ತುಮಕೂರು : ಚಾಲಕನ ನಿಯಂತ್ರಣ ತಪ್ಪಿ ಹೇಮಾವತಿ ನಾಲೆಗೆ ಕೆಎಸ್ಆರ್ಟಿಸಿ ಬಸ್ ನುಗ್ಗಿದ್ದು ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರಾಗಿದ್ದಾರೆ. ಬಸ್ನಲ್ಲಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಅಮೃತೂರು ಹೋಬಳಿಯ ದೊಡ್ಡಕಲ್ಲಹಳ್ಳಿ ಬಳಿ ಘಟನೆ ನಡೆದಿದೆ. ಕುಣಿಗಲ್ ಕಡೆಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ನುಗ್ಗಿದೆ, ತುಂಬಿ ಹರಿಯುತ್ತಿದ್ದ ಹೇಮಾವತಿ ನಾಲೆ ಸದ್ಯ ಘಟನೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಘಟನೆಯಲ್ಲಿ ಗಾಯಗೊಂಡವರನ್ನು ಸಾರ್ವಜನಿಕ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Related Posts
18ನೇ ಲೋಕಸಭೆ : ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹತಾಬ್ ಪ್ರಮಾಣ ವಚನ
ನವದೆಹಲಿ: ಏಳು ಬಾರಿ ಸಂಸದರಾಗಿ ಆಯ್ಕೆಯಾದ ಭರ್ತೃಹರಿ ಮಹತಾಬ್ ಅವರು 18ನೇ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ…
ಕೀನ್ಯಾದಲ್ಲಿ 10 ಲಕ್ಷ ಜನರಿಗೆ ಆಹಾರ ಕೊರತೆ: 23 ಕೌಂಟಿಗಳಲ್ಲಿ ಕ್ಷಾಮ
ಕೀನ್ಯಾ : ದೇಶದ 47 ಕೌಂಟಿಗಳ ಪೈಕಿ 23 ಕೌಂಟಿಗಳಲ್ಲಿನ ಜನ ಹಸಿವಿನಿಂದ ಬಳಲುತ್ತಿದ್ದಾರೆ, ಕನಿಷ್ಠ ಒಂದು ದಶಲಕ್ಷ ಜನರು ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ, ಅವರಿಗೆ ತಕ್ಷಣದಲ್ಲಿ…
SC/ST ಕೆನೆಪದರಕ್ಕೆ ಅವಕಾಶವಿಲ್ಲ, ಸಂವಿಧಾನಕ್ಕೆ ಬದ್ದ: ಕೇಂದ್ರ ಸಚಿವ ಸಂಪುಟ
ನವದೆಹಲಿ: ಎಸ್ಸಿ, ಎಸ್ಟಿಯಲ್ಲಿ ಕೆನೆಪದರಕ್ಕೆ ಅವಕಾಶವಿಲ್ಲ. ಈ ವಿಚಾರದಲ್ಲಿ ಎನ್ಡಿಎ ಸರ್ಕಾರ ಸಂವಿಧಾನಕ್ಕೆ ಬದ್ಧವಾಗಿ ಇರಲಿದೆ ಎಂಬ ಅಭಿಪ್ರಾಯ ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಹೊರಹೊಮ್ಮಿದೆ.…