ದೇವನಹಳ್ಳಿ || ಯುವಕರು ದುಷ್ಚಟಗಳಿಗೆ ಬಲಿಯಾಗದೇ ಕ್ರೀಡೆಗಳಲ್ಲಿ ತೊಡಗಿ

ದೇವನಹಳ್ಳಿ || ಯುವಕರು ದುಷ್ಚಟಗಳಿಗೆ ಬಲಿಯಾಗದೇ ಕ್ರೀಡೆಗಳಲ್ಲಿ ತೊಡಗಿ

ದೇವನಹಳ್ಳಿ : ತಾಲ್ಲೂಕು ವಿಜಯಪುರ ಪಟ್ಟಣದ ಸರ್ಕಾರಿ ಆಟದ ಮೈದಾನದಲ್ಲಿ ನಾಡಪ್ರಭು ಕೆಂಪೇಗೌಡರ ಗೆಳೆಯರ ಬಳಗದ ವತಿಯಿಂದ ನಾಲ್ಕನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿತ್ತು.

ನಾಡಪ್ರಭು ಕೆಂಪೇಗೌಡರ ಗೆಳೆಯರ ಬಳಗದ ವತಿಯಿಂದ ವಿಜಯಪುರ ಹೋಬಳಿಯ ಸಮುದಾಯದ ಯುವಕರಿಗೆ ಕ್ರೀಡಾಸ್ಪೂರ್ತಿ ನೀಡಲು ಐ.ಪಿ.ಎಲ್ ಮಾದರಿಯಲ್ಲಿ ತಂಡಗಳನ್ನು ಮಾಡಿ ಲೀಗ್ ಪಂದ್ಯಾವಳಿಯನ್ನು ನಡೆಸಿದರು.

ರಾಜ್ಯ ಒಕ್ಕಲಿಗರ ಸಂಘದ ಕಾರ್ಯದರ್ಶಿ ಕೋನಪ್ಪರೆಡ್ಡಿ ಮಾತನಾಡಿ, ಯುವಕರು ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ತೊಡಗಬೇಕು ದುಷ್ಚಟಗಳಿಂದ ದೂರವಿರಬೇಕು ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಜನಗಣತಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಒಂದು ಸಮುದಾಯ ಓಲೈಕೆಗೆ ಉಳಿದ ಸಮುದಾಯದಲ್ಲಿ ಉಒ ಜಾತಿಗಳನ್ನು ತೋರಿಸಿ ಒಡೆದು ಆಳುವ ನೀತಿ ಮಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಪ್ರತಿಭಟನೆ ಮಡಲು ಮುಂದಾಗುತ್ತೇವೆ ಎಂದು ಎಚ್ಚರಿಸಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಚಲನಚಿತ್ರ ನಿರ್ಮಾಪಕ ಉಮಾಪತಿ ಮಾತನಾಡಿ ನಮ್ಮ ಸಮುದಾಯದ ಯುವಕರು ಕ್ರೀಡೆಗಳಲ್ಲಿ ಭಾಗಿಯಾಗಿರುವುದು ಸಂತಸ ಒಳ್ಳೆಯ ಕೆಲಸಗಳಿಗೆ ರಾಜ್ಯ ಸಂಘದಿಂದ ಪೂರ್ಣ ಪ್ರಮಾಣದ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡರ ಗೆಳೆಯರ ಬಳಗದ ಪದಾಧಿಕಾರಿಗಳು ಹಾಗೂ ಟೂರ್ನಿಯ ಆಯೋಜಕರು ಇದ್ದರು.

Leave a Reply

Your email address will not be published. Required fields are marked *