ಸಾರಿಗೆ ನೌಕರರ ಮುಷ್ಕರ: ಕೋಲಾರದಲ್ಲಿ KSRTC ಬಸ್​ಗೆ ಕಲ್ಲು ತೂರಾಟ.

ಕೋಲಾರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕದಾದ್ಯಂತ ಸಾರಿಗೆ ನಿಗಮಗಳ ನೌಕರರು ಮುಷ್ಕರ ನಡೆಸುತ್ತಿದ್ದು, ರಾಜ್ಯದ ಹಲವೆಡೆ ಕೆಎಸ್​ಆರ್​ಟಿಸಿ ಸೇರಿ ಸಾರಿಗೆ ನಿಗಮಗಳ ಬಸ್ ಸಂಚಾರ ಭಾಗಶಃ ಸ್ಥಗಿತಗೊಂಡಿದೆ.…

ಹುಬ್ಬಳ್ಳಿ ನೇಹ ಹಿರೇಮಠ ಕೊ*ಲೆ ಪ್ರಕರಣ: ಹಂತಕನ ಜಾಮೀನು ಅರ್ಜಿ ವಜಾ.

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. 2024ರ ಏಪ್ರಿಲ್ 18ರಂದು ನಡೆದಿದ್ದ ನೇಹಾ ಹಿರೇಮಠ ಕೊಲೆ ಪ್ರಕರಣದ…

ಬಸ್ ಬಂದ್ ಎಫೆಕ್ಟ್ : ಮೆಟ್ರೋ ನಿಲ್ದಾಣದ ಮುಂದೆ ಪ್ರಯಾಣಿಕರ ಸಾಲು | KSRTC Strike Impact

ಬೆಂಗಳೂರು : ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಸಾರಿಗೆ ನೌಕರರು ಬಸ್ಗಳನ್ನು ರಸ್ತೆಗಿಳಿಸಿಲ್ಲ. ಸಾರಿಗೆ ನೌಕರರ ಮುಷ್ಕರದ ಎಫೆಕ್ಟ್ ಇದೀಗ ನಮ್ಮ ಮೆಟ್ರೋ ಪ್ರಯಾಣಿಕರ…

ಸಾರಿಗೆ ಮುಷ್ಕರ: ಹಲವೆಡೆ ರಸ್ತೆಗಿಳಿಯದ KSRTC, BMTC ಬಸ್ಗಳು

ಬೆಂಗಳೂರು: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದಾರೆ. ಇದರಿಂದಗಿ ಸಾರ್ವಜನಿಕರಿಗೆ ಆತಂಕ ಶುರುವಾಗಿದೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳನ್ನೇ ಅವಲಂಬಿಸಿರುವ ಜನರು ಕೆಲಸಗಳಿಗೆ, ಶಾಲೆಗಳಿಗೆ…

ಬಸ್ ಇಲ್ಲದ ಬಿಸಿ ಜನರ ಜೇಬಿಗೆ ಹೊಡೆತ : ದಿಢೀರ್ ಆಟೋ ದರ ಏರಿಕೆ || KSRTC Strike Impact

ಇಂದಿನಿಂದ ಸಾರಿಗೆ ನೌಕರರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಹೈಕೋರ್ಟ್​​ ಒಂದು ದಿನದ ತಡೆಯಾಜ್ಞೆ ನಡುವೆಯೂ ಬಸ್​​ಗಳ ಸಂಚಾರದಲ್ಲಿ ಕೆಲ ಗೊಂದಲ ಇದ್ದು, ಸಂಪೂರ್ಣ ಬಸ್​ಗಳು ರಸ್ತೆಗಿಳಿದಿಲ್ಲ.  ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಆಟೋ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ದಿಢೀರ್​ ಆಟೋ ದರ ಏರಿಕೆ ಮಾಡಿ, ಒಬ್ಬ ಪ್ರಯಾಣಿಕನಿದ್ದರೂ ಕೂಡ 300 ರೂ, 400 ರೂಗಳನ್ನು ವಸೂಲಿ ಮಾಡುತ್ತಿದ್ದಾರೆ. ಶಾಂತಿನಗರದಿಂದ ಜೀವನ್ ಭೀಮಾನಗರಕ್ಕೆ ತೆರಳಲು ಆಟೋ ಚಾಲಕರೊಬ್ಬರು ಒಬ್ಬ ಸಿಂಗಲ್ ಪ್ರಯಾಣಿಕನಿಂದ 350 ರೂಪಾಯಿಗಳನ್ನು ಡಿಮಾಂಡ್ ಮಾಡಿದ ಘಟನೆಯೊಂದು ಈ ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸಿದೆ. ಕೊನೆಗೆ, ಚರ್ಚೆಯ ಬಳಿಕ 250 ರೂಪಾಯಿಗಳಿಗೆ ಒಪ್ಪಿಕೊಂಡ ಚಾಲಕ, ಪ್ರಯಾಣಿಕನನ್ನು ಕರೆದೊಯ್ದಿದ್ದಾರೆ. ಇಲ್ಲಿ ಪ್ರಯಾಣಿಕ ತಮಿಳುನಾಡಿನಿಂದ ಬೆಂಗಳೂರಿಗೆ ಆಗಮಿಸಿದ್ದವರಾಗಿದ್ದು, ಸಾರಿಗೆ ಬಸ್‌ಗಳ ಸೇವೆ ಇಲ್ಲದಿರುವುದರಿಂದ ಆಟೋವನ್ನೇ ಆಶ್ರಯಿಸಬೇಕಾಗಿದೆ. ಆಟೋ ಚಾಲಕನು ದರ ಕೇಳಿದಾಗ ಪ್ರಯಾಣಿಕನಿಗೆ ಶಾಕ್​ ಆಗಿದ್ದು, ಕೊನೆಗೆ 250 ರೂಪಾಯಿಗಳನ್ನು ಪಾವತಿಸಿ ಪ್ರಯಾಣಿಸಿದ್ದಾರೆ. ಸಾಮಾನ್ಯವಾಗಿ, ಶಾಂತಿನಗರದಿಂದ ಜೀವನ್ ಭೀಮಾನಗರಕ್ಕೆ ಆಟೋ ದರ ಸುಮಾರು 100-150 ರೂಪಾಯಿಗಳಷ್ಟಿರುತ್ತದೆ. ಆದರೆ, ಮುಷ್ಕರದಿಂದಾಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ಆಟೋ ಚಾಲಕರು ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ದರವನ್ನು ಗಗನಕ್ಕೇರಿಸಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸೇರಿದಂತೆ ರಾಜ್ಯದ ಸಾರಿಗೆ ಘಟಕಗಳ ಸಿಬ್ಬಂದಿ, 38 ತಿಂಗಳ ವೇತನ ಬಾಕಿ, ವೇತನ ಪರಿಷ್ಕರಣೆ, ಮತ್ತು 2021ರ ಮುಷ್ಕರದ ಸಂದರ್ಭದಲ್ಲಿ ವಜಾಗೊಂಡ ನೌಕರರ ಮರುನೇಮಕಾತಿಗಾಗಿ ಈ ಹೋರಾಟಕ್ಕೆ ಕರೆ ನೀಡಿದ್ದಾರೆ. ಇದರಿಂದ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೆ ಭಾರೀ ಒತ್ತಡ ಉಂಟಾಗಿದ್ದು, ವಿಶೇಷವಾಗಿ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಪಡೆಯುವ ಮಹಿಳೆಯರಿಗೆ ತೊಂದರೆಯಾಗಿದೆ.

