ಕಿಚ್ಚ ಸುದೀಪ್ ಅವರು ತಮ್ಮ ಹೊಸ ಚಿತ್ರ ‘ಕೆ47′ ಅನ್ನು ಘೋಷಿಸಿದ್ದಾರೆ. ಈ ಚಿತ್ರವನ್ನು ಕೇವಲ ಆರು ತಿಂಗಳಲ್ಲಿ ಪೂರ್ಣಗೊಳಿಸಿ ಡಿಸೆಂಬರ್ 25ರಂದು ಬಿಡುಗಡೆ ಮಾಡುವ ಗುರಿ ಹೊಂದಿದ್ದಾರೆ. ‘ಮ್ಯಾಕ್ಸ್’ ಚಿತ್ರದ ಯಶಸ್ಸಿನ ನಂತರ, ವಿಜಯ್ ಕಾರ್ತಿಕೇಯ್ ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.

ಕಿಚ್ಚ ಸುದೀಪ್ ಅವರು ಎನರ್ಜಿಟಿಕ್ ಆಗಿ ಇದ್ದಾರೆ. ಅವರು ವಿಶ್ರಾಂತಿ ಪಡೆಯದೆ ಎಡಬಿಡದೆ ಬಣ್ಣದ ಲೋಕದ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಈಗ ಅವರು ಇಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಕೆ 47’ ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾ ಘೋಷಣೆ ವೇಳೆ ಸುದೀಪ್ ಅವರು ಫ್ಯಾನ್ಸ್ಗೆ ಒಂದು ಸಿಹಿ ಸುದ್ದಿ ನೀಡಿದ್ದಾರೆ. ಕೇವಲ ಆರು ತಿಂಗಳಲ್ಲಿ ಸಿನಿಮಾ ಮಾಡಿ ಪ್ರೇಕ್ಷಕರ ಎದುರು ಇಡಲು ಅವರು ಪಣ ತೊಟ್ಟಿದ್ದಾರೆ.
ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ನಿರ್ದೇಶನ ಮಾಡಿದ್ದು ತಮಿಳಿನ ವಿಜಯ್ ಕಾರ್ತಿಕೇಯ ಅವರು. ಈಗ ಅವರ ಜೊತೆಯೇ ಸುದೀಪ್ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಜುಲೈ 7ರಿಂದ ಸಿನಿಮಾದ ಶೂಟ್ ತಮಿಳಿನಾಡಿನಲ್ಲಿ ಆರಂಭ ಆಗಲಿದೆ. ಈ ಸಿನಿಮಾನ ಡಿಸೆಂಬರ್ 25ಕ್ಕೆ ಪ್ರೇಕ್ಷಕರ ಎದುರು ಇಡುವ ಆಲೋಚನೆಯಲ್ಲಿ ಅವರಿದ್ದಾರೆ.
ಸುದೀಪ್ ಅವರು ಈಗಾಗಲೇ ‘ಬಿಲ್ಲ ರಂಗ ಬಾಷ’ ಚಿತ್ರದ ಶೂಟ್ನಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಅವರು ಬಿಗ್ ಬಾಸ್ ಕೂಡ ನಿರೂಪಣೆ ಮಾಡಲಿದ್ದಾರೆ. ಇವುಗಳ ಮಧ್ಯೆ ಅವರು ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಇದರ ಶೂಟಿಂಗ್ ಬಗ್ಗೆ ಹಾಗೂ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ.
‘ನಿಜಕ್ಕೂ ಟೈಟ್ ಶೆಡ್ಯೂಲ್ ಆಗಲಿದೆ. ಬಿಲ್ಲ ರಂಗ ಬಾಷ ಈ ವರ್ಷಕ್ಕೆ ರಿಲೀಸ್ ಆಗೋದಿಲ್ಲ. ಅದು ದೊಡ್ಡ ಪ್ರಾಜೆಕ್ಟ್. ಹೀಗಾಗಿ, ಈ ಸಿನಿಮಾ ಡಿಸೆಂಬರ್ 25ಕ್ಕೆ ರಿಲೀಸ್ ಮಾಡಬೇಕು ಎಂಬುದು ನಮ್ಮ ಹಠ. ಟೀಂನಲ್ಲಿ ಸಾಕಷ್ಟು ಎನರ್ಜಿ ಇದೆ. ಈ ಬಾರಿ ಯಾವುದೇ ಸ್ಯಾಟರ್ಡೇ, ಸಂಡೇ ಎನ್ನದೇ ಕೆಲಸ ಮಾಡಬೇಕು. ಆ ರೀತಿಯಲ್ಲಿ ಕೆಲಸ ಮಾಡುವ ಆಲೋಚನೆ ಇದೆ’ ಎಂದಿದ್ದಾರೆ ಅವರು.