ಬೆಂಗಳೂರು: ಬದುಕಿನಲ್ಲಿ ಜ್ಞಾನ ನೀಡಿದವರೇ, ಮರಣಾನಂತರವೂ ಸಮಾಜಕ್ಕೆ ಬೆಳಕು ನೀಡಿದ ಅದ್ದೂರಿ ವ್ಯಕ್ತಿತ್ವ. ಮಾಜಿ ಸಚಿವ ಹಾಗೂ ರಾಜಾಜಿನಗರದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರ ತಾಯಿ ಸುಶೀಲಮ್ಮ ಅವರು ದೇಹದಾನ ಮತ್ತು ನೇತ್ರದಾನ ಮಾಡಿ ನಿಜಾರ್ಥದಲ್ಲಿ “ಸಾರ್ಥಕ ಸಾವಿಗೆ” ನಾಂದಿ ಹಾಡಿದ್ದಾರೆ.
ಶಿಕ್ಷಕಿ, ತಾಯಿ, ಸಮಾಜಸೇವಕಿ – ಬದುಕು ಹಾಗೂ ಮರಣ ಎರಡರಲ್ಲಿಯೂ ದಾನ
ಸೆಪ್ಟೆಂಬರ್ 23 ರಂದು ವಯೋಸಹಜ ಅಸ್ವಸ್ಥತೆಯಿಂದ ನಿಧನರಾದ ಸುಶೀಲಮ್ಮ ಅವರು ಹಿರಿಯ ಶಿಕ್ಷಕಿಯಾಗಿದ್ದು, ದೀರ್ಘ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಮರಣಾನಂತರ, ಅವರ ನೇತ್ರಗಳನ್ನು ನಾರಾಯಣ ನೇತ್ರಾಲಯಕ್ಕೆ, ಮತ್ತು ದೇಹವನ್ನು ರಾಮಯ್ಯ ಮೆಡಿಕಲ್ ಕಾಲೇಜಿಗೆ ದಾನವಾಗಿ ನೀಡಲಾಗಿದೆ.
“ಇವು ನನ್ನ ತಾಯಿಗೆ ಕೊನೆಯ Certificates” – ಭಾವುಕರಾದ ಎಸ್. ಸುರೇಶ್ ಕುಮಾರ್
ತಮ್ಮ ತಾಯಿಯ ಮರಣದ ಸುದ್ದಿ ಹಂಚಿಕೊಂಡಿರುವ ಸುರೇಶ್ ಕುಮಾರ್, ತಮ್ಮ ಭಾವನಾತ್ಮಕ ಪೋಸ್ಟ್‌ನಲ್ಲಿ ಬರೆದಿದ್ದಾರೆ:
“ಮೊನ್ನೆ ನಮ್ಮನ್ನು ಬಿಟ್ಟು ತೆರಳಿದ ನನ್ನಮ್ಮ, ಸುಶೀಲಮ್ಮ ಟೀಚರ್ ಹೆಸರಿಗೆ ಸಿಕ್ಕ ಕೊನೆಯ CERTIFICATES – ನೇತ್ರದಾನ, ದೇಹದಾನ.”
ಅವರ ಈ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಹಲವರು ಈ ನಡೆಗೆ ಸಲಾಗುತೆ ವ್ಯಕ್ತಪಡಿಸಿದ್ದಾರೆ.
ಸಾರ್ಥಕ ಜೀವನದ ಸಾರ್ಥಕ ಅಂತ್ಯ
ಸುಶೀಲಮ್ಮ ಅವರು ಶಿಕ್ಷಣ ಕ್ಷೇತ್ರದಲ್ಲಿ ನೂರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿದ್ದರು. ಇದೀಗ, ಅವರ ದೇಹದಾನ ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಯನಕ್ಕೆ ಮಾರ್ಗವಾಗಲಿದೆ. ಇದರಿಂದಾಗಿ ಅವರ ಸೇವೆ ಸಾವಿನ ನಂತರವೂ ಮುಂದುವರಿಯಲಿದೆ.
For More Updates Join our WhatsApp Group :




