ಮಾಂಸ ಮಾರಾಟಗಾರರಿಗೆ ಶಾಕ್ ಕೊಟ್ಟ ತುಮಕೂರು ಮಹಾನಗರ ಪಾಲಿಕೆ

ಮಾಂಸ ಮಾರಾಟಗಾರರಿಗೆ ಶಾಕ್ ಕೊಟ್ಟ ತುಮಕೂರು ಮಹಾನಗರ ಪಾಲಿಕೆ

ತುಮಕೂರು : ಮಹಾನಗರ ಪಾಲಿಕೆ ವ್ಯಾಪ್ತಿಯ ಕುರಿ/ಕೋಳಿ/ಮೀನು ಮಾಂಸ ಮಾರಾಟ ಉದ್ದಿಮೆದಾರರು ಮಾಂಸ ಮಾರಾಟ ಮಾಡಲು ಕಡ್ಡಾಯವಾಗಿ ಉದ್ದಿಮೆ ಪರವಾನಗಿ ಪಡೆಯಬೇಕೆಂದು ಪಾಲಿಕೆ ಆರೋಗ್ಯಾಧಿಕಾರಿ ಡಾ: ವಿರೇಶ್ ಕಲ್ಮಟ್ ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಉದ್ದಿಮೆ ಪರವಾನಗಿ ಪಡೆಯದೇ ಹಾಗೂ ನವೀಕರಣ ಮಾಡಿಸದೇ ಉದ್ದಿಮೆ ನಡೆಸುತ್ತಿರುವುದು ಕಂಡು ಬಂದಿದ್ದು, ಬಾಕಿ ಇರುವ ಉದ್ದಿಮೆ ಪರವಾನಗಿಯ ಶುಲ್ಕ(ಬೇಡಿಕೆ ಶುಲ್ಕ)ವನ್ನು ಪ್ರಸ್ತುತ ವರ್ಷದಲ್ಲಿ ಪಾವತಿಸಿ ಕಡ್ಡಾಯವಾಗಿ ಉದ್ದಿಮೆ ಪರವಾನಗಿ ಪಡೆದು ಉದ್ದಿಮೆಗಳನ್ನು ನಡೆಸತಕ್ಕದ್ದು.

ಮಾಂಸ ಮಾರಾಟ ಮಾಡುವಾಗ ಮಾಂಸವನ್ನು ಉದ್ದಿಮೆಯ ಮುಂಭಾಗ ಸಾರ್ವಜನಿಕರಿಗೆ ಪ್ರದರ್ಶಿಸುವ ಹಾಗೆ ನೇತು ಹಾಕದೇ, ಪರದೆ/ Partition ಅನ್ನು ಅಳವಡಿಸಿಕೊಂಡು ಅಥವಾ ಅಂಗಡಿಯ ಒಳಭಾಗದಲ್ಲಿ ಶೇಖರಿಸಿ ವ್ಯಾಪಾರ ನಡೆಸತಕ್ಕದ್ದು. ತಾವು ನಡೆಸುತ್ತಿರುವ ಉದ್ದಿಮೆಗೆ ಪಡೆದಿರುವ ಪರವಾನಗಿಯಲ್ಲಿ ನಮೂದಿಸಿದ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡತಕ್ಕದ್ದು. ತಮ್ಮ ಉದ್ದಿಮೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಸಂಗ್ರಹಣೆ/ಉಪಯೋಗ ಮಾಡಕೂಡದು ಹಾಗೂ ಪಾರ್ಸಲ್,  ಹೋಮ್ ಡೆಲವರಿ ಸೇವೆಗಳನ್ನು ನೀಡುವಾಗ ಪ್ಲಾಸ್ಟಿಕ್ ಬಳಕೆಯನ್ನು ಮಾಡುವಂತಿಲ್ಲ.

ಉದ್ದಿಮೆದಾರರು ಸದರಿ ನಿಯಮಗಳನ್ನು ಪಾಲಿಸದಿದ್ದಲ್ಲಿ ಸಂಬಂಧಿಸಿದವರ ಉದ್ದಿಮೆಯ ಮೇಲೆ ಕೆ.ಎಂ.ಸಿ ಕಾಯ್ದೆಯನ್ವಯ ಕ್ರಮವಹಿಸಿ ದಂಡ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *