ತುಮಕೂರು || ಶ್ರೀರಂಗ ಕುಡಿಯುವ ನೀರಿನ ಕೆರೆ ತುಂಬಿಸುವ ಯೋಜನೆ ಕುರಿತು ಸುದ್ದಿ ಗೋಷ್ಠಿ

ಶ್ರೀರಂಗ ಕುಡಿಯುವ ನೀರಿನ ಕೆರೆ ತುಂಬಿಸುವ ಯೋಜನೆ ಕುರಿತು ಸುದ್ದಿ ಗೋಷ್ಠಿ ( ತುಮಕೂರು ಜಿಲ್ಲೆಗೆ ಸಂಬಂಧಪಟ್ಟಿದೆ)

ತುಮಕೂರು :  ಮಾನ್ಯ ಉಪ ಮುಖ್ಯಮಂತ್ರಿಯವರ  ತಾಂತ್ರಿಕ ಸಲಹೆಗಾರರಾದ ಕೆ.ಜಯಪ್ರಕಾಶ್ ಅವರಿಂದ ಮಾಹಿತಿ ಬಿಡುಗಡೆ

ಶ್ರೀರಂಗ ಕುಡಿಯುವ ನೀರಿನ ಕೆರೆ ತುಂಬಿಸುವ ಯೋಜನೆಗೆ ನೀರನ್ನು ಖಾತರಿ ಪಡಿಸುವ ಸಲುವಾಗಿ ಗುರುತ್ವಾಕರ್ಷಣೆ ಕೊಳವೆಗಳ ಮೂಲಕ ಕುಡಿಯುವ ನೀರನ್ನು ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯ ಸರಪಳಿ 70.00ಕಿ.ಮೀ. ನಿಂದ ಮಾಗಡಿ ಮತ್ತು ಕುಣಿಗಲ್ ತಾಲ್ಲೂಕಿಗೆ ಸರಬರಾಜು ಮಾಡುವ (ಹಂತ-1 0.00ಕಿ.ಮೀ. ರಿಂದ 17.00 ಕಿ.ಮೀ. ವರೆಗೆ & ಹಂತ-2: 17.00 ಕಿ.ಮೀ. ರಿಂದ 34.54 ಕಿ.ಮೀ. ವರೆಗೆ) ಕಾಮಗಾರಿ ಕುರಿತು.

1. ಸದರಿ ಕಾಮಗಾರಿಯು ಮಾಗಡಿ ಮತ್ತು ಕುಣಿಗಲ್ ತಾಲ್ಲೂಕುಗಳಿಗೆ ಶ್ರೀರಂಗ ಕುಡಿಯುವ ನೀರಿನ ಯೋಜನೆಗೆ ನೀರನ್ನು ಒದಗಿಸುವ ಅಧ್ಯತಾ ವಲಯದ ಕಾಮಗಾರಿಯಾಗಿರುತ್ತದೆ. ಸದರಿ ಯೋಜನೆಯ (ಹಂತ-1: ಕಿ.ಮೀ 0.00 ರಿಂದ 17.00ಕಿ.ಮೀ ರವರೆಗೆ ಹಾಗೂ ಹಂತ-2: 17.00 ಕಿ.ಮೀ. ರಿಂದ 34.54 ಕಿ.ಮೀ. ವರೆಗೆ) ಯೋಜನಾ ವರದಿಗೆ ಸರ್ಕಾರದಿಂದ ದಿನಾಂಕ:12.01.2024ರಂದು ಆಡಳಿತಾತ್ಮಕ ಅನುಮೋದನೆ ದೊರೆತಿರುತ್ತದೆ. [ಅಂದಾಜು ಮೊತ್ತ ಒಟ್ಟು ರೂ .986.00ಕೋಟಿ)

