Sandalwood || ಈ ನಟಿಯ ಅಂಕಪಟ್ಟಿ ವೈರಲ್

Sandalwood || ಈ ನಟಿಯ ಅಂಕಪಟ್ಟಿ ವೈರಲ್

ಪೊರ್ಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಾಯಕ ನಟಿ ಪ್ರಣಿತ ಅವರ ಹತ್ತನೇ ತರಗತಿಯ ಅಂಕಪಟ್ಟಿ ವೈರಲ್ ಆಗಿದೆ. ಜೀವನದ ದಿಕ್ಕನ್ನು ಸಂಪೂರ್ಣವಾಗಿ ಬದಲಿಸುವುದೇ ಎಸ್ ಎಸ್ ಎಲ್ ಸಿ ಪರೀಕ್ಷೆ ಈ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ತೆಗೆದುಕೊಂಡು ಮುಂದೆ ಸಾಗಿದರೆ ಓದು ಮುಂದುವರೆಯುತ್ತಿತ್ತು ಇಲ್ಲದಿದ್ದರೆ ಯಾವುದಾದರೂ ಕೆಲಸ ಹುಡುಕಿಕೊಳ್ಳುವುದು ಅನಿವಾರ್ಯವಾಗುತ್ತಿತ್ತು. ನಟ ನಟಿಯರು ಸೆಲೆಬ್ರಿಟಿಗಳ ಅಂಕಪಟ್ಟಿ ನೋಡುವುದು ಎಂದರೆ ಅದೇನು ಕುತೂಹಲ ಎಷ್ಟು ಅಂಕ ಅವರು ಪಡೆದುಕೊಂಡಿರಬಹುದು ಎಂದು ಎಲ್ಲರೂ ಗಮನಿಸುತ್ತಾರೆ. ಇದೀಗ ಈ ಸಾಲಿಗೆ ಪ್ರಣಿತ ಸುಭಾಷ್ ಅವರ ಅಂಕಪಟ್ಟಿ ಕೂಡ ಸೇರ್ಪಡೆಯಾಗಿದೆ. ಇವರು ICSE ಪಠ್ಯಕ್ರಮದಲ್ಲಿ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ ಪ್ರಣಿತ ಅವರು ರ್ಯಾಂಕ್ ವಿದ್ಯಾರ್ಥಿ ಎನ್ನುವುದು ಈ ಅಂಕ ಪಟ್ಟಿಯಿಂದ ಸ್ಪಷ್ಟವಾಗುತ್ತದೆ. ಪ್ರತಿ ವಿಷಯದಲ್ಲೂ ಅತಿ ಹೆಚ್ಚು ಅಂಕವನ್ನು ಪ್ರಣಿತ 10ನೇ ತರಗತಿಯಲ್ಲಿ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *