ಶ್ರೀರಂಗಪಟ್ಟಣ || ದಸರಾ ಕುಸ್ತಿ : ಅಖಾಡಕ್ಕಿಳಿದು ಮಹಿಳಾ ಪೈಲ್ವಾನರ ಸೆಣಸಾಟ

ಶ್ರೀರಂಗಪಟ್ಟಣ || ದಸರಾ ಕುಸ್ತಿ : ಅಖಾಡಕ್ಕಿಳಿದು ಮಹಿಳಾ ಪೈಲ್ವಾನರ ಸೆಣಸಾಟ

ಮಂಡ್ಯ: ದೇಶದೆಲ್ಲೆಡೆ ನಾಡಹಬ್ಬ ದಸರಾದ ಸಂಭ್ರಮ ಕಳೆಗಟ್ಟಿದೆ. ಐಸಿಹಾಸಿಕ ಶ್ರೀರಂಗಪಟ್ಟಣ 4 ದಿನದ ದಸರಾ ಅ.4ಕ್ಕೆ ಆರಂಭಗೊಂಡಿದ್ದು ಇಲ್ಲಿ ಕುಸ್ತಿ ಪ್ರಮುಖ ಆಕರ್ಷಣೆ. ದಸರಾದ ಅಂಗವಾಗಿ ಆಯೋಜನೆ ಮಾಡಿದ್ದ ಈ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯದ ಅನೇಕ ಪೈಲ್ವಾನರು ಪಾಲ್ಗೊಂಡಿದ್ದರು. ಅದರಲ್ಲೂ ಮಹಿಳಾ ಪೈಲ್ವಾನರ ಕುಸ್ತಿ ಪಂದ್ಯಾವಳಿ ಎಲ್ಲರನ್ನು ಆಕರ್ಷಿಸುತ್ತಿತ್ತು.

ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಐಸಿಹಾಸಿಕ ಶ್ರೀರಂಗಪಟ್ಟಣ ದಸರಾ ಅಂಗವಾಗಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಕುಸ್ತಿ ಪಂದ್ಯಾವಳಿಯನ್ನ ಆಯೋಜನೆ ಮಾಡಲಾಗಿತ್ತು. ಸುಮಾರು 60 ಪುರುಷ ಹಾಗೂ ಮಹಿಳಾ ಜೋಡಿ ಸ್ವರ್ಧಿಗಳು ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.

ಅದರಲ್ಲೂ ಮಹಿಳಾ ಪೈಲ್ವಾನರು ಅಖಾಡದಲ್ಲಿ ಇಳಿದು ಸೆಣಸಾಡಿದ್ದು, ಎಲ್ಲರನ್ನು ಆಕರ್ಷಿಸಿತು. ಈ ಪಂದ್ಯಾವಳಿಗೆ ಮಂಡ್ಯ, ಮೈಸೂರು, ರಾಮನಗರ, ದಾವಣಗೆರೆ, ಬೆಳಗಾವಿ ಸೇರಿ ರಾಜ್ಯದ ವಿವಿಧ ಕಡೆಗಳಿಂದ ಪುರುಷ ಹಾಗೂ ಮಹಿಳಾ ಪೈಲ್ವಾನರು ಆಗಮಿಸಿದ್ದರು.

Leave a Reply

Your email address will not be published. Required fields are marked *