2. ತುಮಕೂರು ಶಾಖಾ ನಾಲೆಯ ಸರಪಳಿ 70.00ಕಿ.ಮೀ. ನಿಂದ ಪ್ರತ್ಯೇಕವಾಗಿ ಗುರುತ್ವ ಪೈಪ್ ಲೈನ್ ಅನ್ನು ಅಳವಡಿಸುವ ಅಗತ್ಯತೆಯ ಕುರಿತು(Necessity of Gravity pipe line)

a) ತುಮಕೂರು ಶಾಖಾ ನಾಲೆಯ 10 ವರ್ಷಗಳ ಹರಿವಿನ ವಿವರಗಳನ್ನು (2014-15 ರಿಂದ 2024-25 ರ ಅವಧಿ) ಪರಿಶೀಲಿಸಿದಾಗ. ತುಮಕೂರು ಶಾಖಾ ನಾಲೆಯ 167 ಕಿ. ಮೀ ನಂತರ ಹರಿಯಬೇಕಾದ ನೀರಿನ ಪ್ರಮಾಣ 3.676 ಟಿ.ಎಂ.ಸಿ ಇದ್ದು, ವಾಸ್ತವವಾಗಿ ಹರಿದ ನೀರಿನ ಸರಾಸರಿ ಪ್ರಮಾಣವು ನಿಗಧಿಪಡಿಸಿದ ನೀರಿನ ಪ್ರಮಾಣದ ಕೇವಲ 10.73% ಮಾತ್ರ. ಇದ್ದು, 89.27% ದಷ್ಟು ಕೊರತೆ ಇರುತ್ತದೆ.

b) ಕುಣಿಗಲ್ ತಾಲ್ಲೂಕು ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಒಳಪಡುತ್ತಿದ್ದರೂ ಸಹಾ. ಒಂದು ದಶಕದಿಂದ ಸತತವಾಗಿ ಕಾಲುವೆಯು ಕೊನೆಯ ಭಾಗದಲ್ಲಿರುವ ಕಾರಣದಿಂದ ಹಂಚಿಕೆಯಾಗಿರುವ ನೀರನ್ನು ಪಡೆಯುತ್ತಿಲ್ಲ. ಆದರೆ ಮೇಲ್ಲಾಗದಲ್ಲಿರುವ ತಾಲ್ಲೂಕುಗಳು ತಮ್ಮ ನೀರಿನ ಹಂಚಿಕೆಯ ಪ್ರಮಾಣವನ್ನು ಪಡೆಯುವುದಲ್ಲದೆ, ಕೆಲವೊಮ್ಮೆ ಹೆಚ್ಚುವರಿ ನೀರಿನ ಪ್ರಯೋಜನ ಪಡೆಯುತ್ತಿವೆ.

ಕಾವೇರಿ ಜಲಾನಯನ ಪ್ರದೇಶಕ್ಕೆ ಒಳಪಡದ ತಾಲ್ಲೂಕುಗಳು (ಚಿಕ್ಕನಾಯಕನಹಳ್ಳಿ ಮತ್ತು ಶಿರಾ ತಾಲ್ಲೂಕು) ಯಾವುದೇ ಅಡೆತಡೆಗಳಿಲ್ಲದೆ ತಮ್ಮ ಪಾಲಿನ ನೀರನ್ನು ಪಡೆಯುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

