ಇನ್ಮುಂದೆ ಹಳೆಯ ವಾಹನಗಳಿಗೆ Petrol ಹಾಕೊದಿಲ್ಲ || ಯಾಕೆ, ಎಲ್ಲಿ ಅಂತೀರಾ, ಈ ಸ್ಟೋರಿ ನೊಡಿ

ಇನ್ಮುಂದೆ ಹಳೆಯ ವಾಹನಗಳಿಗೆ Petrol ಹಾಕೊದಿಲ್ಲ || ಯಾಕೆ, ಎಲ್ಲಿ ಅಂತೀರಾ, ಈ ಸ್ಟೋರಿ ನೊಡಿ

ಭಾರತದ ಪ್ರಮುಖ ನಗರಗಳಲ್ಲಿ ವಾಹನಗಳ ವಯಸ್ಸಿನ ಬಗ್ಗೆ ವಿಭಿನ್ನ ನಿಯಮಗಳಿವೆ. ಕೆಲವು ಸ್ಥಳಗಳು ಮಾಲಿನ್ಯವನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದ್ದರೆ, ಇನ್ನು ಕೆಲವು ಸ್ಥಳಗಳು ರಾಷ್ಟ್ರೀಯ ವಾಹನ ಸ್ಕ್ರ್ಯಾಪ್ ನೀತಿಯ ಪ್ರಕಾರ ಕಾರ್ಯನಿರ್ವಹಿಸುತ್ತಿವೆ. ದೆಹಲಿ, ಮುಂಬೈ, ಬೆಂಗಳೂರು ಮತ್ತು ಕೋಲ್ಕತ್ತಾದಂತಹ ಟಾಪ್ 10 ನಗರಗಳಲ್ಲಿ ಹಳೆಯ ವಾಹನಗಳನ್ನು ಎಷ್ಟು ಸಮಯ ಓಡಿಸಬಹುದು ಎಂಬುದನ್ನು ವಿವರವಾಗಿ ಈ ವರದಿಯಲ್ಲಿ ನೋಡೋಣ.

ದೆಹಲಿಯಲ್ಲಿ ಅತ್ಯಂತ ಕಠಿಣ ನಿಯಮ ಜಾರಿ!: ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯವನ್ನು ನಿಯಂತ್ರಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್ ಕಠಿಣ ನಿಯಮಗಳನ್ನು ವಿಧಿಸಿವೆ. 2025 ಜುಲೈ 1ರಿಂದ ದೆಹಲಿ-ಎನ್ಸಿಆರ್ನಲ್ಲಿ ಹಳೆಯ ವಾಹನಗಳ ಮೇಲೆ ಕಠಿಣ ನಿಯಮಗಳು ಜಾರಿಗೆ ಬಂದಿವೆ. ಈಗ ಡೀಸೆಲ್ ವಾಹನವು 10 ವರ್ಷಗಳಿಗಿಂತ ಹೆಚ್ಚು ಹಳೆಯದಾಗಿದ್ದರೆ ಮತ್ತು ಪೆಟ್ರೋಲ್ ವಾಹನವು 15 ವರ್ಷಗಳಿಗಿಂತ ಹೆಚ್ಚು ಹಳೆಯದಾಗಿದ್ದರೆ ಅದನ್ನು ದೆಹಲಿ ರಸ್ತೆಗಳಲ್ಲಿ ಓಡಿಸಲು ಸಾಧ್ಯವಿಲ್ಲ. ಇದೀಗ ಅದನ್ನು ಮುಂದೂಡಲಾಗಿದ್ದರೂ ನವೆಂಬರ್ 1 ರಿಂದ ಮತ್ತೆ ಜಾರಿಗೆ ಬರುವ ಸಾಧ್ಯತೆಯಿದೆ.

ಇದಲ್ಲದೇ ಈ ವಾಹನಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ತುಂಬಲು ಸಾಧ್ಯವಿಲ್ಲ. ಈ ಹಳೆಯ ವಾಹನಗಳನ್ನು ಈಗ ಯಾರಾದರೂ ಓಡಿಸುತ್ತಿರುವುದು ಕಂಡುಬಂದರೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಚಲನ್ ನೀಡುವುದು ಅಥವಾ ಭಾರಿ ದಂಡ ವಿಧಿಸುವಂತಹ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆಟೋಮೆಟಿಕ್ ನಂಬರ್ ಪ್ಲೇಟ್ ರೀಡಿಂಗ್ ಕ್ಯಾಮೆರಾಗಳೊಂದಿಗೆ ಪೆಟ್ರೋಲ್ ಪಂಪ್ಗಳಲ್ಲಿ ವಾಹನದ ವಯಸ್ಸನ್ನು ಸಹ ಪರಿಶೀಲಿಸಲಾಗುತ್ತದೆ. ಇದರಿಂದ ಉಲ್ಲಂಘಿಸುವವರನ್ನು ತಕ್ಷಣವೇ ಕಂಡು ಹಿಡಿಯಬಹುದು.

