ತಿಪಟೂರು : ಕಲ್ಲೇಶ್ವರ ಸ್ವಾಮಿ ಆವರಣದಲ್ಲಿದ್ದ ಅಯ್ಯಪ್ಪ ಸ್ವಾಮಿ ಶೆಡ್ಗೆ ತಾಲ್ಲೂಕು ಆಡಳಿತದಿಂದ ಬೀಗ ಮುದ್ರೆ ಮಾಡಿದ್ದು ರಾತ್ರೋ ರಾತ್ರಿ ಬೀಗ ತೆಗೆದು ಅಯ್ಯಪ್ಪ ಸ್ವಾಮಿ ವಿಗ್ರಹವನ್ನು ಸ್ಥಳಾಂತರ ಮಾಡಿರುವ ಘಟನೆ ಗುರುವಾರ ರಾತ್ರಿ ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಯ ಸಮಯದಲ್ಲಿ ನಡೆದಿದೆ.
ಅಯ್ಯಪ್ಪ ಸ್ವಾಮಿ ದೇವಾಸ್ಥಾನ ನಿರ್ಮಾಣಕ್ಕೆ ಹಾಗೂ ಒಂದು ಗುಂಟೆಯ ಜಾಗಕ್ಕೆ ಸಂಬಂಧಿಸಿದOತೆ ಗಲಾಟೆ ಗದ್ದಲಗಳು ಉಂಟಾದ ಹಿನ್ನಲೆಯಲ್ಲಿ ಮುಜರಾಯಿ ಇಲಾಖೆಯಿಂದ ತಾಲ್ಲೂಕು ಆಡಳಿತದ ಮೂಲಕ ತಾತ್ಕಾಲಿಕ ಶೆಡ್ನ ಟೆಂಟ್ಗೆ ಬೀಗ ಮುದ್ರೆಯನ್ನು ಕಳೆದ ತಿಂಗಳಲ್ಲಿ ಮಾಡಲಾಗಿತ್ತು ಆದರೆ ಕಳೆದ ಒಂದೆರಡು ದಿನಗಳಲ್ಲಿ ಅಯ್ಯಪ್ಪ ಸ್ವಾಮಿ ವಿಗ್ರಹ ಕಳವಾಗಿದೆ ಎಂದು ದೂರು ನೀಡಲು ಮುಂದಾಗಿದ್ದ ಕಸಬಾ ಕಂದಾಯ ನಿರೀಕ್ಷಕ ರಂಗಪ್ಪ ಪೋಲೀಸ್ಗೆ ದೂರು ನೀಡಲು ಸಹ ಮುಂದಾಗಿದ್ದರು ಆದರೆ ಶುಕ್ರವಾರ ಬೆಳಗಿನ ಸಮಯದಲ್ಲಿ 3 ರಿಂದ 4 ಗಂಟೆಯ ಸಮಯದಲ್ಲಿ ಕಸಬಾ ಹೋಬಳಿಯ ಗ್ರಾಮ ಆಡಳಿತಾಧಿಕಾರಿ ಹಾಗೂ ಕಂದಾಯ ನಿರೀಕ್ಷಕ ರಂಗಪ್ಪ ಮತ್ತು ಪೋಲೀಸ್ ಸಹಕಾರದಲ್ಲಿ ರಾತ್ರೋ ರಾತ್ರಿ ಅಯ್ಯಪ್ಪ ಸ್ವಾಮಿ ವಿಗ್ರಹವನ್ನು ಶೆಡ್ನಿಂದ ಸ್ಥಳಾಂತರ ಮಾಡಿರುತ್ತಾರೆ ಆದರೆ ರಾತ್ರೋ ರಾತ್ರಿ ದೇವರ ವಿಗ್ರಹವನ್ನು ತೆರವುಗೊಳಿಸಿದ್ದು ಸಾರ್ವಜನಿಕರಲ್ಲಿ ಬಾರೀ ಚರ್ಚೆಗೆ ಗ್ರಾಸವಾಗಿದ್ದು, ಅಯ್ಯಪ್ಪ ಸ್ವಾಮಿ ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.