C) ವಾಸ್ತವವಾಗಿ ಯಾವುದೇ ತತ್ವ ಹಾಗೂ ನಿಯಮಗಳನ್ವಯ ಕಾವೇರಿ ಜಲಾನಯನ ವ್ಯಾಪ್ತಿಗೆ ಒಳಪಡುವ ಪ್ರದೇಶವು ಜಲಾನಯನ ಪ್ರದೇಶಕ್ಕೆ ಒಳಪಡದ ಪ್ರದೇಶಕ್ಕೆ ಹೋಲಿಸಿದಾಗ ನೀರಿನ ಹಂಚಿಕೆಯಲ್ಲಿ ಮೊದಲ ಆದ್ಯತೆ ಪಡೆಯಬೇಕಿರುತ್ತದೆ. ಸದರಿ ತತ್ವದಂತೆ ಕುಣಿಗಲ್ ತಾಲ್ಲೂಕು ಆರಂಭದಿಂದಲೂ ನೀರನ್ನು ಪಡೆಯುವಲ್ಲಿ ವಂಚಿತವಾಗಿದ್ದು, ಈ ಸಮಸ್ಯೆಯನ್ನು ಪರಿಹರಿಸುವುದು ಮೊದಲ ಆದ್ಯತೆಯಾಗಿರುತ್ತದೆ. ಈ ಸಂಬಂಧ ಪರಿಶೋಧನೆ ನಡೆಸುವಾಗ ಸವಿವರವಾದ ಸಮೀಕ್ಷೆ.

ಯೋಜನೆ ಮತ್ತು ವಿನ್ಯಾಸದ ಮೂಲಕ ಹೊರಹೊಮ್ಮಿದ ಪರಿಹಾರವೆಂದರೆ, ಕುಣಿಗಲ್ ಮತ್ತು ಮಾಗಡಿ ತಾಲ್ಲೂಕಿನ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು ಪ್ರತ್ಯೇಕವಾಗಿ ತುಮಕೂರು ಶಾಖಾ ನಾಲೆಯ ಕಿ.ಮಿ 70.00 ರಿಂದ ಸ್ವತಂತ್ರ ಗುರುತ್ವ ಪೈಫೈನ್ ಮುಖಾಂತರ ನೀರು ಹರಿಸುವುದು.

D) ತುಮಕೂರು ಶಾಖಾ ನಾಲೆಯ ಕಿ.ಮಿ 70.00 ರ ಗುರುತ್ವ ಪೈಫೈನ್ ಒಂದು ಸ್ವತಂತ್ರ ಜಾಲವಾಗಿದ್ದು, ಇದು ಕುಣಿಗಲ್ (ಕುಡಿಯುವ ನೀರಿನ ಅಗತ್ಯಗಳು+ ನೀರಾವರಿ) ಮತ್ತು ಮಾಗಡಿ (ಕುಡಿಯುವ ನೀರಿನ ಅಗತ್ಯಗಳು) ತಾಲ್ಲೂಕುಗಳಿಗೆ ಹಂಚಿಕೆಯಾದ ನೀರನ್ನು, ತುಮಕೂರು ಶಾಖಾ ನಾಲೆಯ ಮೇಲ್ಬಾಗದಲ್ಲಿ ಬರುವ ತಾಲ್ಲೂಕುಗಳ ನೀರಿನ ಹಂಚಿಕೆಗೆ ಯಾವುದೇ ತೊಂದರೆ ಇಲ್ಲದಂತೆ, ಒದಗಿಸುವುದಾಗಿರುತ್ತದೆ. ಗುರುತ್ವ ಪೈಫೈನ್ನ ಉದ್ದೇಶವು ನಿರ್ದಿಷ್ಟ ಸಮಯದವರೆಗೆ ಅಗತ್ಯವಿರುವ ನೀರಿನ ಹರಿವನ್ನು ನಿಯಂತ್ರಿಸುವುದಾಗಿರುತ್ತದೆ. ಕುಣಿಗಲ್ ತಾಲ್ಲೂಕು ಕಾವೇರಿ ಜಲಾನಯನ ಪ್ರದೇಶದ ಭಾಗವಾಗಿದ್ದರೂ ಸಹ (ಮೂಲ ಫಲಾನುಭವಿಯಾಗಿದ್ದರೂ) ಪ್ರಾರಂಭದಿಂದಲೂ ನೀರಿನ ಹಂಚಿಕೆಯಿಂದ ವಂಚಿತವಾಗಿದೆ. ಇದನ್ನು ಸರಿದೂಗಿಸುವುದು ಈ ಯೋಜನೆಯ ಏಕೈಕ ಉದ್ದೇಶವಾಗಿದೆ.

