ್ ಮತ್ತು ಕವರ್ ಶಾಫ್ಟ್‌ನಲ್ಲಿ ಪೂರ್ಣಗೊಳಿಸಿದೆ.
ಒಟ್ಟಾರೆ ರೀಚ್-6ರ ಸುರಂಗ ಮಾರ್ಗಕ್ಕಾಗಿ ನಿಯೋಜಿಸಲಾದ 9 ಟಿಬಿಎಂಗಳಲ್ಲಿ ಇಲ್ಲಿಯವರೆಗೆ 8 ಟಿಬಿಎಂಗಳು ಸುರಂಗಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಿದೆ.
ಈ 3 ನೇ ಕಾರ್ಯಾಚರಣೆಯಲ್ಲಿ 936.6 ಮೀಟರ್‌ಗಳಷ್ಟು ಸುರಂಗವನ್ನು ಮಾಡಿದೆ. ಪ್ರಸ್ತುತ, Ph-2 ರಲ್ಲಿ ಮೆಟ್ರೊದ 20.99 ಕಿಮೀ ಸುರಂಗ ಮಾರ್ಗದಲ್ಲಿ 20.58 ಕಿ.ಮೀ. ಯುಜಿ ಲೈನ್ ಗಡುವು ಸೆಪ್ಟೆಂಬರ್ 2026 ಆಗಿದೆ.