ಕೊರಟಗೆರೆ: ಬಡ ರೈತ ವಾಸವಿದ್ದ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಬೇಸಾಯಕ್ಕೆ ತಂದಿದ್ದ ಬಿತ್ತನೆ ಬೀಜ ರಸಗೊಬ್ಬರ ಸೇರಿದಂತೆ ದಿನಬಳಕೆ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾದ ದುರ್ಘಟನೆ ಕೊರಟಗೆರೆ ತಾಲೂಕಿನಲ್ಲಿ ಜರುಗಿದೆ.
ಕೊರಟಗೆರೆ ತಾಲೂಕಿನ ಕ್ಯಾಮೇನಹಳ್ಳಿ ಗ್ರಾಮ ಪಂಚಾಯತಿ ಕೇಂದ್ರ ಕ್ಯಾಮೇನಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ರೈತ ನಾಗರಾಜು ಎಂಬುವರಿಗೆ ಸೇರಿದ ಬಿತ್ತನೆ ಬೀಜ, ರಸಗೊಬ್ಬರ ಬೇಸಾಯಕ್ಕೆ ಸಂಬAಧಪಟ್ಟAತಹ ಪರಿಕರಗಳು ಸೇರಿದಂತೆ ದಿನಬಳಕೆ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.
ರೈತ ನಾಗರಾಜು ವಾಸಿಸುತ್ತಿದ್ದ ಗುಡಿಸಿಲಿಗೆ ಆಕಸ್ಮಿಕವಾಗಿ ಭಾನುವಾರ ಸಂಜೆ ೫ ಘಂಟೆಗೆ ಬೆಂಕಿ ಕಾಣಿಸಿಕೊಂಡು ಸಾರ್ವಜನಿಕರು ಬೆಂಕಿ ನಂದಿಸಲು ಪ್ರಯತ್ನ ಪಟ್ಟರಾದರೂ ಪ್ರಯೋಜನವಾಗದೆ ವ್ಯವಸಾಯಕ್ಕೆ ಸಂಬAಧಪಟ್ಟAತ ಪರಿಕರಗಳು ಸೇರಿದಂತೆ ಶೇಂಗಾ, ಮುಸುಕಿನ ಜೋಳ, ರಾಗಿ, ಅಳಸಂಡೆ ಸೇರಿದಂತೆ ಇನ್ನಿತರ ಬಿತ್ತನೆ ಬೀಜಗಳು ಸೇರಿದಂತೆ ದಿನ ಬಳಕೆ ವಸ್ತುಗಳು ಹಾಗೂ ರಸಗೊಬ್ಬರ ಬೆಂಕಿಯಿAದ ಸುಟ್ಟು ಬೂದಿಯಾಗಿದೆ ಎಂದು ರೈತ ನಾಗರಾಜು ಅಳಲು ತೋಡಿಕೊಂಡಿದ್ದಾರೆ.
ನಾಗರಾಜು ವಾಸಿಸುತ್ತಿದ್ದ ಗುಡಿಸಲಿಗೆ ಬೆಂಕಿ ತಗುಲಿದ್ದ ಸಂದರ್ಭದಲ್ಲಿ ಯಾರೊಬ್ಬರೂ ಇಲ್ಲದಿರುವುದರಿಂದ ಹೆಚ್ಚಿನ ಅನಾಹುತ ಸೇರಿದಂತೆ ಪ್ರಾಣಾಪಾಯಗಳಿಂದ ಪಾರಾಗಿದ್ದಾರೆ ಎನ್ನಲಾಗಿದ್ದು, ದಿನಬಳಕೆ ಸಾಮಗ್ರಿಗಳು, ಬಟ್ಟೆ ಬರೆ ಸೇರಿದಂತೆ ದಿನಸಿ ಸಾಮಗ್ರಿಗಳು ಸಹ ಬೆಂಕಿಗೆ ಸಿಲುಕಿ ಸುಟ್ಟು ಕರಕಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದ್ದು, ಬಡ ರೈತನಿಗೆ ಸರ್ಕಾರದ ಸಂಬAಧಪಟ್ಟAತ ಇಲಾಖೆಗಳು ಸಹಕಾರ ನೀಡಿ ರೈತನ ಸಹಕಾರಕ್ಕೆ ಬರಬೇಕು ಎಂದು ಸ್ಥಳೀಯ ಸಾರ್ವಜನಿಕರು ಒತ್ತಾಯಿಸಿದ್ದಾರೆ.