ನೇಪಾಳ ಕಠ್ಮಂಡು ಏರ್ಪೋರ್ಟ್‌ನಲ್ಲಿ ವಿಮಾನ ಪತನ : 18 ಮಂದಿ ಸಾವು

ನೇಪಾಳ : ಪೈಲಟ್ ಹಾಗೂ ಸಿಬ್ಬಂದಿ ಸೇರಿ 19 ಪ್ರಯಾಣಿಕರಿದ್ದ​ ವಿಮಾನವೊಂದು ರನ್​ವೇನಿಂದ ಜಾರಿ ಪತನಗೊಂಡಿರುವ ಘಟನೆ ನೇಪಾಳದ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಸಂಭವಿಸಿತು. ಈ ದುರಂತದಲ್ಲಿ 18 ಜನ ಪ್ರಯಾಣಿಕರು ದುರ್ಮರಣ ಹೊಂದಿದ್ದಾರೆ. ಸ್ಥಳಕ್ಕೆ ತುರ್ತು ಸೇವೆಗಳ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.

ಇಲ್ಲಿನ ತ್ರಿಭುವನ್ ಏರ್​ಪೋರ್ಟ್​ನಿಂದ ದೇಶಿಯ ಶೌರ್ಯ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನ ಬೆಳಗ್ಗೆ ಪೋಖಾರಾಕ್ಕೆ ತೆರಳಲು ಟೇಕ್​ಆಫ್​ ಆಗುತ್ತಿತ್ತು. ಈ ವೇಳೆ, 11:15ರ ಸುಮಾರಿಗೆ ದಿಢೀರ್ ರನ್​ವೇನಿಂದ ಜಾರಿ ಪಕ್ಕದ ತಗ್ಗು ಪ್ರದೇಶಕ್ಕೆ ನುಗ್ಗಿ ಪತನಗೊಂಡು ಭಾರೀ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ವಿಮಾನ ನಿಲ್ದಾಣದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಭದ್ರತಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡರು.

Leave a Reply

Your email address will not be published. Required fields are marked *