ಮುಂಬೈನಲ್ಲಿ ಫಿಟ್ನೆಸ್ ಪರೀಕ್ಷೆ ಕಡ್ಡಾಯ: ರಾಷ್ಟ್ರೀಯ ವಾಹನ ಸ್ಕ್ರ್ಯಾಪ್ ನೀತಿ ಮಹಾರಾಷ್ಟ್ರದ ಮುಂಬೈನಲ್ಲಿ ಅನ್ವಯಿಸುತ್ತದೆ. ಇದರ ಪ್ರಕಾರ 15 ವರ್ಷಕ್ಕಿಂತ ಹಳೆಯದಾದ ಖಾಸಗಿ ವಾಹನಗಳು ಮತ್ತು 10 ವರ್ಷಕ್ಕಿಂತ ಹಳೆಯದಾದ ವಾಣಿಜ್ಯ ವಾಹನಗಳು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಬೇಕು. ವಾಹನವು ಪರೀಕ್ಷೆಯಲ್ಲಿ ಫೇಲ್ ಆದ್ರೆ ಅದನ್ನು ಸ್ಕ್ರ್ಯಾಪ್ ಮಾಡಬೇಕು. ಮುಂಬೈನಂತಹ ಜನದಟ್ಟಣೆಯ ನಗರದಲ್ಲಿ ಹಳೆಯ ವಾಹನಗಳನ್ನು ಓಡಿಸುವ ಮೊದಲು RTO ಯಿಂದ ಫಿಟ್ನೆಸ್ ಪ್ರಮಾಣಪತ್ರವನ್ನು ಪಡೆಯುವುದು ಕಡ್ಡಾಯವಾಗಿರುವುದು ಗಮನಿಸಬೇಕಾದ ಅಂಶ.

ಹೊಸ ನಿಯಮಗಳಿಗಾಗಿ ಕಾಯುತ್ತಿದೆ ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾ ಮತ್ತು ಹೌರಾದಲ್ಲಿ ವಾಹನಗಳ ವಯಸ್ಸಿನ ಕುರಿತು ಹೊಸ ನಿಯಮಗಳನ್ನು ಪ್ರಸ್ತಾಪಿಸಲಾಗಿದೆ. ಖಾಸಗಿ ವಾಹನಗಳಿಗೆ 20 ವರ್ಷಗಳ ವಯಸ್ಸಿನ ಮಿತಿಯನ್ನು NGT ಮೊದಲು ಪ್ರಸ್ತಾಪಿಸಲಾಗಿತ್ತು. ಆದರೆ ಅದನ್ನು ಇನ್ನೂ ಜಾರಿಗೆ ತಂದಿಲ್ಲ. ಪ್ರಸ್ತುತ ಕೋಲ್ಕತ್ತಾದಲ್ಲಿ 15 ವರ್ಷಕ್ಕಿಂತ ಹಳೆಯದಾದ ವಾಣಿಜ್ಯ ವಾಹನಗಳ ಮೇಲೆ ನಿಷೇಧವಿದೆ. ಹೊಸ ನಿಯಮಗಳು ಕೋಲ್ಕತ್ತಾದಲ್ಲಿ ಶೀಘ್ರದಲ್ಲೇ ಜಾರಿಗೆ ಬರಬಹುದು.

ಬೆಂಗಳೂರಿನ ಮೇಲೆ ಗ್ರೀನ್ ಟ್ಯಾಕ್ಸ್ ಹೊರೆ: ಕರ್ನಾಟಕದ ಬೆಂಗಳೂರಿನಲ್ಲಿ 15 ವರ್ಷಕ್ಕಿಂತ ಹಳೆಯ ವಾಹನಗಳು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗುವುದು ಕಡ್ಡಾಯವಾಗಿದೆ. ಕರ್ನಾಟಕ ಸರ್ಕಾರವು ಹಳೆಯ ವಾಹನಗಳ ಮೇಲೆ ಗ್ರೀನ್ ಟ್ಯಾಕ್ಸ್ ಸಹ ವಿಧಿಸಿದೆ. ನಿಮ್ಮ ವಾಹನವು 15 ವರ್ಷಕ್ಕಿಂತ ಹಳೆಯದಾಗಿದ್ದರೆ ನೀವು ಈ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಬೆಂಗಳೂರಿನಲ್ಲಿ ಯಾವುದೇ ಕಟ್ಟುನಿಟ್ಟಾದ ವಯಸ್ಸಿನ ಮಿತಿಯಿಲ್ಲದಿದ್ದರೂ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗುವುದು ಕಡ್ಡಾಯವಾಗಿದೆ. ವಾಹನವು ಪರೀಕ್ಷೆಯಲ್ಲಿ ಫೇಲ್ ಆದ್ರೆ ಅದನ್ನು ರಸ್ತೆಗಳಲ್ಲಿ ಓಡಿಸಲು ಅನುಮತಿಸಲಾಗುವುದಿಲ್ಲ ಎಂಬುದು ಗಮನಾರ್ಹ..

ಹೊಸ ವರ್ಷದಿಂದ ಹೈದರಾಬಾದ್ನಲ್ಲಿ ಹೊಸ ನಿಯಮ!: 2025 ಜನವರಿ 1ರಿಂದ ಹೈದರಾಬಾದ್ನಲ್ಲಿ ಹೊಸ ನಿಯಮ ಜಾರಿಗೆ ಬಂದಿದೆ. ಇದರ ಪ್ರಕಾರ 15 ವರ್ಷಕ್ಕಿಂತ ಹಳೆಯ ವಾಹನಗಳು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಲೇಬೇಕು. ಈ ಪರೀಕ್ಷೆಯಲ್ಲಿ ವಾಹನ ಫೇಲ್ ಆದ್ರೆ ಅದನ್ನು ರದ್ದುಗೊಳಿಸಬೇಕಾಗುತ್ತದೆ. ಸರ್ಕಾರಿ ವಾಹನಗಳ ವಿಷಯದಲ್ಲಿ ಈ ನಿಯಮವು ವಿಶೇಷವಾಗಿ ಕಠಿಣವಾಗಿದೆ. ಅವುಗಳ ಸ್ಥಿತಿ ಏನೇ ಇರಲಿ ಅವುಗಳ ವಯಸ್ಸಿನ ಮಿತಿ 15 ವರ್ಷಗಳು ಆಗಿರಲೇಬೇಕು.

Leave a Reply

Your email address will not be published. Required fields are marked *