ತುಮಕೂರು || ಗ್ಯಾರಂಟಿ ತಂದ ಭಾಗ್ಯ : ಗೃಹಲಕ್ಷ್ಮಿ ಹಣದಲ್ಲಿ ಮಗಳಿಗೆ ಕಂಪ್ಯೂಟರ್

ತುಮಕೂರು || ಗ್ಯಾರಂಟಿ ತಂದ ಭಾಗ್ಯ : ಗೃಹಲಕ್ಷ್ಮಿ ಹಣದಲ್ಲಿ ಮಗಳಿಗೆ ಕಂಪ್ಯೂಟರ್

ತುಮಕೂರು : ರಾಜ್ಯ ಕಾಂಗ್ರೆಸ್ ನ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಮೆಕ್ಯಾನಿಕ್ ಕೆಲಸ ಮಾಡ್ತಿರುವ ಸಾಧಿಕ್ ಹಾಗೂ ನಗ್ಮಾ ಬಾನು ಸೇರಿ ಮಗಳಿಗೆ ಕಂಪ್ಯೂಟರ್ ಕೊಡಿಸಿದ್ದಾರೆ.

ತುಮಕೂರು ಜಿಲ್ಲೆ ತಿಪಟೂರು ಗಾಂಧಿ ನಗರದ ಕೆರಗೋಡಿ ವಾಸಿ ನಗ್ಮಾ ಬಾನು ಗೃಹಲಕ್ಷ್ಮಿ ಹಣದಲ್ಲಿ ಮಗಳಿಗೆ ಕಂಪ್ಯೂಟರ್ ಕೊಡಿಸಿದ್ದಾರೆ. ಗೃಹಲಕ್ಷ್ಮಿ ಹಣದ ಜೊತೆ ಸ್ಕಾಲರ್ ಶಿಪ್ ಹಣ ಕೂಡ ಸೇರಿಸಿ ಕಂಪ್ಯೂಟರ್ ಖರೀದಿಸಿದ್ದಾರೆ

ಮಗಳು ಸೈದಾ ಆಫೀಫಾಗೆ ಓದಲು ಅನುಕೂಲ ಆಗಲೆಂದು ತಾಯಿ ಕಂಪ್ಯೂಟರ್ ಕೊಡಿಸಿದ್ದಾರೆ. ಸರ್ಕಾರದ ಯೋಜನೆಯ ಈ ಸದ್ಭಳಕೆ ಇತರೆ ಪೋಷಕರಿಗೆ ಪ್ರೇರಣೆ ಯಾಗಿದೆ

Leave a Reply

Your email address will not be published. Required fields are marked *