ಅಧಿಕಾರಿಗಳ ಉದಾಸೀನದಿಂದ ಜನರ ಪ್ರಾಣ ಹೋದರೆ ಸಹಿಸಲ್ಲ: ಸಿಎಂ

ಬೆಂಗಳೂರು: ನಿಮ್ಮ ಉದಾಸೀನದಿಂದ ಜನರ ಅಮೂಲ್ಯ ಪ್ರಾಣ ಹೋದರೆ ಸಹಿಸಲ್ಲ. ನೀವು ರಸ್ತೆಗಳಿದು ಸುರಕ್ಷತೆ ಪರೀಕ್ಷಿಸಿ ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ

ವಿಧಾನಸೌಧದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗುತ್ತಿರುವ ರಸ್ತೆ ಅಪಘಾತಗಳ ಬಗ್ಗೆ ಗರಂ ಆಗಿದ್ದಾರೆ. ಅಧಿಕಾರಿಗಳ ಉದಾಸೀನದಿಂದ ಜನರ ಅಮೂಲ್ಯ ಪ್ರಾಣ ಹೋದರೆ ಸಹಿಸಲ್ಲ. ನೀವು ರಸ್ತೆಗಳಿದು ಸುರಕ್ಷತೆ ಪರೀಕ್ಷಿಸಬೇಕು. ಅಪಘಾತಗಳ ನಿಯಂತ್ರಣಕ್ಕೆ ಸಮನ್ವಯ ಅಗತ್ಯ ಅಪಘಾತ ವಲಯ ಮತ್ತು ಬ್ಲಾಕ್ ಸ್ಪಾಟ್ ಗುರುತಿಸಿ ಕೈಕಟ್ಟಿ ಕುಳಿತರೆ ನಿಮ್ಮ ಜವಾಬ್ದಾರಿ ಮುಗಿತಾ ಎಂದು ಸಿಎಂ ಪ್ರಶ್ನಿಸಿದರು

ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 34,916 ಅಪಘಾತಗಳು ಸಂಭವಿಸಿದ್ದು, 9943 ಜನರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿರುವ ರಸ್ತೆ ಸುರಕ್ತಾ ಸಮಿತಿಗಳು ಜಿಲ್ಲೆಯಲ್ಲಿ ಅಪಘಾತ ಪ್ರಮಾಣ ತಡೆಯಲು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕು. ಕಂದಾಯ, ಪೊಲೀಸ್‌, ಸಾರಿಗೆ, ನಗರ ಪಾಲಿಕೆ ಎಲ್ಲರೂ ಸಮನ್ವಯದಿಂದ ಕಾರ್ಯ ನಿರ್ವಹಿಸಿದರೆ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯ ಎಂದರು.

Leave a Reply

Your email address will not be published. Required fields are marked *