Government Jobs: ಆಯುರ್ವೇದ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ.

ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸಸ್ (CCRAS) ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಸಂಶೋಧನಾ ಅಧಿಕಾರಿ (ಆಯುರ್ವೇದ), ಸಹಾಯಕ ಸಂಶೋಧನಾ ಅಧಿಕಾರಿ, LDC,…

ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ; ಅರ್ಜಿ ಸಲ್ಲಿಸುವುದು ಹೇಗೆ..?

ಭಾರತೀಯ ನೌಕಾಪಡೆಯು ಶಾರ್ಟ್ ಸರ್ವಿಸ್ ಕಮಿಷನ್ ಕಾರ್ಯನಿರ್ವಾಹಕ ಶಾಖೆಯಲ್ಲಿ 15 ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಬಿಇ/ಬಿ.ಟೆಕ್ ಪದವೀಧರರು ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯು SSB ಸಂದರ್ಶನವನ್ನು ಒಳಗೊಂಡಿದೆ.…

ಈ ಐದು ಬಾಲಿವುಡ್ ಹೀರೋಗಳಿಗೆ ಸಿಕ್ಕೇ ಇಲ್ಲ ರಾಷ್ಟ್ರ ಪ್ರಶಸ್ತಿ.

ಶಾರುಖ್ ಖಾನ್ ರಾಷ್ಟ್ರೀಯ ಪ್ರಶಸ್ತಿ ಪಡೆದರೂ, ಅನೇಕ ಬಾಲಿವುಡ್ ದಿಗ್ಗಜರಿಗೆ ಈ ಗೌರವ ದೊರೆತಿಲ್ಲ. ಸಲ್ಮಾನ್ ಖಾನ್, ಧರ್ಮೇಂದ್ರ, ದೇವಾನಂದ್, ಶಮ್ಮಿ ಕಪೂರ್ ಮತ್ತು ಸಂಜಯ್ ದತ್…

‘ಕಾಂತಾರ’ ಚಿತ್ರಕ್ಕೆ ಬರಲಿದೆ ಮತ್ತೊಂದು ಪಾರ್ಟ್? ಟಾಲಿವುಡ್ ಖ್ಯಾತ ಹೀರೋಗೆ ಮಣೆ..?

ಕಾಂತಾರ ಚಿತ್ರದ ಭಾರೀ ಯಶಸ್ಸಿನ ಬಳಿಕ, ಚಿತ್ರಕ್ಕೆ ಪ್ರಿಕ್ವೆಲ್ ಬರುತ್ತಿದೆ.ಅಕ್ಟೋಬರ್ 2ರಂದು ಪ್ರಿಕ್ವೆಲ್ ಬಿಡುಗಡೆಯಾಗಲಿದೆ. ಸೀಕ್ವೆಲ್ನಲ್ಲಿ ಜೂನಿಯರ್ ಎನ್ಟಿಆರ್ ನಟಿಸುವ ಸಾಧ್ಯತೆಯಿದೆ ಎಂಬುದು ಸದ್ಯದ ಸುದ್ದಿ. ರಿಷಬ್…

ತುಮಕೂರು || ಪಕ್ಕದ ತಾಲ್ಲೂಕಿಗೆ ಅನುದಾನ, ನಮಗೆ ಇಲ್ಲ : ಸಾಮೂಹಿಕ ರಾಜೀನಾಮೆಗೆ ಮುಂದಾದ ಗ್ರಾ.ಪಂ ಸದಸ್ಯರು.

ತಿಪಟೂರು: ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಹಿಂಡಿಸ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಹಳ್ಳಿಗಳು ಪುನಶ್ಚೇತನ ಗಣಿಬಾಧಿತ ಪ್ರದೇಶಗಳಾಗಿವೆ. ಆದರೆ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಓ ವಸತಿ ರಹಿತರಿಗೆ…