e) ರಾಷ್ಟ್ರೀಯ ಜಲನೀತಿ ಮತ್ತು ರಾಜ್ಯ ಜಲನೀತಿ ಗಳೆರಡರಲ್ಲಿಯೂ ಕುಡಿಯುವ ನೀರಿನ ಅಗತ್ಯಗಳಿಗೆ ಮೊದಲ ಆದ್ಯತೆಯನ್ನು ನೀಡಬೇಕೆಂದು ಉಲ್ಲೇಖಿಸಿರುವುದರಿಂದ ಎಲ್ಲ ರಾಜ್ಯಗಳು ಅದನ್ನು ಪಾಲಿಸಬೇಕಿರುತ್ತದೆ.

f) ತುಮಕೂರು ಶಾಖಾ ನಾಲೆಯ ಕಿ.ಮೀ. 0.00 ರಿಂದ 167.00 ಕಿ.ಮೀವರೆಗಿನ ಆಧುನೀಕರಣ ಕಾಮಗಾರಿಯು ಕುಣಿಗಲ್ ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶಕ್ಕೆ ಪೂರ್ಣ ಅಥವಾ ಭಾಗಶಃ ನೀರನ್ನು ಖಾತರಿಪಡಿಸುತ್ತದೆ. ಆದರೆ ಶ್ರೀರಂಗ ಕುಡಿಯುವ ನೀರಿನ ಯೋಜನೆಯನ್ನು ಕುಣಿಗಲ್ ತಾಲ್ಲೂಕಿನ ತುಮಕೂರು ಶಾಖಾ ನಾಲೆಯ ಕೊನೆಯ ಭಾಗಕ್ಕೆ (ತು.ಶಾ.ನಾಲೆಯ ಕಿ.ಮೀ 167.00 ರಿಂದ 228.00ಕಿ.ಮೀ) ಸ್ಥಿರ ಮತ್ತು ನಿರಂತರವಾಗಿ ನೀರು ಪೂರೈಸಲು ವಿನ್ಯಾಸಗೊಳಿಸಲಾಗಿದೆ (ಇದು ರಾಷ್ಟ್ರೀಯ ಮತ್ತು ರಾಜ್ಯ ಜಲನೀತಿಗಳ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ). ಆದ್ದರಿಂದ, ನೀರು ಒದಗಿಸಲು ಪರ್ಯಾಯ ಮತ್ತು ಪ್ರತ್ಯೇಕ ಯೋಜನೆಯನ್ನು ಕೈಗೆತ್ತಿಕೊಂಡಿರುವುದು ಸೂಕ್ತವಾಗಿರುತ್ತದೆ.

g) ತುಮಕೂರು, ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳಿಂದ ತುಮಕೂರು ಜಿಲ್ಲೆಯು ಪಡೆಯುತ್ತಿರುವ ನೀರಿನ ಹಂಚಿಕೆಯ ವಿವರಗಳು ಈ ಕೆಳಗಿನಂತಿವೆ:

ತುಮಕೂರು -ಹೇಮಾವತಿ;19.95

ಎತ್ತಿನಹೊಳೆ;5.74

ಭದ್ರಾಮೇಲ್ದಂಡೆ;2.38

ಒಟ್ಟು: 28.07

3. ಸದರಿ ಕಾಮಗಾರಿಗೆ ದಿನಾಂಕ:03.02.2024ರಂದು ಟೆಂಡರ್ ಆಹ್ವಾನಿಸಿ, ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ತಾಂತ್ರಿಕ ಉಪ ಸಮಿತಿಯಿಂದ ತೀರುವಳಿ ಪಡೆದು. ದಿನಾಂಕ:27.02.2024ರಂದು ನಡೆದ 83ನೇ ನಿಗಮದ ನಿರ್ದೇಶಕರ ಮಂಡಳಿಯಲ್ಲಿ ಆರ್ಥಿಕ ಬಿಡ್‌ ಗೆ ಅನುಮೋದನೆ ಪಡೆಯಲಾಗಿರುತ್ತದೆ.

