‘ಕನ್ನಡ್ ಗೊತ್ತಿಲ್ಲ’ ಅನ್ನುವವರಿಗೆ ಮಾದರಿಯಾದ ಈ Tibetan ವ್ಯಕ್ತಿ:

'ಕನ್ನಡ್ ಗೊತ್ತಿಲ್ಲ' ಅನ್ನುವವರಿಗೆ ಮಾದರಿಯಾದ ಈ Tibetan ವ್ಯಕ್ತಿ:

ಬೆಂಗಳೂರು : ವಿಶ್ವದ ಲಿಪಿಗಳ ರಾಣಿ ಎಂದೇ ಕರೆಸಿಕೊಳ್ಳುವ ತಮಿಳು ಹಾಗೂ ಇತರ ಭಾಷೆಗಳಿಗಿಂತಲೂ ಮೊದಲೇ ಸ್ವಂತವಾಗಿ ಹುಟ್ಟಿರುವ ಕನ್ನಡ ಭಾಷೆ ಬಗ್ಗೆ ಅಗೌರವ, ಉದ್ಧಟತನದ ಬೆಳವಣಿಗೆ ನಾವು ನೋಡುತ್ತಲೇ ಇದ್ದೇವೆ. ಕನ್ನಡೇತರರು ರಾಜ್ಯದಲ್ಲಿ ನೆಲೆಸಿದರೂ ಸಹಿತ ಕನ್ನಡ ಮಾತನಾಡದೇ, ಕನ್ನಡಿಗರನ್ನು ಪದೇ ಪದೆ ಕೆಣಕಿದ್ದೇ ಹೆಚ್ಚು. ಹೀಗಿರುವ ಇಲ್ಲೋಬ್ಬ ಸಭ್ಯ ಟಿಬೆಟಿಯನ್ ವ್ಯಕ್ತಿಯು ಅಚ್ಚ ಕನ್ನಡವನ್ನು ಸ್ವಚ್ಚವಾಗಿ ಮಾತನಾಡುವ ಮೂಲಕ ಕನ್ನಡಿಗರು ಮನಸ್ಸು ಗೆದ್ದಿದ್ದಾರೆ. ಅಲ್ಲದೇ ಕನ್ನಡಿಗರು ತೋರು ಪ್ರೀತಿ ಬಗ್ಗೆ ಹೇಳಿರುವ ಅವರು, ಅನ್ಯಭಾಷಿಗರಿಗೆ ಕನ್ನಡ ಕಲಿಕೆಗೆ ಕಿವಿ ಮಾತು ಹೇಳಿದ್ದಾರೆ.

ಟಿಬೆಟಿಯನ್ ವ್ಯಕ್ತಿ ಮೈಕ್ ಮುಂದೆ ಸರಾಗವಾಗಿ ಕನ್ನಡ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕನ್ನಡ ವಿರೋಧಿ ಧೋರಣೆ, ನಿಲುವು, ಹೇಳಿಕೆ ಪ್ರಸಂಗಗಳ ಮಧ್ಯೆ ಇವರು ”ಕನ್ನಡ್ ಗೊತ್ತಿಲ್ಲ” ಎನ್ನುವವರಿಗೆ ಮಾದರಿಯಾಗಿ ನಿಲ್ಲುತ್ತಾರೆ. ಬೆಂಗಳೂರಿನಲ್ಲಿ ಕನ್ನಡ ಮಾತನಾಡಿದ ಟಿಬೆಟಿಯನ್ ವ್ಯಕ್ತಿಯ ವಿಡಿಯೋ ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *