ಭಕ್ತರ ಆರಾಧ್ಯ ದೇವಿ ಶ್ರೀ ದುರ್ಗಾ ಮಹೇಶ್ವರಿ ಅಮ್ಮನವರಿಗೆ ವಿಶೇಷ ಹೂವಿನಅಲಂಕಾರ, ಹೋಮ ಹವನ..

ಭಕ್ತರ ಆರಾಧ್ಯ ದೇವಿ ಶ್ರೀ ದುರ್ಗಾ ಮಹೇಶ್ವರಿ ಅಮ್ಮನವರಿಗೆ ವಿಶೇಷ ಹೂವಿನಅಲಂಕಾರ, ಹೋಮ ಹವನ..

ದೇವನಹಳ್ಳಿ ತಾಲ್ಲೂಕು ವಿಜಯಪುರ ಹೋಬಳಿಯ ಗಡ್ಡದನಾಯಕನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಭಕ್ತರ ಆರಾಧ್ಯ ದೇವಿ ಶ್ರೀ ದುರ್ಗಾ ಮಹೇಶ್ವರಿ ಅಮ್ಮನವರಿಗೆ ಪ್ರತಿ ತಿಂಗಳ ಅಮಾವಾಸ್ಯೆಯಂದು ವಿಶೇಷ ಹೂವಿನಅಲಂಕಾರ, ಹೋಮ ಹವನಗಳನ್ನು ಏರ್ಪಡಿಸಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಹೋಮದಲ್ಲಿ ಭಾಗವಹಿಸಿ ಅಮ್ಮನವರ ಆಶೀರ್ವಾದಕ್ಕೆ ಪಾತ್ರರಾದರು.

ದುರ್ಗಾ ಮಹೇಶ್ವರಿ ದೇವಾಲಯದ ಅರ್ಚಕ ಚಂದ್ರಶೇಖರ್ ಶರ್ಮ ಮಾತನಾಡಿ, ಆಶ್ವಜ ಮಾಸದ ಕೃಷ್ಣಪಕ್ಷ ಅಮಾವಾಸ್ಯೆಯಂದು ಅಮ್ಮನವರ ಸನ್ನಿಧಾನದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪ್ರತ್ಯಂಗಿರ ಹೋಮ ಮಾಡುತ್ತಿದ್ದು ಇದರ ಉಪಯೋಗವಾಗಿ ಸಂತಾನ ಭಾಗ್ಯ ದುಷ್ಟಶಕ್ತಿ ನಿವಾರಣೆಯಾಗುತ್ತದೆ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಪಕ್ಕದ ಜಿಲ್ಲೆ, ಹೊರ ರಾಜ್ಯಗಳಿಂದಲೂ ಅಮ್ಮನವರ ದರ್ಶನಕ್ಕಾಗಿ ಆಗಮಿಸುತ್ತಾರೆ. ಇದರ ಜೊತೆಯಲ್ಲಿ ಅಷ್ಟಮಿ ಚತುರ್ದಶಿಯಂದು ಚಂಡಿಕಾ ಪಾರಾಯಣ , ಪ್ರತಿ ಪೌರ್ಣಮಿಗೂ ಹಲವು ಪೂಜೆ ಹೋಮಗಳು ನಡೆಯುತ್ತವೆ ಎಂದು ತಿಳಿಸಿದರು.

ಇಲ್ಲಿನ ಮಹಿಮೆಗೆ ಯಾರು ತಮ್ಮಮನದಲ್ಲಿ ಬೇಡುವರೋ ಅದನ್ನು ಪೂರೈಸಿ ಭಕ್ತರನ್ನು ಆಕರ್ಷಿಸಿ ಮನೆಮಾತಾಗಿರುವ ದುರ್ಗಾ ದೇವಿಯನ್ನು ಒಮ್ಮೆಯಾದರೂ ನೋಡಿ ಆಶೀರ್ವಾದ ಪಡೆಯಲು ಭಕ್ತರುಆಗಮಿಸುತ್ತಲೇ ಇರುತ್ತಾರೆ, ತಮ್ಮ ಕಷ್ಟ ಕಾರ್ಪಣ್ಯಗಳಿಗೆ ತಾಯಿಯನ್ಬು ಆರಾಧಿಸಿದರೆ ಎಲ್ಲವೂ ಮಂಜಿನAತೆ ಕರಗುತ್ತವೆ ಎನ್ನುವುದು ಭಕ್ತರ ಮಾತಾಗಿದೆ.

Leave a Reply

Your email address will not be published. Required fields are marked *