4. ಅದರಂತೆ. ದಿನಾಂಕ:29.02.2024ರಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಅನುಮೋದಿಸಿ. ಜ್ಞಾಪನಾ ಪತ್ರವನ್ನು ನಿಗಮದಿಂದ ದಿನಾಂಕ:05.03.2024ರಂದು ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ನೀಡಲಾಗಿರುತ್ತದೆ.

• ಗುತ್ತಿಗೆ ಮೊತ್ತ ರೂ.918.43ಕೋಟಿಗಳು

• ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾದ ದಿನಾಂಕ:05.03.2026.

5. ಸದರಿ ಕಾಮಗಾರಿಯನ್ನು ದಿನಾಂಕ:06.03.2024 ರಲ್ಲಿ ಗುತ್ತಿಗೆದಾರರು ಪ್ರಾರಂಭಿಸಿರುತ್ತಾರೆ. ಕಾಮಗಾರಿಯನ್ನು ಪ್ರಾರಂಭಿಸಿದ ಅವಧಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಹಾಗೂ ರೈತರು ಸದರಿ ಯೋಜನೆಯನ್ನು ವಿರೋಧಿಸಿ, ಪ್ರತಿಭಟನೆಗಳನ್ನು ಕೈಗೊಂಡು ಕಾಮಗಾರಿಗೆ ಅಡಚಣೆ ಉಂಟು ಮಾಡಿರುತ್ತಾರೆ. ಇದಲ್ಲದೆ ತುಮಕೂರು ಜಿಲ್ಲಾ ಕೆ.ಡಿ.ಪಿ. ಸಭೆಯಲ್ಲಿ ಜಿಲ್ಲೆಯ ಕೆಲವೊಂದು ಶಾಸಕರುಗಳು ಕಾಮಗಾರಿ ಕುರಿತು ಪ್ರತಿಭಟಿಸಿರುತ್ತಾರೆ.

• ಕಾಮಗಾರಿಯ ಆರ್ಥಿಕ ಪ್ರಗತಿ : 207.38 ಕೋಟಿ (22.57%).

7. ಸದರಿ ಪ್ರತಿಭಟನೆಗಳನ್ನು ಕುರಿತು ಹಾಗೂ ಯೋಜನೆಯ ಅನುಷ್ಠಾನದ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು ದಿನಾಂಕ:20.06.2024ರಂದು ಮಾನ್ಯ ಗೃಹ ಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಉಪಸ್ಥಿತಿಯಲ್ಲಿ ಯೋಜನೆಗೆ ಒಳಪಡುವ ಎಲ್ಲಾ ಜನಪ್ರತಿನಿಧಿಗಳ ಸಭೆಯನ್ನು ಕರೆದು ಕಾಮಗಾರಿಯ ಅಗತ್ಯತೆ ಬಗ್ಗೆ ತಾಂತ್ರಿಕ ತಜ್ಞರಿಂದ ಮಾಹಿತಿ ಒದಗಿಸಲಾಗಿತ್ತು. ಸಭೆಯಲ್ಲಿ ಕೆಲವು ಜನಪ್ರತಿನಿಧಿಗಳು ಕಾಮಗಾರಿಯ ಅಗತ್ಯತೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರಿಂದ, ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು ಸದರಿ ಯೋಜನೆಯ ಕಾರ್ಯಸಾಧ್ಯತೆ ಕುರಿತು ಒಂದು ತಾಂತ್ರಿಕ ಸಮಿತಿಯನ್ನು ರಚಿಸಿ, ಅಗತ್ಯತೆಯ ಬಗ್ಗೆ ಸಮಗ್ರ ವರದಿ ಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

