ತುರುವೇಕೆರೆ || ದಲಿತ ಹಿತರಕ್ಷಣಾ ಸಭೆ ಗೊಂದಲದಲ್ಲಿ ಕೊನೆ

ತುರುವೇಕೆರೆ || ದಲಿತ ಹಿತರಕ್ಷಣಾ ಸಭೆ ಗೊಂದಲದಲ್ಲಿ ಕೊನೆ

ತುರುವೇಕೆರೆ: ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ತಾಲೂಕು ದಂಡಾಧಿಕಾರಿ ಕುಂ.ಇ. ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ದಲಿತ ಹಿತರಕ್ಷಣ ಹಾಗೂ ಕುಂದುಕೊರತೆ ಸಭೆಯನ್ನು ಪಟ್ಟಣದ ಬೇಟೆರಾಯಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು.

ಅಹ್ಮದ್ ಅವರು ಸಂವಿಧಾನ ಪೀಠಿಕೆ ಬೋಧಿಸುವ ಮೂಲಕ ಸಭೆಗೆ ಚಾಲನೆ ಕೊಟ್ಟರು. ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳ ಉಪಸ್ಥಿತಿ ಇಲ್ಲದನ್ನು ಕೆಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದಾಗ ಕೆಲವು ಕಾಲ ಸಭೆ ಗೊಂದಲದ ಗೂಡಾಗಿ ಮಾರ್ಪಟ್ಟಿತ್ತು. ಅವರ ಆಗಮನದ ನಂತರ ಸಭೆ ಮುಂದುವರೆಯಿತು.

ಸುಮಾರು ವರ್ಷಗಳಿಂದಲೂ ಪರಿಹಾರ ಸಿಕ್ಕಿಲ್ಲ, ಸರ್ಕಾರಕ್ಕೆ ವರದಿ ಸಲ್ಲಿಸಲು ಸಭೆ ನೆಡೆಸುತಿದ್ದೀರಾ  ಎಂದು ದಲಿತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಮಧ್ಯಪ್ರವೇಶಿಸಿದ ತಹಶೀಲ್ದಾರ್ ನಿಮ್ಮ ಬಗ್ಗೆ ನಮಗೆ ಕಾಳಜಿಯಿದೆ, ನಿಮ್ಮ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುದು ಎಂದು ತಿಳಿಸಿ ಸಮಾಧಾನ ಪಡಿಸಿ ಸಭೆಯನ್ನು ಮುಂದುವರೆಸಿದ ಘಟನೆ ನೆಡೆಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾದಿಕಾರಿ ಶಿವರಾಜಯ್ಯ, ಸಿ.ಪಿ.ಐ. ಲೋಹಿತ್, ಸಮಾಜಕಲ್ಯಾಣ ಇಲಾಖೆಯ ಶ್ರೀಧರ್, ದಲಿತ ಮುಖಂಡರಾದ  ಬಾಣಸಂದ್ರ ಕೃಷ್ಣ, ದಂಡಿನಶಿವರ ಕುಮಾರ್, ಗುರುದತ್, ಶಿವಣ್ಣ ಬಡಾವಣೆ, ಕುಣಿಕೇನಹಳ್ಳಿ ಜಗದೀಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *