ಶಿವಮೊಗ್ಗ : ಕಾರು, ಆಟೋ ಹಾಗೂ ಬೈಕ್ಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಸಾಗರದ ಕಾಸ್ಪಡಿ ಹಾಗೂ ಹೊಸಗುಂದ ನಡುವೆ ನಿನ್ನೆ ತಡ ರಾತ್ರಿ ಸರಣಿ ಅಪಘಾತ ಸಂಭವಿಸಿದೆ.
ಸಾಗರ ತಾಲೂಕಿನ ಕೆಳದಿ ಗ್ರಾಮದ ನಿವಾಸಿಯಾಗಿರುವ ಬೈಕ್ ಸವಾರ ಸುಧೀಂದ್ರ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ತೀವ್ರವಾಗಿ ಗಾಯಗೊಂಡಿದ್ದ ಸಾಗರದ ನಿವಾಸಿ ಆಟೋ ಚಾಲಕ ರಾಘವೇಂದ್ರ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಬೈಕ್ ಸವಾರ ಸುಧೀಂದ್ರ ಸಾಗರದಿಂದ ಶಿವಮೊಗ್ಗಕ್ಕೆ ಬರುವಾಗ, ಆಟೋ ಚಾಲಕ ರಾಘವೇಂದ್ರ ತನ್ನ ಆಟೋದಲ್ಲಿ ಹಣಗೆರೆ ಕಟ್ಟೆಗೆ ಹೋಗಿ ವಾಪಸ್ ಸಾಗರಕ್ಕೆ ಬರುವಾಗ ಅಪಘಾತ ನಡೆದಿದೆ.
ಆಟೋದಲ್ಲಿದ್ದ ನಾಲ್ವರು ಗಾಯಗೊಂಡಿದ್ದು, ಇವರನ್ನು ಸಾಗರದ ಉಪವಿಭಾಗಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಿಂದ ಸುಮಾರು ಒಂದು ಗಂಟೆ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಬಳಿಕ ಪೊಲೀಸರು ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.