8. ಸದರಿ ತಾಂತ್ರಿಕ ಸಮಿತಿಯು ಯೋಜನೆ ವ್ಯಾಪ್ತಿಯ ಸ್ಥಳ ಪರಿಶೀಲನೆಗಳನ್ನು ನಡೆಸಿ. ಸ್ಥಳೀಯ ಜನ ಪ್ರತಿನಿಧಿಗಳ, ಸಂಘ ಸಂಸ್ಥೆಗಳ ಅಹವಾಲುಗಳನ್ನು ಪಡೆದು. ಒಟ್ಟು 02 ಸ್ಥಳ ಪರಿವೀಕ್ಷಣೆ ಗಳ ಮತ್ತು ಒಟ್ಟು 7 ಸಭೆಗಳನ್ನು ನಡೆಸಿ, ಅಂತಿಮವಾಗಿ ಯೋಜನೆಯ ಕುರಿತು ವಿವರವಾದ ಅಧ್ಯಯನವನ್ನು ನಡೆಸಿ, ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಶಿಫಾರಸ್ಸುಗಳನ್ನೊಳಗೊಂಡ ವರದಿಯನ್ನು ಸಲ್ಲಿಸಿರುತ್ತಾರೆ.

9. ತಾಂತ್ರಿಕ ಸಮಿತಿ ವರದಿಯನ್ನು ದಿನಾಂಕ:27.09.2024 ರಂದು ಸರ್ಕಾರದ ಅವಗಾಹನೆಗೆ ಮತ್ತು ಮುಂದಿನ ಸೂಕ್ತ ಕ್ರಮಕ್ಕಾಗಿ ಸಲ್ಲಿಸಲಾಗಿದೆ.

10. ತಾಂತ್ರಿಕ ಸಮಿತಿಯ ಶಿಫಾರಸ್ಸಿನ ವರದಿಯ ಪ್ರಮುಖ ಅಂಶಗಳು (Recommendations of Technical Committee):

ಮಾಗಡಿ ಮತ್ತು ಕುಣಿಗಲ್ ತಾಲೂಕಿಗೆ ನೀರಿನ ಅಗತ್ಯತೆ, ರಾಷ್ಟ್ರೀಯ ಜಲನೀತಿಯ ನಿಬಂಧನೆಗಳ ಪ್ರಕಾರ ಕುಡಿಯುವ ನೀರಿನ ಅಗತ್ಯತೆಗಳಿಗೆ ನೀಡಲಾದ ಆದ್ಯತೆ, ಮಾತೃ ಜಲಾನಯನ ಪ್ರದೇಶಕ್ಕೆ ನೀಡಲಾಗುವ ಪ್ರಯೋಜನಗಳು, ಸಾಮಾಜಿಕ ಸಮಾನತೆ ಸ್ಥಾಪಿಸುವುದು ಮತ್ತು ಸಮಸ್ಯೆಗಳನ್ನು ಪರಿಹರಿಸುವುದು ಮುಂತಾದ ಪ್ರಮುಖ ಅಂಶಗಳನ್ನು ಅವಲೋಕಿಸಿ ತುಮಕೂರು ಶಾಖಾ ನಾಲೆಯ ಸರಪಳಿ:70.00ಕಿ.ಮೀ ನಲ್ಲಿ ಪ್ರಾರಂಭವಾಗುವ ಗುರುತ್ವ ಪೈಫೈನ್ ಅನ್ನು ಒದಗಿಸುವ * ಮೂಲಕ ಶ್ರೀರಂಗ ಕೆರೆ ತುಂಬುವ

ಯೋಜನೆಗೆ ನೀರು ಸರಬರಾಜು ಮಾಡುವುದನ್ನು ಖಾತರಿಪಡಿಸುವ ಚಾಲ್ತಿಯಲ್ಲಿರುವ ಕಾಮಗಾರಿಯ ಅಗತ್ಯತೆಯನ್ನು ಸಮರ್ಥಿಸಿ ಸಮಿತಿಯು ನೀಡಿರುವ ಶಿಫಾರಸ್ಸುಗಳು ಈ ಕೆಳಗಿನಂತಿವೆ.

1) ಕುಣಿಗಲ್ ಮತ್ತು ಮಾಗಡಿ ತಾಲ್ಲೂಕುಗಳ ಬೇಡಿಕೆಗಳನ್ನು ಪೂರೈಸಲು ಗುರುತ್ವಾಕರ್ಷಣೆಯ ಪೈಪ್‌ಲೈನ್ ಮೂಲಕ ವಿನ್ಯಾಸಿತ ಪ್ರಮಾಣದ ನೀರನ್ನು ಹರಿಸುವ ಸಂದರ್ಭದಲ್ಲಿ ಕಿಮೀ 70.00 ರಲ್ಲಿ SCADA ವ್ಯವಸ್ಥೆಯನ್ನು ಅಳವಡಿಸಿಕೊಂಡು ನಿರ್ವಹಿಸಲು ಯೋಜಿಸಲಾಗಿದೆ. ಇದರಿಂದ ಕಿಮೀ 70.00 ರಿಂದ 167 ರವರೆಗಿನ ಅವಶ್ಯಕ ಬೇಡಿಕೆಯನ್ನು ಯಾವುದೇ ಅಡಚಣೆಯಿಲ್ಲದೆ ಸುಲಭವಾಗಿ ಹರಿಸಬಹುದಾಗಿರುತ್ತದೆ. Flows are regulated and controlled electronically to extent of allocated share of 3.676TMC.

2) ಅನಧಿಕೃತ ನೀರಿನ ಬಳಕೆಯನ್ನು ತಡೆಗಟ್ಟಲು ಕರ್ನಾಟಕ ನೀರಾವರಿ ಕಾಯ್ದೆ 1965 ರ ದಿನಾಂಕ:16.08.2024ರಲ್ಲಿ ತಿದ್ದುಪಡಿಗೊಳಿಸಿರುವಂತೆ ಅನುಷ್ಠಾನಗೊಳಿಸಿಕೊಂಡು ನೀರಿನ ಅನಧಿಕೃತ ಬಳಕೆಯನ್ನು ತಡೆಗಟ್ಟಲು ಕ್ರಮ ವಹಿಸುವುದು.

3) ತುಮಕೂರು ಶಾಖಾ ನಾಲೆಯಲ್ಲಿ ನೀರು ನಿರ್ವಹಣೆಗೆ on and off ವ್ಯವಸ್ಥೆಯನ್ನು ಅಳವಡಿಸಿಕೊಂಡು, ಕಾರ್ಯ ನಿರ್ವಹಿಸುವಂತೆ ಶಿಫಾರಸ್ಸು ಮಾಡಿರುತ್ತದೆ.

11.  ತುಮಕೂರು ಶಾಖಾ ಕಾಲುವೆಯ 70ನೇ ಕಿ.ಮೀ.ನಲ್ಲಿ ಸ್ವತಂತ್ರ ಗುರುತ್ವ ಪೈಪ್-ಲೈನ್ ಕಾಮಗಾರಿ ಕೈಗೆತ್ತಿಕೊಂಡ ನಂತರವೂ ಸಹಾ ನೀರು ನಿರ್ವಹಣಾ ಕಾರ್ಯವಿಧಾನವನ್ನು ಸಮಿತಿಯು ಸೂಚಿಸಿದಂತೆ ಅನುಷ್ಠಾನಗೊಳಿಸಿದಲ್ಲಿ ತುಮಕೂರು ಶಾಖಾ ನಾಲೆಯ ನೀರು ಹರಿಯುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದಾಗಿದೆ.

Leave a Reply

Your email address will not be published. Required fields are marked *